ಸುರಪುರ ಅಗ್ನಿಶಾಮಕ ಠಾಣೆಯಲ್ಲಿ ಗುರುವಾರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ನೂತನ ಅಗ್ನಿಶಾಮಕ ವಾಹನಕ್ಕೆ ಚಾಲನೆ ನೀಡಿದರು. ನಿಂಗರಾಜ ಬಾಚಿಮಟ್ಟಿ, ಮಲ್ಲಣ್ಣ ಸಾಹುಕಾರ ಮುಧೋಳ, ರಮೇಶ ದೊರೆ ಆಲ್ದಾಳ, ಅಬ್ದುಲ್​ ಗಫಾರ್​ ನಗನೂರಿ, ಶಕೀಲ್​ ಅಹ್ಮದ್​ ಇತರರಿದ್ದರು. 
ರಾಜ್ಯ

ಠಾಣೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಬದ್ಧ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜಾ ವೇಣುಗೋಪಾಲ ನಾಯಕ ಭರವಸೆ
  • ನೂತನ ಅಗ್ನಿ ಶಾಮಕ ವಾಹನಕ್ಕೆ ಚಾಲನೆ
ಸುರಪುರ: ಅಗ್ನಿ ಶಾಮಕ ಠಾಣೆಗೆ ಅಗತ್ಯ ಸೌಕರ್ಯ ಕಲ್ಪಿಸಲು ನಾನು ಸದಾ ಬದ್ಧವಾಗಿದ್ದು, ಅಂತಹ ಕೆಲಸಗಳಿದ್ದರೆ ತಕ್ಷಣಕ್ಕೆ ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರಸಭೆ ವ್ಯಾಪ್ತಿಯ ಹಸನಾಪುರದಲ್ಲಿರುವ ಅಗ್ನಿಶಾಮಕ ಠಾಣೆಯ ನೂತನ ಅಗ್ನಿ ಶಾಮಕ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಅಗತ್ಯ ಸೌಲಭ್ಯವ ಕುರಿತು ನನ್ನ ಗಮನಕ್ಕೆ ತಂದರೆ ಸರ್ಕಾರದಿಂದ ಮಂಜೂರು ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.
ಅಗ್ನಿಶಾಮಕ ವಾಹನ ಕಾರ್ಯನಿರ್ವಹಣೆ ಕುರಿತಂತೆ ಠಾಣೆಯ ಅಧಿಕಾಗಳು ಶಾಸಕರಿಗೆ ಮಾಹಿತಿ ನೀಡಿದರು. ಈ ಠಾಣೆಗೆ ಹೊಸ ಅಗ್ನಿಶಾಮಕ ವಾಹನದ ಸೇರ್ಪಡೆಯಿಂದ ತುರ್ತು ಪರಿಸ್ಥಿತಿಗಳಿಗೆ ತ್ವರಿತ ಸ್ಪಂದನೆ ಸಾಧ್ಯವಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಶಾಸಕರಿಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಗೌರವ ವಂದನೆ ಸಲಿಸಿದರು. ಅಗ್ನಿಶಾಮಕ ಠಾಣೆಗೆ ಆಗಮಿಸಿದ ಶಾಸಕರಿಗೆ ವಿಶೇಷವಾಗಿ ಸತ್ಕರಿಸಲಾಯಿತು. ನಂತರ ಶಾಸಕರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಸೌಲಭ್ಯಗಳು ಕುರಿತಂತೆ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಿದರು.
ನಿಂಗರಾಜ ಬಾಚಿಮಟ್ಟಿ, ಮಲ್ಲಣ್ಣ ಸಾಹುಕಾರ ಮುಧೋಳ, ರಮೇಶ ದೊರೆ ಆಲ್ದಾಳ, ಅಬ್ದುಲ್​ ಗಫಾರ್​ ನಗನೂರಿ, ಶಕೀಲ್​ ಅಹ್ಮದ್​, ಜುಮ್ಮಣ್ಣ ಕೆಂಗೂರಿ, ನಾಸೀರ್​ ಹುಸೇನ್​ ಕುಂಡಾಲೆ, ಸಿದ್ರಾಮ ಎಲಿಗಾರ, ಸೋಮರಾಯ ಶಾಖಾಪೂರ, ಸಾಯಬಣ್ಣ ಮಡಿವಾಳರ, ಭೀಮನಗೌಡ ಲ್ಮ ಹೆಮನೂರು, ಭೀಮರಾಯ ಮೂಲಿಮನಿ, ಖಾಲಿದ್​ ಅಹ್ಮದ್​ ತಾಳಿಕೋಟಿ ಇತರರಿದ್ದರು.