ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ತಾಯಿಮತ್ತು ಮಗುವಿನ ನಡುವಿನ ಸಾರ್ವತ್ರಿಕಮಮತೆ ಹಾಗೂ ಕಾಳಜಿಯ ಭಾವನೆಯನ್ನುಕೇಂದ್ರವಾಗಿಟ್ಟುಕೊಂಡು ಭಾರತಮತ್ತು ಇಟಲಿಯ ಕಲಾ ಪರಂಪರೆಯನ್ನುಒಂದೇ ವೇದಿಕೆಯಲ್ಲಿ ಪರಿಚಯಿಸುವ‘ತಾಯಿಯೊಬ್ಬಳು,ಮಾತೃಭಾಷೆಹಲವು’ ವಿಶೇಷ ಕಲಾ ಪ್ರದರ್ಶನವುದೇಶಗಳ ನಡುವಿನ ಸಾಂಸ್ಕೃತಿಕಬಾಂಧವ್ಯವನ್ನು ಮತ್ತಷ್ಟುಬಲಪಡಿಸಿದೆ ಎಂದು ಇಂಧನ ಹಾಗೂಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ಹೇಳಿದರು.
ಬೆಂಗಳೂರಿನನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ಆರ್ಟ್‌ನಲ್ಲಿ ಆಯೋಜಿಸಲಾಗಿರುವಪ್ರದರ್ಶನವನ್ನು ಉದ್ಘಾಟಿಸಿಮಾತನಾಡಿದರು.
ಬೆಂಗಳೂರುತಂತ್ರಜ್ಞಾನ ಮತ್ತು ನವೋದ್ಯಮದಕೇಂದ್ರ ಮಾತ್ರವಲ್ಲ;ಕಲೆ,ಪರಂಪರೆಮತ್ತು ಸಾಂಸ್ಕೃತಿಕ ಸಂವಾದಕ್ಕೂಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ.ಇಂತಹಅಂತರರಾಷ್ಟ್ರೀಯ ಪ್ರದರ್ಶನಗಳುಬೆಂಗಳೂರಿನ ಜಾಗತಿಕ ಸಾಂಸ್ಕೃತಿಕಪ್ರವಾಸೋದ್ಯಮದ ಸ್ಥಾನಮಾನವನ್ನುಮತ್ತಷ್ಟು ಬಲಪಡಿಸುತ್ತವೆ.ಕರ್ನಾಟಕವು500ಕ್ಕೂಹೆಚ್ಚು ಕೇಂದ್ರ ಸಂರಕ್ಷಿತಸ್ಮಾರಕಗಳು ಹಾಗೂ ನಾಲ್ಕು ಯುನೆಸ್ಕೋವಿಶ್ವ ಪರಂಪರೆಯ ತಾಣಗಳನ್ನುಹೊಂದಿದ್ದು,ರಾಜ್ಯದಶ್ರೀಮಂತ ಪರಂಪರೆಯನ್ನು ಸಾಂಸ್ಕೃತಿಕಪ್ರವಾಸೋದ್ಯಮದೊಂದಿಗೆ ಮತ್ತಷ್ಟುಪರಿಣಾಮಕಾರಿಯಾಗಿ ಜೋಡಿಸುವಅಗತ್ಯವಿದೆ ಎಂದು ಸಚಿವರುವಿವರಿಸಿದರು.
ಪ್ರದರ್ಶನದಲ್ಲಿಇಟಲಿಯ ಪ್ರಸಿದ್ಧ ಪುನರುಜ್ಜೀವನಕಾಲದ ಕಲಾವಿದ ಸ್ಯಾಂಡ್ರೊಬೊಟಿಚೆಲ್ಲಿ ಅವರ ಮೂಲ ಮಡೊನ್ನಾಆ್ಯಂಡ್ ಚೈಲ್ಡ್ ಕಲಾಕೃತಿಯ ಜೊತೆಗೆಪ್ರಾಚೀನ ಎಟ್ರಸ್ಕನ್ ಶಿಲ್ಪಗಳು,ಕುಷಾಣಕಾಲದ ಹಾರಿತಿ ಶಿಲ್ಪಗಳು ಹಾಗೂರಾಜಸ್ಥಾನದ ಸ್ಕಂದಮಾತಾ ಶಿಲ್ಪಗಳುಸೇರಿ ಅಪರೂಪದ ಭಾರತೀಯ ಕಲಾಸಂಪತ್ತನ್ನು ಪ್ರದರ್ಶಿಸಲಾಯಿತು.ಸೆ.20ರವರೆಗೆಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಇಟಲಿಯ ಬೆಂಗಳೂರಿನ ಕಾನ್ಸುಲ್ಜನರಲ್ ಜಿಯಾಂಡೊಮೆನಿಕೊ ಮಿಲಾನೊ,ಪ್ರವಾಸೋದ್ಯಮಇಲಾಖೆ ಕಾರ್ಯದರ್ಶಿ ಡಾ.ರಾಮ್ಪ್ರಸಾತ್ ಮನೋಹರ್,ಪ್ರೆಸ್ಟೀಜ್ಗ್ರೂಪ್‌ನ ರಿಜ್ವಾನ್ ರಜಾಕ್,ಎನ್‌ಜಿಎಂಎನಿರ್ದೇಶಕ ಪ್ರಿಯಾಂಕ ಮೇರಿಫ್ರಾನ್ಸಿಸ್,ಕ್ಯುರೇಟರ್‌ಗಳಾದಪ್ರೊ.ನಾಮನ್ಅಹುಜಾ ಮತ್ತು ಆಂಡ್ರಿಯಾ ಅನಸ್ತಾಸಿಯೊಉಪಸ್ಥಿತರಿದ್ದರು.