ಕಲಬುರಗಿ : ಜಿಲ್ಲೆಯ ಆಳಂದ ತಾಲೂಕಿನ. ವಿವಿಧ ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕೈಗೆತ್ತಿಕೊಂಡಿರುವ 47.50 ಕೋಟಿ ರೂ.ಯೋಜನೆಗೆ ಇಂದು ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು.
2025-26ನೇ ಸಾಲಿನ APB ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಂಡಾಳದಿಂದ ಮಟಕಿ, ನಿರಗುಡಿದಿಂದ ಪಡಸಾವಳಿ, ಬಸವಂತವಾಡಿದಿಂದ ನಿಂಬರ್ಗಾ, ಹಳ್ಳಿಸಲಗರದಿಂದ ಕೊಡಲಹಂಗರಗಾ, ಮತ್ತು ಬಂಗರಗಾ-ಚಿತಲಿ-ಸಾಲೆಗಾಂವದಿಂದ ಹೆಬಳಿ ನಾಲಾಕ್ಕೆ ಅಡ್ಡಲಾಗಿ ಅಣೆಕಟ್ಟು/ಬಿಸಿಬಿಗಳ ನಿರ್ಮಾಣ ಮತ್ತು ನಾಲಾ ಅಗೆತ ಕಾಮಗಾರಿಗಳ (ಅಂದಾಜು ಮೊತ್ತ; 47.50 ಕೋಟಿ ರೂ) ಇಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ ಎಸ್ ಬೋಸ್ ರಾಜು,ಚಾಲನೆ ನೀಡಿದ ಬಳಿಕ ನಾತನಾಡಿ, ಇನ್ನಷ್ಟು ಯೋಜನೆ ನೀಡಲಾಗುವುದು ಎಂದರು.
ಕರ್ನಾಟಕ ರಾಜ್ಯ ನೀತಿ ಯೋಜನೆ ಉಪಾಧ್ಯಕ್ಷ ಬಿ. ಆರ್ ಪಾಟೀಲ್ ಸರ್ಕಾರದ ಕಾರ್ಯದರ್ಶಿ ಬಿ.ಕೆ ಪವಿತ್ರಾ,, ಕೆಎಂಎಫ್ ಅದ್ಯಕ್ಷ ಅರ್.ಕೆ.ಪಾಟೀಲ ಸೇರಿದಂತೆ ಇಂಜಿನಿಯರಿಂಗ್ ಅಧಿಕಾರಿಗಳು ಇದ್ದರು.