ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಗೆ ಸಹಕಾರ ನೀಡಿದ ಸಹಕಾರ ಬ್ಯಾಂಕ್​ ಅಧ್ಯಕ್ಷ ಬಿ.ವಿ.ಸತೀಶಗೌಡ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿಸಮಿತಿ ಸದಸ್ಯರಾದ ಪ್ರಶಾಂತ್​, ಜಿಯಾವುಲ್ಲಾಖಾನ್​, ಬೆಟ್ಟಹಳ್ಳಿ ಗೋಪಿನಾಥ್​, ಜೇನುಗೂಡು ಟ್ರಸ್ಟ್​ ನಿರ್ದೇಶಕ ನಯಾಜ್​ ಖಾನ್​, ಜಿಲ್ಲಾ ಗ್ಯಾರಂಟಿ ಯೋಜನೆ ನಿರ್ದೇಶಕ ಸೈಯದ್​ ಮಹಬೂಬ್​, ಉಪನ್ಯಾಸಕ ಕುಮಾರ್​, ತಿಮ್ಮಪ್ಪನಹಳ್ಳಿ ಡೇರಿ ಶ್ರೀನಿವಾಸ್​ ಇತರರು ಇದ್ದರು.  
ರಾಜ್ಯ

ಕಾಲೇಜು ಅಭಿವೃದ್ಧಿಗೆ ಶಾಸಕರು ಸದಾ ಸಿದ್ಧ / SULIBELE

ಬೆಂಗಳೂರು ಗ್ರಾಮಾಂತರ ಡೆಸ್ಕ್
ಸೂಲಿಬೆಲೆ : ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಬಗ್ಗೆ ಶಾಸಕ ಶರತ್​ ಬಚ್ಚೇಗೌಡ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದು, ನಾವು ಅಭಿವೃದ್ಧಿ ವಿಚಾರದಲ್ಲಿ ಸದಾ ಸಿದ್ಧರಿದ್ದೇವೆ ಎಂದು ಸಹಕಾರ ಬ್ಯಾಂಕ್​ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.
ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿ ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ,ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶಾಸಕರ ಮಾರ್ಗದರ್ಶನದಲ್ಲಿ ರಂಗಮಂದಿರ, ಕ್ರೀಡಾಪಥ, ಕಂಪ್ಯೂಟರ್​ ಲ್ಯಾಬ್​, ಸಮವಸ್ತ್ರ ಕೊಡಿಸಿ ಕೊಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು. ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಬೇಕು ಎಂದರು.
ಉಪಪ್ರಾಂಶುಪಾಲ ಸುಬ್ರಮಣಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶೇ.92 ಫಲಿತಾಂಶ ಬಂದಿದೆ. ಮುಂದಿನ ವರ್ಷದಲ್ಲಿ ಶೇ.100ಫಲಿತಾಂಶ ನೀಡಲು ಸಿದ್ಧರಿದ್ದೇವೆ. ಶೈಕ್ಷಣಿಕ ಪ್ರಗತಿಗೆ ಶಾಸಕರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದ್ದಾರೆ ಎಂದರು.