ಆಜಾದಪುರದಲ್ಲಿ ಗ್ರಾಮ ವಾಸ್ತವ್ಯ ಹೂಡಿರುವ ಶಾಸಕ ಬಸವರಾಜ ಮತ್ತಿಮಡು ಸ್ಥಳಿಯರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಆಲಿಸಿದರು. ಅನೀಲ ಪಾಟೀಲ್, ಈಶ್ವರ ನಿಗ್ಗುಡಗಿ, ವಿರೇಶ ಬಂಗರಗಾ, ರೇವಣಸಿದ್ದ ಸ್ವಾಮಿ ಇತರರಿದ್ದರು.
- ಬಸವರಾಜ ಮತ್ತಿಮಡು ಕಳವಳ
- ಆಜಾದಪುರದಲ್ಲಿ ಗ್ರಾಮ ವಾಸ್ತವ್ಯ ಜನರ ಬಳಿ ಹೋಗಲು ಶಾಸಕರ ಭಯ
ಶಹಾಬಾದ್: ರಾಜ್ಯ ಸರ್ಕಾರ ಮೂರು ವರ್ಷಗಳಿಂದ ಶಾಸಕರಿಗೆ ಅನುದಾನ ನೀಡದ್ದರಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಹೀಗಾಗಿ ಪ್ರತಿಪಕ್ಷ ಮಾತ್ರವಲ್ಲ ಆಡಳಿತ ಪಕ್ಷದ ಶಾಸಕರು ಸಹ ಜನರ ಮುಂದೆ ಹೋಗಲು ಭಯಪಡುತ್ತಿದ್ದಾರೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಆಜಾದಪುರದಲ್ಲಿ ಸೋಮವಾರ ಗ್ರಾಮವಾಸ್ಥವ್ಯ ಹೂಡಿ ಸ್ಥಳಿಯರೊಂದಿಗೆ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷದ ಸಾಧನೆ ಮತ್ತು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ಮಾಹಿತಿ ನೀಡಿದರು.
ಶಹಾಬಾದ್ ನಗರಸಭೆಗೆ ಮೂರು ವರ್ಷದಿಂದ ಸರ್ಕಾರದಿಂದ ಸಾಮಾನ್ಯ ಅನುದಾನ ಕೂಡ ಬರುತ್ತಿಲ್ಲ. ಹಿಂದೆ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ದಿ ಕಾಮಗಾರಿಗಳನ್ನೇ ಈಗ ಮಾಡುತ್ತಿದ್ದು, ಹೊಸ ಕೆಲಸಕ್ಕೆ ಅನುದಾನವೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸ್ಥಳಿಯರಿಂದ ಊರಲ್ಲಿರುವ ಸಮಸ್ಯೆಗಳಿಗೆ ಸಂಬಂದಿಸಿದ ಮಾಹಿತಿ ಪಡೆದು ಶ್ರೀ ಪರಿಹರಿಸುವಂತೆ ಜೆಸ್ಕಾಂ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಶೋಕ ಸಾಗರ, ಪ್ರಮುಖರಾದ ಅನೀಲ ಪಾಟೀಲ, ಈಶ್ವರ ನಿಗ್ಗುಡಗಿ, ಸಂಜೀವಕುಮಾರ, ವೀರೇಶ ಬಂಗರಗಾ, ರೇವಣಸಿದ್ದ ಸ್ವಾಮಿ, ಅಶೋಕ ಬಬಲಾದ, ಶರಣು ಹಾಗರಗಿ, ರಮೇಶ ತೆಗ್ಗಿನಮನಿ, ರಾಮಯ್ಯ ಗುತ್ತೇದಾರ್, ರಾಜು ಕೊಳ್ಳೂರ, ರಾಜು ಗುತ್ತೇದಾರ್, ಭೀಮರಾವ ಸಾಳೊಂಕೆ, ಚಂದ್ರಕಾಂತ ಗೊಬ್ಬುರಕರ, ದುರ್ಗಪ್ಪ ಪವಾರ್ ಇತರರಿದ್ದರು.