ಹುಲಸೂರು ತಾಲೂಕಿನ ಮಿರಖಲ್​ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಹಾರಾಷ್ಟ್ರ ಗಡಿಭಾಗದ ಹಣಮಂತ ವಾಡಿ ಗ್ರಾಮಸ್ಥರಿಗೆ ಪಡಿತರ ಅಂಗಡಿ ಮಾಲೀಕರು ಪ್ರತಿ ಕುಟುಂಬಸ್ಥರಿಗೆ 2 ಕೆ.ಜಿ ಅಕ್ಕಿ ಕಡಿಮೆ ನೀಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಸೋಮವಾರ ಮಧ್ಯರಾತ್ರಿ ಶಾಸಕ ಶರಣು ಸಲಗರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸುತ್ತಿರುವುದು ಕಾಣಬಹುದು. 
ರಾಜ್ಯ

ಮಧ್ಯರಾತ್ರಿ ಹಣಮಂತ ವಾಡಿಗೆ ದೌಡಾಯಿಸಿದ ಶಾಸಕ

ಪ್ರಮುಖ ಮುಖ್ಯಾಂಶಗಳು

  • ಪಡಿತರ ಅಕ್ಕಿ ಕಡಿತ, ಹಿಡಿತದಲ್ಲಿ ಇಲ್ಲದ ವಿತರಕರು
ಹುಲಸೂರು: ಕಳೆದ ಸುಮಾರು ದಿನದಿಂದ ಮಹಾರಾಷ್ಟ್ರ ಗಡಿ ಭಾಗದ ಮೀರಖಲ್​ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಣಮಂತ ವಾಡಿ ಗ್ರಾಮದಲ್ಲಿ ಪಡಿತರ ವಿತರಕರು ಪ್ರತಿ ಕುಟುಂಬಕ್ಕೆ 2 ಕೆ.ಜಿ ಅಕ್ಕಿ ಕಡಿಮೆ ನೀಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಸೋಮವಾರ ರಾತ್ರಿ 11:45 ಸುಮಾರಿಗೆ ಗ್ರಾಮಕ್ಕೆ ೇತ್ರದ ಶಾಸಕ ಶರಣು ಸಲಗರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ನಿಂತು ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಕರೆ ಮಾಡಿ ತಣವೇ ಗಡಿ ಗ್ರಾಮಸ್ಥರ ಸಮಸ್ಯೆ ಬಗೆಹರಿಸಬೇಕು ಎಂದು ತಾಕಿತ್ತು ಮಾಡಿರುವ ಪ್ರಸಂಗ ಜರುಗಿದೆ.
ಸಮೀಪದ ಅಂಬೆವಾಡಿ ಗ್ರಾಮದ ನಿವಾಸಿಯಾದ ವಿತರಕರು ಪಡಿತರ ಅಕ್ಕಿ ತರಲು 4 ಕಿ.ಮೀ ನಡೆದುಕೊಂಡು ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ನಾವು ಸಾಕಷ್ಟು ಸಾರಿ ನಮ್ಮ ಗ್ರಾಮದಲ್ಲಿ ಬಂದು ಪಡಿತರ ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು ಸಹ ನಮ್ಮ ಸಮಸ್ಯೆಗೆ ವಿತರಕರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ತಮ್ಮ ಸಮಸ್ಯೆಯನ್ನು ಶಾಸಕರ ಮುಂದೆ ತೋಡಿಕೊಂಡರು.
ಆನ್ಲೆನ್​ ಎಂಟ್ರಿ ಗ್ರಾಮದಲ್ಲಿ ಬಂದು ಪ್ರತಿ ಕುಟುಂಬಸ್ಥರ ಹೆಬ್ಬಟಿನ ಗುರುತು ಪಡೆಯುತ್ತಾರೆ. ಆದರೆ ಪಡಿತರ ಅಕ್ಕಿ ನಮ್ಮ ಗ್ರಾಮಕ್ಕೆ ಬಂದು ನೀಡುತ್ತಿಲ್ಲ. ತಿಂಗಳಲ್ಲಿ ಕೇವಲ ಮೂರು&ನಾಲ್ಕು ದಿವಸ ಬೆಳಗ್ಗೆ 9 ರಿಂದ 12 ಗಂಟೆವರೆಗೆ ಮಾತ್ರ ಪಡಿತರು ಅಕ್ಕಿ ನೀಡುತ್ತಾರೆ. ಉಳಿದವರು ಬರಿಗೈಯಲ್ಲಿ ವಾಪಸ್​ ಬರಬೇಕಾದ ಅನಿವಾರ್ಯತೆ ಉಂಟಾಗಿದೆ. ನಮ್ಮ ಗ್ರಾಮದಲ್ಲಿ ಪಡಿತರ ಅಕ್ಕಿ ವಿತರಣೆ ಮಾಡಬೇಕೆಂದು ಮಹಿಳೆಯರು ಪಟ್ಟು ಹಿಡಿದರು. ಸಮಸ್ಯೆ ಆಲಿಸಿದ್ದ ಶಾಸಕರು ಬರುವ ದಿನದಲ್ಲಿ ನಿಮ್ಮ ಗ್ರಾಮದಲ್ಲಿ ಪಡಿತರ ಅಕ್ಕಿ ವಿತರಣೆ ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.
ಕಳೆದ ಕೆಲ ದಿನಗಳಿಂದ ಪಡಿತರ ಅಕ್ಕಿ ಕಡಿತ, ಅಧಿಕಾರಿಗಳ ಹಿಡಿತದಲ್ಲಿ ಇಲ್ಲದ ವಿತರಕರು ಎಂದು ಗ್ರಾಮಸ್ಥರು ಆರೋಪಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ತಣ ಸ್ಪಂದಿಸಿ, ಮಧ್ಯರಾತ್ರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಂಡ ಶಾಸಕ ಶರಣು ಸಲಗರ ಅವರ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.