ತೂಬಗೆರೆ ಹೋಬಳಿಯ ಸಾಧುಮಠ ರಸ್ತೆಯ ಸಮೀಪ ಮೋರಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯ ಶವವನ್ನು ಪೊಲೀಸರು ಪರಿಶೀಲಿಸಿದರು. 
ರಾಜ್ಯ

ಕಾಣೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ / TUBAGERE

ಬೆಂಗಳೂರು ಗ್ರಾಮಾಂತರ ಡೆಸ್ಕ್
ತೂಬಗೆರೆ : ಚಿಕ್ಕಬಳ್ಳಾಪುರ ನಗರದ ಬೆಸ್ಟ್​ ಪಿಯುಸಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಶಾಂಕ್​ (15) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪಾಲಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಹೋಬಳಿಯ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್​ ಶವ ಸಾಧು ಮಠ ಗ್ರಾಮದ ರಸ್ತೆ ಬದಿಯ ಮೋರಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಈತನ ಬೈಕ್​ ಕೂಡ ಪಕ್ಕದ ಹಳ್ಳದಲ್ಲಿ ಬಿದ್ದಿದ್ದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
15ರಂದು ನಾಪತ್ತೆ: ಡಿ.15ರಂದು ಆರೋಗ್ಯ ಸರಿ ಇಲ್ಲದ ಕಾರಣ ಕಾಲೇಜಿಗೆ ರಜೆ ಹಾಕಿದ್ದ ಶಶಾಂಕ್​ ಮನೆಯಲ್ಲಿಯೇ ಇದ್ದ. ಅಂದು ಮುಂಜಾನೆ 7.30ರ ಸುಮಾರಿಗೆ ಹೊರಗೆ ಹೋಗಿ ಬರುವುದಾಗಿ ಬೈಕ್​ ತೆಗೆದುಕೊಂಡು ಹೊರಟಿದ್ದವನು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ೋನ್​ ಸ್ವಿಚ್ಡ್​ಆ್​: ಡಿ.15ರಂದು ಸಂಜೆಯಾದರೂ ಮಗ ಮನೆಗೆ ಮರಳಿಲ್ಲ. ಗಾಬರಿಗೊಂಡ ಪಾಲಕರು ಶಶಾಂಕ್​ ಮೊಬೈಲ್​ಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ೋನ್​ ಸ್ವಿಚ್ಡ್​ಆ್​ ಆಗಿರುವುದು ಗೊತ್ತಾಗಿದೆ. ಎಲ್ಲಿಯೂ ಮಗನ ಬಗ್ಗೆ ಮಾಹಿತಿ ಸಿಕ್ಕಿಲ್ಲ, ನಂತರ ಡಿ.16ರಂದು ಪಾಲಕರು ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೊಲೆ ಶಂಕೆ: ಪ್ರಕರಣ ಮೇಲ್ನೋಟಕ್ಕೆ ಅಪಘಾತದಂತೆ ಕಂಡುಬಂದಿದೆ ಎನ್ನಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ಪಾಲಕರು ಯಾರೋ ಮಗನನ್ನು ಕೊಲೆ ಮಾಡಿದ್ದಾರೆ, ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿೆ ಕೊಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ಸಾದಿಕ್​ ಪಾಷಾ ಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸಹ ಭೇಟಿ ಮಾಡಿ ಪರಿಶೀಲನೆ ನಡೆಸಿದೆ.
ಪಾಲಕರ ಆಕ್ರಂದನ: ಮಗನ ಸಾವಿನ ಸುದ್ದಿ ತಿಳಿದ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಮಗನನ್ನು ಯಾರೋ ಪಾಪಿಗಳು ಕೊಲೆ ಮಾಡಿದ್ದಾರೆ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.