ಕಲಬುರಗಿ ಸರ್ಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿತದಿಂದ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್​ ಆರೋಗ್ಯ ವಿಚಾರಿಸಿದರು. 
ರಾಜ್ಯ

ತನಿಖೆಗೆ ಶಾಸಕ ಅಲ್ಲಮಪ್ರಭು ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ಮೇಲ್ಛಾವಣಿ ಕುಸಿತ
ಕಲಬುರಗಿ: ಬಾಲಕಿಯರ ಸರ್ಕಾರಿ ಕಾಲೇಜು ಕಟ್ಟಡದ ಮೇಲ್ಛಾವಣಿ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ. 2016ರಲ್ಲಿ ನಿರ್ಮಾಣವಾಗಿರುವ ಕಟ್ಟಡ 8 ವರ್ಷದಲ್ಲೆ ಛಾವಣಿ ಕುಸಿದು ಮಕ್ಕಳ ಪ್ರಾಣಕ್ಕೆ ಕುತ್ತಾಗಿದೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಓಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್​ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗಾಯಗೊಂಡ ಶೀತಲ್​, ಸ್ನೇಹಾ, ದಿವ್ಯಾ ಸೇರಿ ಹಲವು ವಿದ್ಯಾರ್ಥಿನಿಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿ ವೈಯಕ್ತಿಕ ತಲಾ 5 ಸಾವಿರ ರೂ. ಆರ್ಥಿಕ ನೆರವು ನೀಡಿದ ಶಾಸಕರು, ಸರ್ಕಾರಿ ಕಾಲೇಜಿನ ಕಟ್ಟಡ ಕಳಪೆ ಕಟ್ಟಿದ್ದೇ ಅವಡಕ್ಕೆ ಕಾರಣವೆಂದು ದೂರಿದರು. ಕಟ್ಟಡ ಕಟ್ಟಿರೋ ಗುತ್ತಿಗೆದಾರರ ವಿರುದ್ಧ ಕ್ರಮವಾಬೇಕು. ಶ್ರೀ ವಿಚಾರಣೆ ನಡೆಸಿ ಕಾರಣ ಪತ್ತೆ ಮಾಡುವಂತೆ ಸೂಚಿಸಿದ್ದಾರೆ.
ಪಾಠ ನಡೆಯುವಾಗಲೇ ಮೇಲ್ಛಾವಣಿ ಕುಸಿದಿದೆ. ಇದರಿಂದ 80ಕ್ಕೂ ಹೆಚ್ಚು ಮಕ್ಕಳು ತರಗತಿ ಕೋಣೆಯಲ್ಲಿದ್ದರು. ಅವರೆಲ್ಲರೂ ಅಪಾಯ ಎದುರಿಸಿದ್ದಾರೆ. ಶಾಲೆಗಳು ಗುಣಮಟ್ಟದ ಕಾಮಗಾರಿಗೆ ತೆರೆದುಕಳ್ಳಬೇಕು. ಕಳಪೆ ತನದ ಈ ಪ್ರಕರಣಕ್ಕೆ ಸೂಕ್ತ ತನಿಖೆ ಹಾಗೂ ಕಾನೂನು ಕ್ರಮದ ಬಿಸಿ ಮುಟ್ಟಿಸುವ ಮೂಲಕ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.