ಹೈನುಗಾರಿಕೆಗೆ ಹೆಸರಾದ ಮುಗಳಿ 
ರಾಜ್ಯ

ಗಡಿಗ್ರಾಮ ಮುಗಳಿಯಲ್ಲಿ ಕ್ಷೀರಕ್ರಾಂತಿ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಗಡಿ ಗ್ರಾಮದಲ್ಲೊಂದು ಕ್ಷೀರಕ್ರಾಂತಿ
  • ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮ ಮಾದರಿ
  • ಹೈನುಗಾರಿಕೆಯಲ್ಲಿ ಹೆಸರು ಮಾಡಿದ ಗ್ರಾಮ

ಗಡಿಭಾಗದಲ್ಲಿ ಕ್ಷೀರಕ್ರಾಂತಿ
| ಹೈನುಗಾರಿಕೆಯಲ್ಲಿ ಹೆಸರು ಮಾಡಿದ ಮುಗಳಿ | ಗ್ರಾಮದಲ್ಲಿಯೇ ಬರೋಬರಿ ೨,೫೦೦ ಹಸು
ಆನಂದ ಭಮ್ಮಣ್ಣವರ ಚಿಕ್ಕೋಡಿ

ಗಡಿಭಾಗ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಜನ ಸಂಖ್ಯೆಗಿಂತ ಜಾನುವಾರುಗಳ ಸಂಖ್ಯೆಯೇ ಹೆಚ್ಚಾಗಿದ್ದು, ಗ್ರಾಮದಲ್ಲಿ ಪ್ರತಿದಿನ 14 ಸಾವಿರ ಲೀಟರ್ ಹಾಲು ಮಾರಾಟ ಮಾಡುವ ಮೂಲಕ ಪುಟ್ಟ ಗ್ರಾಮ ಗಡಿಭಾಗದಲ್ಲಿ ಕ್ಷೀರಕ್ರಾಂತಿ ಮಾಡುತ್ತಿದೆ.
ಇಂದು ಹೈನುಗಾರಿಕೆಯಲ್ಲಿ ತೊಡಗುವವರ ಸಂಖ್ಯೆ ದಿನೇ ದಿನೆ ಕ್ಷೀಣಿಸುತ್ತಿದೆ. ಯುವ ಜನತೆ ಕೃಷಿ, ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಆರ್ಥಿಕದಿಂದ ರೈತರು ರಾಸುಗಳ ವೆಚ್ಚದಿಂದ ದೂರವಾಗುತ್ತಾರೆ. ಆದರೆ, ಮುಗಳಿ ಗ್ರಾಮದಲ್ಲಿ ಕಳೆದ ೨೦ ವರ್ಷದಿಂದ ಈಚೆಗೆ ಪಶುಪಾಲನೆಗೆ ಒತ್ತು ನೀಡಲಾಯಿತು, ಗ್ರಾಮದ ಪ್ರತಿ ಹ, ಎಮ್ಮೆ ಸಾಕಣೆ ಮಾಡುತ್ತಿರುವುದು ವಿಶೇಷ.
ಗ್ರಾಮದಲ್ಲಿ 2,500 ಹಸುಗಳು: ಮುಗಳಿ ಗ್ರಾಮದಲ್ಲಿರುವ ಜನಸಂಖ್ಯೆಗಿಂತ ಹಸು, ಎಮ್ಮೆಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಗ್ರಾಮದಲ್ಲಿ ಒಟ್ಟು 3,500 ಜನಸಂಖ್ಯೆಯಿದೆ. ಆದರೆ, ಗ್ರಾಮದಲ್ಲಿ ಜರ್ಸಿ ತಳಿಯ 2,500 ಹಸುಗಳು, 200 ಎಮ್ಮೆ ಹೀಗೆ ಒಟ್ಟು 4 ಸಾವಿರಕ್ಕೂ ಅಧಿಕ ಜಾನುವಾರಗಳಿವೆ. ಒಬ್ಬ ರೈತ ಕನಿಷ್ಠ 10 ಹಸುಗಳಿಂದ ಗರಿಷ್ಠ 200 ಹಸುಗಳನ್ನು ಸಾಕಲಾಗುತ್ತಿದೆ.
ಮಳೆಯಾಶ್ರಿತ ಪ್ರದೇಶವಾಗಿರುವ ಈ ಗ್ರಾಮ ನಾಗರಮುನ್ನೋಳಿ ಹೋಬಳಿಯ ಬರಪೀಡಿತ ಪ್ರದೇಶವನ್ನು ಗುರುತಿಸಬಹುದು. ಆದರೆ, ೨೦೧೦ರ ಆಸುಪಾಸಿನಲ್ಲಿ ಗ್ರಾಮದಲ್ಲಿ ಪಶುಸಂಗೋಪಣೆ ಕಡೆಗೆ ಗ್ರಾಮಸ್ಥರ ಆಸಕ್ತಿ ಹೆಚ್ಚಾದ ಪರಿಣಾಮ ಇಂದು ಪ್ರತಿ ಮನೆಯಲ್ಲಿಯೂ ಜಾನುವಾರುಗಳಿದ್ದು, ಹಂತ ಹಂತವಾಗಿ ಕ್ಷೀರ ಉತ್ಪಾದನೆಯಲ್ಲಿ ಯಶಸ್ಸು ಕಂಡಿರುವ ಇಲ್ಲಿಯ ಜನ ಉದ್ಯೋಗಕ್ಕಾಗಿ ಬೇರೆ ಕಡೆ ಹೋಗದೆ ಹೈನುಗಾರಿಕೆಗೆ ಉದ್ಯಮದ ರೂಪ ನೀಡಿದ್ದಾರೆ.
ನಿತ್ಯ14 ಸಾವಿರ ಲೀಟರ್ ಹಾಲು: ಗ್ರಾಮದಲ್ಲಿ ಸರ್ಕಾರಿ, ಅರೆಸರ್ಕಾರಿ ನೌಕರರು, ಯುವಕರು, ಕೃಷಿಕರು ಸೇರಿರುವ ಜಾನುವಾರುಗಳ ಪೋಷಣೆಯನ್ನೇ ಉಪಕಸುಬನ್ನಾಗಿ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ೭೦ಕ್ಕೂ ಅಧಿಕ ಡೇರಿ ಫಾರ್ಮ್‌ಗಳು ತಲೆಯೆತ್ತಿವೆ. ನಿತ್ಯ ಗ್ರಾಮದಿಂದ 14 ಸಾವಿರ ಲೀಟರ್ ಹಾಲು ಕರ್ನಾಟಕ ಹಾಗೂ ಮಹಾರಾಷ್ಟçದ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿಲ್ಲ.
ಮಾದರಿಯಾದ ಗ್ರಾಮ: ಚಿಕ್ಕೋಡಿ ತಾಲೂಕು ಸೇರಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ರೈತರು, ಯುವಕರು ಮುಗಳಿ ಗ್ರಾಮದ ಹೈನುಗಾರಿಕೆಯ ಬಗ್ಗೆ ತಿಳಿದುಕೊಳ್ಳಿ ಆಗಮಿಸುತ್ತಾರೆ. ಇಲ್ಲಿನ ರೈತರು ಹೈನುಗಾರಿಕೆಯ ಬಗ್ಗೆ ತಿಳಿದುಕೊಳ್ಳಲು ಬರುವ ಯುವ ರೈತರಿಗೆ ಹಸುಗಳ ತಳಿ, ಮೇವು, ಪೌಷ್ಠಿಕ ಆಹಾರ ಸೇರಿ ಪಾಲನೆ-ಪೋಷಣೆ ಮಾಹಿತಿ ಮಾಹಿತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಸುಗಳ ಸಾಕಣೆಗೆ ಗ್ರಾಮದ ರೈತರು ಪಾತ್ರರಾಗಿದ್ದಾರೆ.
---ಬಾಕ್ಸ್---
ಜಿಲ್ಲೆಯಲ್ಲಿ ಮಳೆ ಅಭಾವದಿಂದ ಉಂಟಾದ ಮೇವಿನ ಕೊರತೆ ನಡುವೆಯು ಹಸು ಸಾಕಣೆಯಲ್ಲಿ ೭೨,೧೮೦ ಹಸುಗಳನ್ನು ಹೊಂದುವ ಮೂಲಕ ರಾಯಬಾಗ ತಾಲೂಕು ಪ್ರಥಮ, ಅಥಣಿ (೫೭,೭೧೭) ದ್ವಿತೀಯ ಹಾಗೂ ಮೂಡಲಗಿ(೪೧,೭೦೭) ಹಸುಗಳನ್ನು ಹೊಂದಿ ತೃತೀಯ ಸ್ಥಾನದಲ್ಲಿದೆ.
--ಕೋಟ್--
ಹೈನುಗಾರರಿಗೆ ಹಾಗೂ ಕೃಷಿಯಲ್ಲಿ ಶ್ರಮಪಟ್ಟು ದುಡಿದರೆ ಕಂಡಿತ ಯಶಸ್ಸು ದೊರೆಯುತ್ತದೆ. ಹೈನುಗಾರಿಕೆ ಲಾಭದ ಉದ್ಯಮವಾಗಿದೆ. ನಮ್ಮ ಮನೆಯಲ್ಲಿ ೨೫ ಹಸುಗಳನ್ನು ಸಾಕುತ್ತಿಜ್ದೆÃವೆ. ಸಾಕಷ್ಟು ಆದಾಯ ಬರುತ್ತಿದೆ.
| ಚೇತನ ಬಡಿಗೇರ ಯುವ ಕೃಷಿಕ, ಮುಗಳಿ
==========
-- ಕೋಟ್--
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಿದೆ. ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಒತ್ತು ನೀಡಲಾಗಿದೆ. ಹೈನುಗಾರಿಕೆಗೆ ನಿರಂತರ ಆದಾಯದ ಮೂಲವಾಗಿದೆ. ಮುಗಳಿ ಗ್ರಾಮದ ರೈತರು ಹೈನುಗಾರಿಕೆಯಲ್ಲಿ ತೊಡಿಸಿಕೊಂಡು ಮಾದರಿಯಾಗಿದ್ದಾರೆ.
| ಡಾ.ರವಿ ಸಾಲಿಗೌಡರ
ಉಪ ನಿರ್ದೇಶಕ, ಪಶು ಸಂಗೋಪನೆ ಇಲಾಖೆ, ಬೆಳಗಾವಿ