ನಿನ್ನೆ ಫೋಟೋ ಬಿಡುಗಡೆ ಆಯ್ತಲ್ವಾ? ಯಾವುದೂ ಮುಚ್ಚಿ ಹೋಗಲ್ಲ: ಎಚ್​​ಡಿಕೆ ಆರೋಪಕ್ಕೆ ಎಂಬಿ ಪಾಟೀಲ್​ ಟಾಂಗ್​ 
ರಾಜ್ಯ

ನಿನ್ನೆ ಫೋಟೋ ಬಿಡುಗಡೆ ಆಯ್ತಲ್ವಾ? ಯಾವುದೂ ಮುಚ್ಚಿ ಹೋಗಲ್ಲ: ಎಚ್​​ಡಿಕೆ ಆರೋಪಕ್ಕೆ ಎಂಬಿ ಪಾಟೀಲ್​ ಟಾಂಗ್​

ಈ ಹಿಂದೆ ಕುಮಾರಸ್ವಾಮಿ ಅವರ ಮನೆಯವರೂ ಮಾಡಿದ್ದರು. ಅದೂ ಫೋಟೋ ನಿನ್ನೆ ಬಿಡುಗಡೆ ಆಯ್ತು ಅಲ್ವಾ? ಯಾವುದೂ ಇಲ್ಲಿ ಮುಚ್ಚಿ ಹೋಗುವುದಿಲ್ಲ. ತಂತ್ರಜ್ಞಾನ ಇದೆ, ಕೃತಕ ಬುದ್ಧಿಮತ್ತೆ (ಎಐ) ಇದೆ ಎಂದರು.

ಬೆಂಗಳೂರು: ಮೈಸೂರು ದಸರಾ ಇತಿಹಾಸದಲ್ಲಿ ಮುಖ್ಯಮಂತ್ರಿಗಳ ಪತ್ನಿ ಪುಷ್ಪಾರ್ಚನೆ ಮಾಡಿರುವುದು ಇದೇ ಮೊದಲು. ಸರ್ಕಾರದ ಶಿಷ್ಟಾಚಾರವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಇದೀಗ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್​ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಕುಮಾರಸ್ವಾಮಿ ಅವರ ಮನೆಯವರೂ ಮಾಡಿದ್ದರು. ಅದೂ ಫೋಟೋ ನಿನ್ನೆ ಬಿಡುಗಡೆ ಆಯ್ತು ಅಲ್ವಾ? ಯಾವುದೂ ಇಲ್ಲಿ ಮುಚ್ಚಿ ಹೋಗುವುದಿಲ್ಲ. ತಂತ್ರಜ್ಞಾನ ಇದೆ, ಕೃತಕ ಬುದ್ಧಿಮತ್ತೆ (ಎಐ) ಇದೆ. ಎಲ್ಲವೂ ಈಗ ಸುಲಭವಾಗಿ ಸಿಗುತ್ತೆ ಎಂದು ಹೇಳುವ ಮೂಲಕ ಎಚ್​ಡಿಕೆ ಆರೋಪಕ್ಕೆ ಕಿಡಿಕಾರಿದ್ದಾರೆ.

ಸಿದ್ದು ಅಸಮಾಧಾನ

ದಸರಾಗೆ ಉಸ್ತುವಾರಿ ಸಚಿವರುಗಳ ನೇಮಕದ ಬಗ್ಗೆ ಸಿದ್ದರಾಮಯ್ಯ ಅವರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಪ್ಪೇನಿದೆ? ಚೆನ್ನಾಗಿ ಆಗ್ಲಿ ಅಂತ ತಾನೇ ನೇಮಕ ಮಾಡಿದ್ದಾರೆ. ಸಿನಿಮಾ ಇಂಡಸ್ಟ್ರಿ ಅವರನ್ನೂ ಕರೆದಿದ್ದರು. ದಸರಾ ನಾಡಹಬ್ಬಕ್ಕೆ ಇನ್ನಷ್ಟು ಮೆರಗು ಸಿಗಲಿ ಎಂದು ಅನೇಕರನ್ನು ಆಹ್ವಾನಿಸಿದ್ದಾರೆ ಎಂದರು.

ದೆಹಲಿಯಲ್ಲಿ ನ.1ಕ್ಕೆ ಪ್ರತಿಭಟನೆ

ಮತಗಳ್ಳತನ ವಿರುದ್ಧದ ಪ್ರತಿಭಟನೆಗೆ ಬುಲಾವ್ ಬಂದಿದೆ. ಆದರೆ, ನವೆಂಬರ್ 01ರಂದು ನಮ್ಮಲ್ಲಿ ಕನ್ನಡ ರಾಜ್ಯೋತ್ಸವವಿದೆ. ಜಿಲ್ಲೆಗಳಲ್ಲಿ ನಾವು ಕನ್ನಡ ಹಬ್ಬವನ್ನು ಮಾಡಬೇಕು. ಅದಕ್ಕೂ ಪ್ರಮುಖ್ಯತೆ ಕೊಡಬೇಕು ಅಲ್ವಾ? ಹೀಗಾಗಿ, ಪ್ರತಿಭಟನೆಯಲ್ಲಿ ಭಾಗಿಯಾಗುವುದರ ಬಗ್ಗೆ ಮುಂದೆ ನಾವು ತಿಳಿಸುತ್ತೇವೆ ಎಂದರು.

ಸ್ಟಿಂಗ್ ವಿಚಾರವಾಗಿ ಕಾಂಗ್ರೆಸ್ ನಾಯಕರು ಮೌನ

ಸ್ಟಿಂಗ್ ಆಪರೇಷನ್​ಗೆ ಒಂದು ನಮಸ್ಕಾರ. ಈಗ ತನಿಖೆ ನಡೆಯುತ್ತಿದೆ, ಹೇಗೆ ಮಾತನಾಡೋದು? ದಯವಿಟ್ಟು ಸ್ಟಿಂಗ್ ಬಗ್ಗೆ ಮಾತ್ರ ಕೇಳಬೇಡಿ ನಮಸ್ಕಾರ ಎಂದು ಹೇಳಿದರು.