ದೊಡ್ಡಬಳ್ಳಾಪುರದ ಸಿದ್ದಲಿಂಗಯ್ಯ ವೃತ್ತದಲ್ಲಿ ಕೇಂದ್ರ ಕಾರ್ಮಿಕ ಸಂಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರೆ ನೀಡಿದ್ದ ಬಂದ್ ವೇದಿಕೆ ಕಾರ್ಯಕ್ರಮದಲ್ಲಿ ಮುಖಂಡರಾದ ಪಿ.ಎ.ವೆಂಕಟೇಶ್, ಕಾರಹಳ್ಳಿ ಶ್ರೀನಿವಾಸ, ಮುನಿಪಾಪಯ್ಯ, ವೆಂಕಟೇಶ್ ಇತರರು ಇದ್ದರು.
ದೊಡ್ಡಬಳ್ಳಾಪುರ : ಕೇಂದ್ರ ಸರ್ಕಾರದ ನೂತನ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ
ಕೇಂದ್ರ ಕಾರ್ಮಿಕ ಸಂಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಗುರುವಾರ ಕರೆ ನೀಡಿದ್ದ ಬಂದ್ಗೆ ತಾಲೂಕಿನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಹಳೇ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಸಿನಿಮಾ ರಸ್ತೆ ಸೇರಿದಂತೆ ನಗರದಲ್ಲಿ ಭಾಗಶ@ ಅಂಗಡಿಗಳನ್ನು ಮುಚ್ಚಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿದರು. ಉಳಿದಂತೆ ನಗರದ ಹೊರಭಾಗದಲ್ಲಿ ಅಂಗಡಿಗಳು ಎಂದಿನಂತೆ ತೆರದಿದ್ದವು. ಬಿಎಂಟಿಸಿ, ಕೆಎಸ್ಸಾರ್ಟಿಸಿ, ಖಾಸಗಿ ಬಸ್ಗಳು ಎಂದಿನಂತೆ ಸಂಚರಿಸಿದವು.
ಬೆಳಗ್ಗೆಯಿಂದಲೇ ಜಾಥಾ : ಸಿಐಟಿಯು ಸೇರಿದಂತೆ ವಿವಿಧ ಕನ್ನಡಪರ ಸಂಟನೆಗಳ ನೇತೃತ್ವದಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನದವರೆಗೆ ನಗರದ ವಿವಿಧ ರಸ್ತೆಗಳಲ್ಲಿ ಕಾರ್ಮಿಕ ನೀತಿಗಳಲ್ಲಿನ ಲೋಪಗಳ ಕುರಿತಂತೆ ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿದ ಹೋರಾಟಗಾರರು, ಸಿದ್ದಲಿಂಗಯ್ಯ ವೃತ್ತದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದ ಬಳಿ ಸಮಾವೇಶಗೊಂಡರು.
ಮಾಲೀಕರ ಪರ ಕಾಯ್ದೆಗಳು: ಕೇಂದ್ರ ಸರ್ಕಾರದ ನೂತನ ನಾಲ್ಕು ಕಾರ್ಮಿಕ ಕಾಯ್ದೆಗಳು ಮಾಲೀಕರ ಪರವಾದ ಕಾಯ್ದೆಗಳಾಗಿವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನಾಲ್ಕು ಕಾರ್ಮಿಕ ಕಾಯ್ದೆಗಳು, ಕಾರ್ಮಿಕರು ನೂರಾರು ವರ್ಷಗಳವರೆಗೆ ಹೋರಾಟ ಮಾಡಿ ಪಡೆದ ಹಕ್ಕುಗಳನ್ನು ನಿರಾಕರಿಸುತ್ತವೆ ಮತ್ತು ಮಾಲೀಕರ ಪರವಾಗಿವೆ. ಹೀಗಾಗಿ ದೇಶದ ಕಾರ್ಮಿಕರ ವಿರುದ್ಧವಾಗಿರುವ 4 ಕಾರ್ಮಿಕ ಮಸೂದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ದೇಶದ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ನಿಲುವು ಬದಲಾಗಬೇಕು, ರೈತರಿಗೆ ಮಾರಕವಾಗಿರುವ ಬೀಜ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಿ ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಈಗ ತಂದಿರುವ ಗೆಜೆಟ್ ನೋಟಿಫಿಕೇಷನ್ ವಾಪಸ್ಪಡೆಯಬೇಕು. ಮತ್ತು ಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕ ಮತ್ತು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಪ್ರಾಂತ ರೈತ ಸಂದ ಮುಖಂಡ ಆರ್.ಚಂದ್ರತೇಜಸ್ವಿ, ಪ್ರಭಾಬೆಳವಂಗಲ, ಸಿ.ಎಚ್ ರಾಮಕೃಷ್ಣಯ್ಯ, ಸದಾಶಿವಪ್ಪ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಮೋಹನ್ ಬಾಬು, ಕೆಐಇಇಎಫ್ ಕಾರ್ಮಿಕ ಸಂದ ಮುಖಂಡ ಎಂ.ಜೆ.ಪ್ರಭಾಕರ್, ಎಚ್.ಶಿವಕುಮಾರ್, ಎಐಟಿಯುಸಿ ಮುಖಂಡರಾದ ಒಟ್ಟು ಬಿಲ್ಜ್, ಎನ್.ಮಂಜುನಾಥ್, ಓಮಿನಿ, ಎಚ್.ಎಲ್.ಹೇಮಂತ್ ಕುಮಾರ್, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್, ರಾಜ್ಯ ರೈತ ಸಂದ ಮುತ್ತೇಗೌಡ, ನಾರಾಯಣಪ್ಪ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಂಜಪ್ಪ, ಕರವೇ (ಪ್ರವಿಣ್ ಶೆಟ್ಟಿ ಬಣ ) ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ್, ಬಿರ್ಲಾ ಸೂಪರ್ ಕಾರ್ಮಿಕ ಸಂದ ಮುಖಂಡ ರೇಣುಕಾರಾಧ್ಯ, ಅನಿಲ್ ಗುಪ್ತ, ಬೀರೇಂದ್ರ ಗುಪ್ತ, ಎಆರ್ಡಿಯು ಆಟೋ ಚಾಲಕರ ಸಂದ ಅಧ್ಯಕ್ಷ ಸಾದಿಕ್ಪಾಷಾ, ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್, ಡಿಎಸ್ಎಸ್ ಸಂಚಾಲಕಸುರೇಶ್, ಇಂಡೇನಾ ಇಂಡಿಯಾ ಕಾರ್ಮಿಕ ಸಂದ ಕೆ.ವಿನಯ್ ಸೇರಿದಂತೆ ಹಲವರು ಇದ್ದರು.