ಹಟ್ಟಿಚಿನ್ನದಗಣಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗಣಿ ಕಂಪನಿಯ ಮುಖ್ಯದ್ವಾರದ ಮುಂದೆ ಕಪ್ಪು ಪಟ್ಟಿ ಧರಿಸಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ರ‌್ಯಾಲಿ ನಡೆಸಿದರು. ಕಾರ್ಮಿಕ ಸಂಘದ ಕಾರ್ಯದರ್ಶಿ ವೆಂಕೋಬ್ ಮಿಯ್ಯಪುರ, ಕಾರ್ಮಿಕರಾದ ಗೌಸ್‌ಮಿಯಾ, ರಮೇಶ ಬಾಬು, ನಾಗರಾಜ್, ಹನೀಫ್, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್ ನೆಲೋಗಿ ಇತರರಿದ್ದರು.
- ಕಪ್ಪು ಪಟ್ಟಿ ಧರಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ
ಹಟ್ಟಿಚಿನ್ನದಗಣಿ: ಹಲವು ವರ್ಷಗಳಿಂದ ವಿವಿಧ ಬೇಡಿಕೆ ಈಡೇರಿಸದ ಚಿನ್ನದಗಣಿ ಆಡಳಿತ ಮಂಡಳಿ ವಿರುದ್ಧ ಗಣಿ ಕಾರ್ಮಿಕರು ಕಪ್ಪುಪಟ್ಟಿ ಧರಿಸಿ ಆರಂಭಿಸಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.
ಕಪ್ಪು ಪಟ್ಟಿ ಧರಿಸಿ, ಕಪ್ಪು ಬಾವುಟಗಳನ್ನು ಪ್ರದರ್ಶಿಸಿ ಮಂಗಳವಾರ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ಅನರ್ಹತೆ (ಮೆಡಿಕಲ್ ಅನ್‌ಫಿಟ್) ಯೋಜನೆ ಜಾರಿಯಾಗಿಲ್ಲ. ವೇತನ ಪರಿಷ್ಕರಣೆ ಚರ್ಚೆ ಆರಂಭಿಸಿಲ್ಲ.
ಬಾಕಿ ಇರುವ ಎಚ್‌ಆರ್‌ಎ, ಬೋನಸ್ ವಿವಿಧ ಸೌಲಭ್ಯಗಳ ವಿಚಾರದಲ್ಲಿಯೂ ಆಡಳಿತ ಮಂಡಳಿ ಮೌನ ವಹಿಸಿದೆ ಎಂದು ಕಾರ್ಮಿಕರು ದೂರಿದರು.
ಕೆಲಸವನ್ನು ಬಹಿಷ್ಕರಿಸದೆ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದು, ಬೇಡಿಕೆ ಈಡೇರುವವರೆಗೂ ಹಂತ ಹಂತವಾಗಿ ಹೋರಾಟ ಮುಂದುವರಿಯಲಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಕಾರ್ಮಿಕ ಸಂಘದ ಕಾರ್ಯದರ್ಶಿ ವೆಂಕೋಬ್ ಮಿಯ್ಯಪುರ, ಕಾರ್ಮಿಕರಾದ ಗೌಸ್‌ಮಿಯಾ, ರಮೇಶ ಬಾಬು, ನಾಗರಾಜ್, ಹನೀಫ್, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್ ನೆಲೋಗಿ, ಬಾಬು ಸಾಗರ್, ಮುನೀರುದ್ದೀನ್, ಹನುಮಂತಗೌಡ, ಗುರುರಾಜ್, ಅಮರೇಶ, ರಮೇಶ ವೀರಾಪುರ, ಮೌನುದ್ದೀನ್, ಸಂಗಯ್ಯಸ್ವಾಮಿ, ಫಕೃದ್ದೀನ್, ಪೆಂಚಲಯ್ಯ, ಸೋಮಣ್ಣ ನಾಯಕ್, ರಾಜೇಶ್ವರಿ, ಹನುಮಂತ್ರಾಯ, ಹುಸೇನ್ ಬಾಷಾ, ಬಸವರಾಜ್, ಶ್ರೀಧರ್, ಅಲ್ಲಾಬಕ್ಷಾ, ಯಮನೂರು, ಖಾಜಾ, ಸಿಐಟಿಯು, ಎಐಟಿಯುಸಿ ಸದಸ್ಯರಿದ್ದರು.