- ೫ರಂದು ಸುರಪುರದಲ್ಲಿ ಪ್ರಜಾಸೇವಾ ಅಭಿಯಾನ
- ಯಾದಗಿರಿಯಲ್ಲಿ ೭ಮತ್ತು ೮ರಂದು ಕೆಡಿಪಿ ಸಭೆ
ಕಲಬುರಗಿ: ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಲು ಜಿಲ್ಲಾ ಉಸ್ತುವಾರಿ ಹೊಣೆ ವಹಿಸಿಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತಷ್ಟು ಬೂಸ್ಟ್ ನೀಡುವ ಸಂಕಲ್ಪ ಮಾಡಿದ್ದು, ಜಿಲ್ಲೆಯ ಜನಪ್ರತಿನಿಽಗಳ ಹಾಗೂ ಸಾರ್ವಜನಿಕರ ಸಹಕಾರ ಪಡೆದು ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ ದಶಕ ಕಳೆದಿದೆ. ಈಗಾಗಲೇ ಬೇಕಾದಷ್ಟು ಪ್ರಗತಿಯ ಕೆಲಸ ಕೂಡ ಆಗಿದ್ದು, ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಯಾದಗಿರಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಟ್ಟಿದ್ದು ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಗಿರಿಜಿಲ್ಲೆ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುವುದರ ಜತೆಗೆ ಹೆಚ್ಚಿನ ಸಮಯ ಜನರ ಮತ್ತು ರೈತರ ಹಿತಕ್ಕಾಗಿ ಮೀಸಲಿಡುವುದಾಗಿ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಮೊದಲ ಹಂತದ ಸಭೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾಗಿ ಡಾ.ಶರಣಪ್ರಕಾಶ ಪಾಟೀಲ್ ವಿಜಯವಾಣಿಗೆ ತಿಳಿಸಿದರು. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಹಾಪುರ ಶಾಸಕರಾಗಿರುವ ಶರಣಬಸಪ್ಪ ದರ್ಶನಾಪುರ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅನೇಕ ಕಾರ್ಯಕ್ರಮ ಕೂಡ ಹಾಕಿಕೊಂಡಿದ್ದರು. ಅವನ್ನು ಮುಂದುವರೆಸಿಕೊAಡು ಹೋಗಲಾಗುವುದು. ಅಲ್ಲದೆ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸುವ ಮೂಲಕ ಅಭಿವೃದ್ಧಿಪರ ಕಾರ್ಯ ಚುರುಕುಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಅದರ ಭಾಗವಾಗಿ ಸೆ.೭ಮತ್ತು ೮ರಂದು ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯನ್ನು ಕರೆಯಲಾಗಿದೆ. ಇದೇ ಮೊದಲ ಸಲ ಎರಡು ದಿನಗಳ ನಿರಂತರವಾಗಿ ಪ್ರಗತಿ ಪರಿಶೀಲನೆ ಮಾಡುವ ಮೂಲಕ ಎಲ್ಲ ಇಲಾಖೆಗಳ ಪ್ರತಿಯೊಂದು ಕಾರ್ಯಕ್ರಮ ಹಾಗೂ ಚಾಲ್ತಿಯಲ್ಲಿರುವ ಯೋಜನೆ, ಕಾಮಗಾರಿ ಪರಿಪೂರ್ಣವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಈಗಾಗಲೇ ಈ ಕುರಿತು ಜಿಲ್ಲಾಽಕಾರಿ ಹಾಗೂ ಹಿರಿಯ ಅಽಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸಲು ಸಲಹೆ ನೀಡಲಾಗಿದೆ. ಜನಪ್ರತಿನಿಽಗಳ ಹಾಗೂ ಜನರ ಅಪೇಕ್ಷೆ ಕ್ರೋಢಿಕರಿಸಿಕೊಂಡು ಯೋಜನೆಗಳನ್ನು ಹಂತ-ಹAತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಜನರಿಗೆ ಪ್ರತಿಯೊಂದು ಸೇವೆಗಳು ಸ್ಥಳದಲ್ಲಿಯೇ ಸಿಗುವಂತೆ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿರುವ ಮಹತ್ವಾಕಾಂಕ್ಷಿ ಪ್ರಜಾಸೇವಾ ಅಭಿಯಾನ ಸೆ.೫ರಂದು ಸುರಪುರದಲ್ಲಿ ಆಯೋಜಿಸಲಾಗುತ್ತಿದೆ. ಅದಕ್ಕಾಗಿ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ಅಽಕಾರಿಗಳಿಗೆ ಸೂಚನೆ ನೀಡಿದ್ದಾಗಿ ಮಾಹಿತಿ ನೀಡಿದರು.
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು
ಯಾದಗಿರಿ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆಧ್ಯತೆ ನೀಡಿ ಕೆಲಸ ಮಾಡಲಾಗುವುದು. ಸುರಪುರ ತಾಲೂಕಿನ ಬೋನಾಳ ಕೆರೆಗೆ ಹೊಸ ರೂಪ ನೀಡಲು ಯೋಚಿಸಲಾಗುತ್ತಿದೆ. ಅಲ್ಲಿರುವ ಪಕ್ಷಿ ಸಂಕುಲವನ್ನು ಎಲ್ಲರೂ ಕಣ್ತುಂಬಿಕೊಳ್ಳುವAತೆ ಯೋಜನೆ ಮಾಡಲಾಗಿದೆ. ಶಹಾಪುರದಲ್ಲಿರುವ ಮಲಗಿರುವ ಬುದ್ಧನ ಬೆಟ್ಟ ಅಭಿವೃದ್ಧಿಗೆ ಶಾಸಕ ಶರಣಬಸಪ್ಪ ದರ್ಶನಾಪುರ ಸಂಕಲ್ಪ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಒಂದಷ್ಟು ಕೆಲಸಗಳಾಗಿವೆ. ಇನ್ನೂ ಏನೇನು ಬೇಕಾಗುತ್ತದೆ ಅದನ್ನು ನೋಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಷ್ಟೇ ಅಲ್ಲದೆ ಮೌನೇಶ್ವರರ ಕ್ಷೇತ್ರ ತಿಂಥಣಿ, ದೇವರ ದಾಸಿಮಯ್ಯನವರ ಕ್ಷೇತ್ರ ಮುದನೂರ ಸೇರಿ ಇಂತಹ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು ಎಂದು ತಮ್ಮ ಮುಂದಿನ ಯೋಜನೆಗಳನ್ನು ಬಿಚ್ಚಿಟ್ಟರು.
ಯಾದಗಿರಿ ಜಿಲ್ಲೆಯ ಅಭಿವೃದ್ಧಿಪರ ಕೆಲಸಗಳಿಗೆ ವೇಗ ನೀಡಲು ಸೆ.೭ಮತ್ತು ೮ರಂದು ಕೆಡಿಪಿ ಸಭೆ ಕರೆಯಲಾಗಿದೆ. ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿರುವ ಜನರಿಗೆ ಸ್ಥಳದಲ್ಲಿಯೇ ಸೌಲಭ್ಯ ಕಲ್ಪಿಸುವ ಪ್ರಜಾಸೇವಾ ಅಭಿಯಾನ ಸೆ.೫ರಂದು ಸುರಪುರದಲ್ಲಿ ಆಯೋಜಿಸಲಾಗುತ್ತಿದೆ. ಅರ್ಹರಿಗೆ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು.| ಡಾ.ಶರಣಪ್ರಕಾಶ ಪಾಟೀಲ್ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ