ಪ್ರಧಾನಿ ಮೋದಿ 12 ವರ್ಷ ಪೂರೈಸಿ ಹೊಸ ದಾಖಲೆ ಬರೆದಿದ್ದಕ್ಕಾಗಿ ಗೋವಿಂದರಾಜನಗರದಲ್ಲಿ ಮಾಜಿ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.  
ರಾಜ್ಯ

ಮೋದಿ ಪ್ರಧಾನಿಯಾಗಿ 12 ವರ್ಷ ; ಗೋವಿಂದರಾಜನಗರದಲ್ಲಿ ವಿಶೇಷ ಪೂಜೆ, ಸಿಹಿ ಹಂಚಿಕೆ

ಪ್ರಮುಖ ಮುಖ್ಯಾಂಶಗಳು

  • ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಸಂಪೂರ್ಣ
  • ಗೋವಿಂದರಾಜನಗರದಲ್ಲಿ ವಿಶೇಷ ಪೂಜೆ, ಸಿಹಿ ಹಂಚಿಕೆ
  • ಉಮೇಶ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಬೆಂಗಳೂರು: ಪ್ರಧಾನಿನರೇಂದ್ರಮೋದಿ ಪ್ರಧಾನಿಯಾಗಿ12ವರ್ಷಪೂರೈಸಿದ ಹಿನ್ನಲೆಯಲ್ಲಿಗೋವಿಂದರಾಜನನಗರ ಮಂಡಲ ಬಿಜೆಪಿವತಿಯಿಂದ ಮಾರುತಿ ಮಂದಿರ ವಾರ್ಡ್,ನಾಗರಬಾವಿಮುಖ್ಯರಸ್ತೆ,ಕೆನರಾ ಬ್ಯಾಂಕ್ಕಾಲೋನಿಯಲ್ಲಿರುವ ಶ್ರೀವರಸಿದ್ಧಿವಿನಾಯಕ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಲಾಯಿತು.

ದಕ್ಷಿಣಜಿಲ್ಲಾ ಬಿಜೆಪಿ ಉಪಾಧ್ಯಕ್ಷ,ನಿಕಟಪೂರ್ವಬಿಬಿಎಂಪಿ ಸದಸ್ಯ ಕೆ.ಉಮೇಶ್ಶೆಟ್ಟಿ ನೇತೃತ್ವದಲ್ಲಿ ವಿಶೇಷಪೂಜೆ ಸಲ್ಲಿಸಿ ನಂತರ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.

ಈಸಂದರ್ಭದಲ್ಲಿ ಮಾತನಾಡಿದ ಕೆ.ಉಮೇಶ್ಶೆಟ್ಟಿ, ದೇಶಮೊದಲು, ನಂತರಪಕ್ಷ ಎಂಬ ರಾಷ್ಟ್ರ ಭಕ್ತಿ ಕಲಿಸಿದಪಕ್ಷ ಬಿಜೆಪಿ.ವಿಶ್ವದಲ್ಲಿಅತಿ ಹೆಚ್ಚು ಸದಸ್ಯತ್ವ ಹೊಂದಿರುವಖ್ಯಾತಿ ಬಿಜೆಪಿ ಪಕ್ಷಕ್ಕಿದೆ.ಟೀ ಮಾರುವವ್ಯಕ್ತಿಗೆ ದೇಶದ ಪ್ರಧಾನಿಯಾಗುವಅವಕಾಶ ನೀಡಿದ್ದು ಬಿಜೆಪಿ.ವಿಶ್ವದ ಬಲಿಷ್ಠಪ್ರಧಾನಿ ಎಂಬ ಹೆಗ್ಗಳಿಕೆ ಇರುವಪ್ರಧಾನಿ ನರೇಂದ್ರ ಮೋದಿರವರು12ವರ್ಷಪೂರೈಸುವ ಮೂಲಕ ಹೊಸ ದಾಖಲೆನಿರ್ಮಿಸಿದ್ದಾರೆ ಎಂದರು.

ಮಂಡಲಅಧ್ಯಕ್ಷರಾದ ಎನ್.ಬಿ.ಮಂಜುನಾಥ್,ಬಿಜೆಪಿ ಮುಖಂಡರುಗಳಾದಕ್ರಾಂತಿ ರಾಜು,ದೊಡ್ಡವೀರಯ್ಯ,ವಸಂತ್ ಕುಮಾರ್ಭವಾನಿ, ಎಸ್.ರಾಜು,ನಂಜಪ್ಪ,ನರಸಿಂಹಮೂರ್ತಿ,ನೀರಜ್ ಕಾಮತ್,ಜಗದೀಶ್.ಪಿ,ಪ್ರಸಿದ್ದ್ ಉಮೇಶ್ ಶೆಟ್ಟಿ,ಅಭಿಷೇಕ್,ಗಿರೀಶ್ ಕಾಮತ್,ರಮೇಶ್ ಕಿಣಿ,ನಾರಾಯಣ,ಹೇಮಂತ್,ರಾಘವೇಂದ್ರ,ಕನ್ನಡ ಮಂಜುಹಾಗೂ ನೂರಾರು ಬಿಜೆಪಿ ಕಾರ್ಯಕರ್ತರುಪಾಲ್ಗೊಂಡಿದ್ದರು.