ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಬಿ.ಪಿ. ಹರೀಶ್ ಅವರ ರಾಜಕೀಯ ವಾಗ್ವಾದ ಹಾಗೂ ಸವಾಲಿನ ಸುದ್ದಿಯನ್ನು ಬಿಂಬಿಸುವ ಸಾಂಕೇತಿಕ ಚಿತ್ರ. 
ರಾಜ್ಯ

‘ಚಪ್ಪಲಿಯಲ್ಲಿ ಹೊಡೆಯಿರಿ’ ಎಂದ ಸಚಿವ ಎಸ್​.ಎಸ್​. ಮಲ್ಲಿಕಾರ್ಜುನ್​ಗೆ ಮಾಡಿ ತೋರಿಸಿ ಎಂದು ಸವಾಲೆಸೆದ ಶಾಸಕ ಬಿ.ಪಿ ಹರೀಶ್! S S Mallikarjun

ವಿನಾಯಕ ನಾಯಕ

ಪ್ರಮುಖ ಮುಖ್ಯಾಂಶಗಳು

  • 'ಚಪ್ಪಲಿಯಲ್ಲಿ ಹೊಡೆಯಿರಿ' ಎಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
  • ಸಚಿವರ ಹೇಳಿಕೆಗೆ ಹರಿಹರ ಶಾಸಕ ಬಿ.ಪಿ. ಹರೀಶ್​ ತಿರುಗೇಟು
  • ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​
ದಾವಣಗೆರೆ: ಭದ್ರಾ ನೀರಿನ ವಿಚಾರವಾಗಿ ಸಚಿವ ಎಸ್​.ಎಸ್​. ಮಲ್ಲಿಕಾರ್ಜುನ್ (S S Mallikarjun)​ ಬಳಿ ರೈತನೋರ್ವ ಅಹವಾಲನ್ನು ನೀಡಲು ಬಂದಾಗ ಬಿಜೆಪಿಯ ಹರಿಹರ ಶಾಸಕ ಬಿ.ಪಿ. ಹರೀಶ್​ ವಿರುದ್ಧ ಸಚಿವ ಮಲ್ಲಿಕಾರ್ಜುನ್​ ಅವಾಚ್ಯ, ಅಸಾಂವಿಧಾನಿಕ ಪದ ಪ್ರಯೋಗ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. 

ವಿಡಿಯೋನಲ್ಲೇನಿದೆ?

ಭದ್ರ ಮೇಲ್ದಂಡೆ ಯೋಜನೆಯ ಲಾಭ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಜನರಿಗೆ ತಲುಪುತ್ತಿಲ್ಲ. ಹರಿಹರ ಶಾಸಕ ಬಿ.ಪಿ. ಹರೀಶ್​ ಅವರಿಗೆ ಕೇಳಿದರೆ ಜಿಲ್ಲಾ ಉಸ್ತುವಾರಿ ಹಾಗೂ ಸಚಿವರಾಗಿರುವ ಎಸ್​.ಎಸ್​.ಮಲ್ಲಿಕಾರ್ಜುನ್​ ಅವರಲ್ಲಿ ಕೇಳಿಕೊಳ್ಳಿ ಎಂದು ಹೇಳುತ್ತಾರೆಂದು ರೈತನೋರ್ವ ಸಚಿವರಿಗೆ ಹೇಳಿದ್ದಾರೆ.
ಈ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಸಿಡಿಮಿಡಿಯಾದ ಸಚಿವ ಮಲ್ಲಿಕಾರ್ಜುನ್​, ಬಿ.ಪಿ. ಹರೀಶ್​ ಮೇಲೆ ಅವಾಚ್ಯ, ಅಸಾಂವಿಧಾನಿಕ ಪದಗಳ ಪ್ರಯೋಗ ಮಾಡಲು ಶುರುವಿಟ್ಟಿದ್ದಾರೆ. ಅವನನ್ನು ಹರೀಶಣ್ಣ ಎಂದು ಕರಿಯಬೇಡಿ, ಅವನೊಬ್ಬ * ಮಗ, ಅವನಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿರುವ ಮಾತು ಈಗ ನೂತನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. 

ಅವನ ಅಪ್ಪನಿಗೆ ಹುಟ್ಟಿದರೆ ಆ ಕೆಲಸ ಮಾಡಲಿ!

ಸಚಿವ ಎಸ್​.ಎಸ್. ಮಲ್ಲಿಕಾರ್ಜುನ್​ ಹೇಳಿಕೆಗೆ ಕೌಂಟರ್​ ಕೊಟ್ಟಿರುವ ಹರಿಹರ ಶಾಸಕ ಬಿ.ಪಿ. ಹರೀಶ್​ ನಾನು 22 ವರ್ಷದವನಿದ್ದಾಗನಿಂದ ರಾಜಕೀಯದಲ್ಲಿದ್ದೇನೆ. ನನಗೆ ಸುಮಾರು 40 ವರ್ಷಗಳ ರಾಜಕೀಯ ಅನುಭವಿದೆ. ನನಗೆ ರೈತನೊಬ್ಬ ಅಣ್ಣ ಎಂದು ಕರೆದಿದ್ದು, ಸಚಿವರಿಗೆ ಸಹಿಸಲಾಗಿಲ್ಲ. ಸಚಿವರಿಗೆ ಮುಖ್ಯವಾಗಿ ಸಂಸ್ಕಾರವೇ ಇಲ್ಲ, ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆಂದು ಕಿಡಿಕಾರಿದ್ದಾರೆ. 
ನನಗೆ ಬೂಟಿನಲ್ಲಿ ಹೊಡಿತೀನಿ ಅಂದಿದ್ದಾರೆ, ಅವರು ಅವರ ಅಪ್ಪನಿಗೆ ಹುಟ್ಟಿದ್ದರೆ ಆ ಕೆಲಸ ಮಾಡಲಿ ಎಂದು ಬಹಿರಂಗ ಸವಾಲನ್ನು ಹಾಕಿದ್ದಾರೆ. ರೈತರು ತಮ್ಮ ಸಮಸ್ಯೆಯನ್ನು ಹೇಳಲು ಬಂದರೆ ಅದನ್ನು ಕೇಳಿಸಿಕೊಳ್ಳುವ ಕನಿಷ್ಟ ವ್ಯವಧಾನವಿಲ್ಲ, ಜಿಲ್ಲೆಯ ಸಮಸ್ಯೆಯನ್ನು ಉಸ್ತುವಾರಿ ಸಚಿವರಿಗೆ ಕೇಳದೇ ಇನ್ನಾರಿಗೆ ಕೇಳಬೇಕೆಂದು ಪ್ರಶ್ನಿಸಿದ್ದಾರೆ,(ಏಜನ್ಸೀಸ್​).