ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪಪಂ ಅಧ್ಯಕ್ಷ ಲೀಲಾವತಿ ಮುಧೋಳ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಪಪಂ ಮುಖ್ಯಾಧಿಕಾರಿ ನಾಗೇಶ, ಆಡಳಿತ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರೆಡ್ಡಿ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸದಸ್ಯ ಸಿದ್ದು ಉಳ್ಳಾಗಡ್ಡಿ, ವೀರಯ್ಯ ತೋಂಟದಾರ್ಯಮಠ ಇದ್ದರು. 
ರಾಜ್ಯ

ಮೊಬೈಲ್ ವಾಹನ, 79ಸಿಬ್ಬಂದಿ ನಿಯೋಜನೆ

JAGADEESH KUMBAR
ಕುಕನೂರು: ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.
 ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ 1635 ಮಕ್ಕಳಿದ್ದು, ವ್ಯಾಕ್ಸಿನ್ ಹಾಕಲು 18ಬೂತ್ ಜತೆಗೆ ಮೊಬೈಲ್ ವಾಹನ ನೀಡಲಾಗಿದೆ. 79ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು. 
ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪಪಂ ಅಧ್ಯಕ್ಷ ಲೀಲಾವತಿ ಮುಧೋಳ ಅವರು ಮಗುವಿಗೆ ಪೋಲಿಯೋ ಹಾಕುವ ಮೂಲಕ ಭಾನುವಾರ ಚಾಲನೆ ನೀಡಿದರು. 
ಆಡಳಿತ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರೆಡ್ಡಿ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸದಸ್ಯ ಸಿದ್ದು ಉಳ್ಳಾಗಡ್ಡಿ, ವೀರಯ್ಯ ತೋಂಟದಾರ್ಯಮಠ, ರಶೀದ್ ಮುಬಾರಕ್, ವಕೀಲ ರಮೇಶ ಗಜಕೋಶ, ಸಿಬ್ಬಂದಿ ಬಸವರಾಜ ಆರುಬೆರಳಿನ್, ಗವಿಸಿದ್ದಪ್ಪ ಉಪ್ಪಾರ, ಕಳಕಪ್ಪ ಕುಂಬಾರ ಇತರರಿದ್ದರು.
ಸಂಜಯ ನಗರ: ಶ್ರೀ ಚಳ್ಳೇಶ್ವರ ದೇವಸ್ಥಾನ ಎದುರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು. ಕುಕನೂರು ಹಿತರಕ್ಷಣಾ ಸಮಿತಿ ಸಹ ಸಂಚಾಲಕ ಮಂಜುನಾಥ್ ನಾಡಗೌಡರ್, ಪ್ರಮುಖರಾದ ವೀರೇಶ ಸಬರದ, ರಾಮನಗೌಡ ಅರಿಷಿಣಬಿದಿ, ಮಹಾಂತೇಶ ಹೂಗಾರ, ಗಂಗಾಧರ ನಾರಾಯಣಿ, ಕಾಲಕೇಶ ಹತ್ತಿಕಟಗಿ ಇತರರಿದ್ದರು.