ಶಾಸಕ ಸಿ.ಎಸ್. ನಾಡಗೌಡ 
ರಾಜ್ಯ

ಸ್ವಪಕ್ಷದವರಿಂದಲೇ ಸಚಿವ ಸ್ಥಾನ ವಂಚನೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎಸ್. ನಾಡಗೌಡ ಬೇಸರ
  • ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ
ಮುದ್ದೇಬಿಹಾಳ: ನಾನು ಈಗಾಗಲೇ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಅಲ್ಲದೇ ಹಿರಿತನ ಹಾಗೂ ಮೀಸಲಾತಿ ಆಧಾರದಲ್ಲಿ ನನಗೆ ಮಂತ್ರಿಯನ್ನಾಗಿ ಮಾಡಬೇಕು ಎಂಬ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಚ್.ಕೆ. ಪಾಟೀಲರ ನಂತರ ಪಕ್ಷದ ಜವಾಬ್ದಾರಿ ಹೊತ್ತು ಸಂಘಟಿಸುವಲ್ಲಿ, ಪಕ್ಷಕ್ಕೆ ಕಾರ್ಯಕರ್ತರನ್ನು ಸೇರ್ಪಡಿಸುವಲ್ಲಿ, ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದವರು ಯಾರು? ಎಂಬುದು ಜನತೆಗೆ ಗೊತ್ತಿದೆ. ಇವೆಲ್ಲ ವಿಷಯವನ್ನು ಕಾಂಗ್ರೆಸ್ ಹೈಕಮಾಂಡ್ ಗಣನೆಗೆ ತೆಗೆದುಕೊಂಡು ಸೂಕ್ತ ಸ್ಥಾನಮಾನ ನೀಡುತ್ತದೆ ಎಂಬ ಭರವಸೆ ನನ್ನಲ್ಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ನಿಷ್ಠೂರವಾಗಿ ಇರುವವರು ಯಾರು? ಎಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ. ನನ್ನ ಹಿಂದಿನ ಚುನಾವಣೆಯಲ್ಲಿ ಸ್ವಪಕ್ಷದವರೇ ನನ್ನ ವಿರುದ್ಧವಾಗಿ ಚುನಾವಣೆ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರವೇ. ನಾನು ಒಳ್ಳೆಯದನ್ನು ಬಯಸಿದ ವ್ಯಕ್ತಿಗಳೇ ನನ್ನನ್ನು ವಿರೋಧಿಸುವ ಹಂತಕ್ಕೆ ಬಂದರೆ ನನಗೂ ಬೇಸರವಾಗುತ್ತದೆ ಎಂದು ಶಾಸಕ ನಾಡಗೌಡ ಹೇಳಿದ್ದಾರೆ.
"

ನನಗೆ ಹಿಂದಿನ ಸಿಎಂ ಎಸ್.ಎಂ. ಕೃಷ್ಣ, ಧರಂಸಿಂಗ್ ಹಾಗೂ ಸಿದ್ದರಾಮಯ್ಯ ಅವರು ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಪಕ್ಷದ ಕೆಲ ನಿಲುವಿಗೆ ಹಾಗೂ ಓರ್ವ ವ್ಯಕ್ತಿಯ ಬೆಳವಣಿಗೆಗೋಸ್ಕರ ನಾನು ಪಟ್ಟು ಹಿಡಿಯುವ ಕಾರ್ಯ ಮಾಡಿಲ್ಲ. ನನಗೆ ಸಚಿವ ಸಂಪುಟದ ಎರಡನೇ ಲಿಸ್ಟ್‌ನಲ್ಲಿ ನನಗೆ ಸ್ಥಾನ ನೀಡುತ್ತಾರೆ ಎಂಬುದು ನನ್ನ ಪಕ್ಷದ ಮೇಲೆ ಹಾಗೂ ಹೈಕಮಾಂಡ್ ಮೇಲೆ ಅತೀವ ನಂಬಿಕೆ ಇದೆ.

ಸಿ.ಎಸ್. ನಾಡಗೌಡ, ಶಾಸಕ, ಮುದ್ದೇಬಿಹಾಳ.