ಕೆ.ಆರ್.ಪುರ ಸರ್ಕಾರಿ ಸಾರ್ವಜನಿಕ ಆಸತ್ರೆಗೆ ಶಾಸಕ ಬೈರತಿ ಬಸವರಾಜ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. 
ರಾಜ್ಯ

ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಶಾಸಕ ಬೈರತಿ ಬಸವರಾಜ್ ಭೇಟಿ, ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಶಾಸಕ ಬೈರತಿ ಬಸವರಾಜ್ ಭೇಟಿ
  • ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಭೇಟಿ, ಪರಿಶೀಲನೆ
  • ಆಸ್ಪತ್ರೆ ನೂತನ ಕಟ್ಟಡ ಉದ್ಘಾಟಿಸದಿರುವ ಬಗ್ಗೆ ಅಸಮಾಧಾನ

ಕೆ.ಆರ್.ಪುರ: ಕೆ.ಆರ್.ಪುರಸರ್ಕಾರಿ ಸಾರ್ವಜನಿಕ ಆಸತ್ರೆಗೆಶಾಸಕ ಬೈರತಿ ಬಸವರಾಜ ಭೇಟಿ ನೀಡಿಆಸ್ಪತ್ರೆಯ ಸ್ಥಿತಿಗತಿಗಳನ್ನುಪರಿಶೀಲಿಸಿದರು.ಆಸ್ಪತ್ರೆಯಲ್ಲಿಐಸಿಯು ವಿಭಾಗ,ಶಸ್ತ್ರಚಿಕಿತ್ಸೆಕೊಠಡಿ, ಹೆರಿಗೆವಿಭಾಗ, ಎಕ್ಸರೇವಿಭಾಗ, ವಾರ್ಡುಗಳುಸೇರಿದಂತೆ ವಿವಿಧ ವಿಭಾಗಗಳವೀಕ್ಷಿಸಿದರು.

ಸಮಯಕ್ಕೆಸರಿಯಾಗಿ ಆಸ್ಪತ್ರೆಯ ವೈದ್ಯರುಆಗಮಿಸದೆ ತಡವಾಗಿ ಬರುವ ವೈದ್ಯರುಹಾಗೂ ಔಷಧಿ ಪೂರೈಕೆ ವ್ಯವಸ್ಥೆಹಾಗೂ ಅಗತ್ಯ ಸೌಲಭ್ಯಗಳ ಕುರಿತುಆಡಳಿತ ವೈದ್ಯಾಧಿಕಾರಿಯಿಂದಮಾಹಿತಿ ಪಡೆದುಕೊಂಡರು.

ಬಳಿಕಮಾತನಾಡಿದ ಬೈರತಿ ಬಸವರಾಜ್,ಸಾರ್ವಜನಿಕರಿಂದದೂರುಗಳು ಬಂದ ಹಿನ್ನೆಲೆಯಲ್ಲಿ ಬಡವರು ಹೆಚ್ಚಾಗಿ ಬರುವ ಸರ್ಕಾರಿಆಸ್ಪತ್ರೆಯ ಸ್ಥಿತಿಗತಿ ತಿಳಿಯಲುಭೇಟಿ ನೀಡಿ ಪರಿಶೀಲನೆ ನಡೆಸಿ,ರೋಗಿಗಳ ಅಹವಾಲುಸ್ವೀಕರಿಸಿದ್ದೇನೆ.ರೋಗಿಗಳ ವಿಚಾರದಲ್ಲಿನಿರ್ಲಕ್ಷ್ಯ ತೋರಿದರೆ ಸಹಿಸುವುದಿಲ್ಲ. ಆಸ್ಪತ್ರೆಯಲ್ಲಿಇರುವ ಸಮಸ್ಯೆಗಳನ್ನು ಕೂಡಲೇಸರಿಪಡಿಸಬೇಕು ಇಲ್ಲದಿದ್ದರೆಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದುಎಚ್ಚರಿಸಿದರು.

ಆಸತ್ರೆಯಲ್ಲಿಜನರ ಆರೋಗ್ಯ ಸುಧಾರಿಸಲು ಇನ್ನುಹೆಚ್ಚಿನ ಅಭಿವೃದ್ಧಿ ಮಾಡಬೇಕಿದೆ.ಜನರ ಆರೋಗ್ಯದೃಷ್ಟಿಯಿಂದ ಸರ್ಕಾರ ಹೆಚ್ಚಿನಅನುದಾನ ಬಿಡುಗಡೆ ಮಾಡಬೇಕೆಂದುಒತ್ತಾಯಿಸಿದ ಶಾಸಕರು,ಬಿಜೆಪಿ ಸರ್ಕಾರವು100 ಹಾಸಿಗೆಯತಾಯಿ ಮತ್ತು ಮಕ್ಕಳ ಆಸ್ಪತ್ರೆನಿರ್ಮಾಣಕ್ಕೆ ಅನುದಾನ ನೀಡಿತ್ತು,ಈಗ ಆಸ್ಪತ್ರೆಯು ಸಿದ್ದವಾಗಿದ್ದು ಇನ್ನು ಉದ್ಘಾಟನೆಮಾಡದೆ ಕಾಲಹರಣ ಮಾಡುತ್ತಿರುವುದುದುರಾದೃಷ್ಟಕರ ಎಂದು ಬೇಸರವ್ಯಕ್ತಪಡಿಸಿದರು.

ಈಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತಮಾಜಿ ಸದಸ್ಯ ಅಂತೋಣಿಸ್ವಾಮಿ,ಮಾಜಿ ನಗರಸಭೆಸದಸ್ಯ ಕೇಶವ,ವಾರ್ಡ್ ಅಧ್ಯಕ್ಷಶಿವಪ್ಪ, ಮುಖಂಡರಾದಕೆ.ಪಿ.ಕೃಷ್ಣ,ನಿರಂಜನ್ಮತ್ತಿತರರಿದ್ದರು.