Modern sheep and goat breeding center to be established soon
ಚಿಕ್ಕನಾಯಕನಹಳ್ಳಿ : ತಾಲೂಕಿನ ರೈತರಿಗಾಗಿ ಕುರಿ ಮೇಕೆ ವಾರಾಟ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಪಟ್ಟಣದ ಉಪ ಕೃಷಿ ಉತ್ಪನ್ನ ವಾರುಕಟ್ಟೆ ಸಮಿತಿಯ ಆವರಣದಲ್ಲಿ ಗುರುವಾರ ಕುರಿ ಮೇಕೆ ವಾರುಕಟ್ಟೆ ನಿರ್ಮಿಸಲು ಸ್ಥಳ ವೀಕ್ಷಣೆ ವಾಡಿ ವಾತನಾಡಿ, ತಾಲೂಕಿನಲ್ಲಿ ಬಹುತೇಕ ರೈತರು ಕೃಷಿ ಚಟುವಟಿಕೆಗಳ ನಡುವೆ ಕುರಿಸಾಕಣೆ ವಾಡುತ್ತಿದ್ದು, ಇವರಿಗೆ ಸರಿಯಾದ ವಾರುಕಟ್ಟೆ ಇಲ್ಲದೆ ತೊಂದರೆಯಾಗಿತ್ತಿದೆ. ಇದನ್ನು ಮನಗಂಡು ಸುಸಜ್ಜಿತ ವಾರುಕಟ್ಟೆ ನಿರ್ಮಿಸಲಾಗುವುದು ಎಂದರು.
ಗಣಿಬಾದಿತ ಪ್ರದೇಶಾಭಿವೃದ್ಧಿ ಯೋಜನೆಯಡಿ 2 ಎಕರೆ ವಿಸ್ತೀರ್ಣದಲ್ಲಿ 1.6 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ವಾರುಕಟ್ಟೆ ನಿರ್ಮಿಸಲಾಗುವುದು. ಇದಕ್ಕೆ ಸೂಕ್ತ ಜಾಗ ಕೃಷಿ ವಾರುಕಟ್ಟೆ ಆವರಣದಲ್ಲಿ ಗುರುತಿಸಲು ಭೇಟಿ ನೀಡಿದ್ದು, ಈ ಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪಶುಸಂಗೋಪನಾ ಇಲಾಖೆಯ ಕಾಂತರಾಜು ವಾತನಾಡಿ, ತಾಲೂಕಿನಲ್ಲಿ ಹೆಚ್ಚು ಜನರು ಕುರಿ, ಮೇಕೆಗಳನ್ನು ಸಾಕುವ ಕುರಿಗಾಹಿಗಳಿದ್ದು, ಅವುಗಳನ್ನು ಉತ್ತಮ ಬೆಲೆಗೆ ವಾರಾಟ ವಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಲ್ಲಿ ಮದ್ಯವರ್ತಿಗಳ ಹಾವಳಿಯಿಂದಾಗಿ ರೈತರಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಈ ವಾರುಕಟ್ಟೆಯಿಂದಾಗಿ ರೈತರಿಗೆ ಕುರಿಗಾಹಿಗಳಿಗೆ ಅನುಕೂಲವಾಗಲಿದೆ ಎಂದರು.