ಎಂ.ಕೆ.ಹುಬ್ಬಳ್ಳಿ ಸಮೀಪದ ಮಲಪ್ರಭಾ ನದಿ ತೀರದ ಶರಣೆ ಗಂಗಾಂಬಿಕಾ ಐಕ್ಯಮಂಟಪ ಮಕರ ಸಂಕ್ರಾಂತಿ ನಿಮಿತ್ತ ಗುರುವಾರ ಜನಸಾಗರದಿಂದ ಕೂಡಿತ್ತು. 
ರಾಜ್ಯ

ಎಂ.ಕೆ.ಹುಬ್ಬಳ್ಳಿಯಲ್ಲಿ ಅದ್ದೂರಿ ಜಾತ್ರೆ

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿ ತೀರದ ಶರಣೆ ಗಂಗಾಂಬಿಕಾ ಐಕ್ಯಮಂಟಪದ ಮಕರ ಸಂಕ್ರಾಂತಿ ನಿಮಿತ್ತ ಗುರುವಾರ ಜನಸಾಗರದಿಂದ ಕೂಡಿತ್ತು. ಕುಟುಂಬ ಸಮೇತರಾಗಿ ಆಗಮಸಿದ್ದ ಜನರು ಮಲಪ್ರಭಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪಾವನರಾದರು. ಗಂಗಾಮಾತೆಯನ್ನು ಪೂಜಿಸಿ, ನೆವೇದ್ಯ ಅರ್ಪಿಸಿದರು. ಶರಣೆ ಗಂಗಾಂಬಿಕಾ ಐಕ್ಯಮಂಟಪಕ್ಕೆ ತೆರಳಿ ದರ್ಶನ ಪಡೆದರು. ನಂತರ ಕುಟುಂಬ ಸಮೇತರಾಗಿ ಒಟ್ಟಿಗೆ ಕುಳಿತು ಹಬ್ಬದ ತರಹೇವಾರಿ ಆಹಾರ ಖಾದ್ಯ ಸವಿದರು. ಜಾತ್ರೆಯಲ್ಲಿ ಬಳೆ, ಅಲಂಕಾರಿಕ, ಗಹೋಪಯೋಗಿ ಮತ್ತು ಆಟಿಕೆ ವಸ್ತು ಖರೀದಿ ಜೋರಾಗಿತ್ತು.