ಸಚಿವ ಡಾ.ಅಜಯಸಿಂಗ್​ 
ರಾಜ್ಯ

ಇಂದು ಕಲಬುರಗಿಗೆ ಸಚಿವ ಡಾ.ಅಜಯಸಿಂಗ್​

ಕಲಬುರಗಿ: ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯಸಿಂಗ್​ ಅವರು ಪ್ರಥಮ ಸಲ ಶನಿವಾರ ನಗರಕ್ಕೆ ಆಗಮಿಸುತ್ತಿದ್ದು, ಭರ್ಜರಿ ಸ್ವಾಗತಿಸಲು ಕೈಪಡೆ ಹಾಗೂ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರೆ. ಹೈದರಾಬಾದ್​ನಿಂದ ಮಧ್ಯಾಹ್ನ 1.30ಕ್ಕೆ ನಗರಕ್ಕೆ ಆಗಮಿಸಲಿದ್ದು, ನೆಹರು ಗಂಜ್​ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಡಾ.ಎಸ್​.ಎಂ.ಪಂಡಿತ ರಂಗಮಂದಿರಕ್ಕೆ ಕರೆ ತರಲಾಗುತ್ತದೆ. ಬಳಿಕ ಜಿಲ್ಲಾ ಕಾಂಗ್ರೆಸ್​ನಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಪಕ್ಷದ ವರಿಷ್ಠರು, ಕೆಪಿಸಿಸಿ ಅಧ್ಯಕ್ಷರು ಸೇರಿ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ.