ಗುಳೇದಗುಡ್ಡದ ಜ.ಶ್ರೀ. ಗುರುಸಿದ್ದೇಶ್ವರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಪಿಎಸ್‌ಐ ಯಡಹಳ್ಳಿ ಉದ್ಘಾಟಿಸಿ ಮಾತನಾಡಿದರು. ಗುರುಸಿದ್ಧಪಟ್ಟದಾರ್ಯ ಸ್ವಾಮೀಜಿ, ಸಂಗಮೇಶ ಯಲಿಗಾರ, ನೇತ್ರಾ ತಾಂಡೂರ, ಪ್ರೇಮಾ ಚಿಂದಿ, ವಿರೂಪಾಕ್ಷಪ್ಪ ಅರುಟಗಿ ಇತರರಿದ್ದರು.
- ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹೇಳಿಕೆ
- ಪಠ್ಯೇತರ ಚಟುವಟಿಕೆ ಉದ್ಘಾಟನೆ
ಗುಳೇದಗುಡ್ಡ: ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದರಿಂದ ಮಕ್ಕಳ ಮನಸ್ಸು ದುರ್ಬಲವಾಗುತ್ತದೆ. ಅಲ್ಲದೇ ಜ್ಞಾನಾರ್ಜನೆ ಕುಂಠಿತವಾಗುತ್ತದೆ ಎಂದು ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹೇಳಿದರು.
ಪಟ್ಟಣದ ಜ.ಶ್ರೀ. ಗುರುಸಿದ್ಧೇಶ್ವರ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳು ಮೊಬೈಲ್‌ನಿಂದ ದೂರವಿಡಲು ಪಠ್ಯೇತರ ಚಟುವಟಿಕೆಗಳಲಿ ಸಹಾಯಕವಾಗಿವೆ. ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳ್ಳುತ್ತಾರೆ ಎಂದರು.
ಶಾಲಾ ಸಂಸತ್ತು ಚುನಾವಣೆಗಳು ಮಕ್ಕಳಿಗೆ ನಮ್ಮ ಪ್ರಜಾಪ್ರಭುತ್ವದ ಅರಿವು ಮೂಡಿಸುತ್ತವೆ ಜೊತೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.
ಗುರುಸಿದ್ದೇಶ್ವರ ಮಠದ ಜ.ಶ್ರೀ. ಗುರುಸಿದ್ಧಪಟ್ಟದಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಸಂಗಮೇಶ ಯಲಿಗಾರ, ನೇತ್ರಾ ತಾಂಡೂರ, ಪ್ರೇಮಾ ಚಿಂದಿ, ವಿರೂಪಾಕ್ಷಪ್ಪ ಅರುಟಗಿ, ಎಸ್.ಎಸ್. ಕೆಲೂಡಿ, ಚಂದ್ರಿಕಾ ಜೋಶಿ, ಗಂಗಾಧರ ದೊಡಕುಂಡಿ ಇತರರಿದ್ದರು.