ಸವದತ್ತಿ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದ ಅವರಿಗೆ ಕರ್ನಾಟಕ ರಣಾ ವೇದಿಕೆ ಸವದತ್ತಿ ತಾಲೂಕು ಟಕ ದಿಂದ ಮನವಿ ಸಲ್ಲಿಸಲಾಯಿತು. ಗಂಗಪ್ಪ ಇನಾಮತಿ, ಪ್ರಕಾಶ ಕಪಲಿ, ಮಲ್ಲಿಕಾರ್ಜುನ ಬಿಳಗಿ, ಸವದತ್ತಿ, ಹಡಗಲಿ, ಅಸುಂಡಿ, ಕರೀಕಟ್ಟಿ, ಯಡಳ್ಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 
ರಾಜ್ಯ

ಎಂಇಎಸ್​ ಪುಂಡನ ವಿರುದ್ಧ ಕ್ರಮಕ್ಕೆ ಆಗ್ರಹ

ಸವದತ್ತಿ: ಕನ್ನಡ, ನಾಡು, ನುಡಿ, ನೆಲ&ಜಲ ಹಾಗೂ ಭಾಷಾ ವಿಷಯಗಳಲ್ಲಿ ಪದೆ ಪದೇ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಎಂಇಎಸ್​ ಕಾರ್ಯಕರ್ತ ಶುಭಂ ವಿಕ್ರಾಂತ ಶೇಳಕೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸವದತ್ತಿ ತಾಲೂಕು ಟಕದ ಪ್ರಧಾನ ಕಾರ್ಯದರ್ಶಿ ಗಂಗಪ್ಪ ಇನಾಮತಿ ಆಗ್ರಹಿಸಿದರು. ಎಂಇಎಸ್​ ಕಾರ್ಯಕರ್ತ ಶುಭಂ ವಿಕ್ರಾಂತ ಶೇಳಕೆ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದ ಅವರಿಗೆ ಈಚೆಗೆ ಮನವಿ ಸಲ್ಲಿಸಿ ಮಾತನಾಡಿ, ಕನ್ನಡ ಹಾಗೂ ಮರಾಠಿ ಜನರ ನಡುವೆ ದ್ವೇಷದ ಬೆಂಕಿ ಹಚ್ಚುವ ಪ್ರಯತ್ನ ನಡೆಯುತ್ತಿದ್ದು, ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಪ್ರಕಾಶ ಕಪಲಿ, ಮಲ್ಲಿಕಾರ್ಜುನ ಬಿಳಗಿ, ಸವದತ್ತಿ, ಹಡಗಲಿ, ಅಸುಂಡಿ, ಕರೀಕಟ್ಟಿ, ಯಡಳ್ಳಿ ಹಾಗೂ ಕೆಂಚರಾಮನಹಾಳ ಗ್ರಾಮಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇತರರಿದ್ದರು.