ಮರ್ಸಿಡಿಸ್ ಬೆಂಜ್ ಇವಿ ಕಾರು 
ರಾಜ್ಯ

ಮರ್ಸಿಡಿಸ್ ಬೆಂಜ್ ಇ.ವಿ. ಕಾರು ಮಾರುಕಟ್ಟೆಗೆ: ಮೂರು ಮಾದರಿಯ ವಾಹನಗಳು-Mercedes-Benz

ಬೆಂಗಳೂರು: ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯಾದ ಮರ್ಸಿಡಿಸ್ ಬೆಂಜ್ ನೂತನವಾಗಿ ತಯಾರಿಸಿರುವ ವಿದ್ಯುತ್‌ಚಾಲಿತ (ಇ.ವಿ.) ‘ಸಿಎಲ್‌ಎ ಬಿಇವಿ’ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಮರ್ಸಿಡಿಸ್-ಬೆಂಜ್, ಬ್ಯಾಟರಿ ಎಲೆಕ್ಟ್ರಿಕ್ ವಾಹನ (ಬಿಇವಿ) ವಿಭಾಗದಲ್ಲಿ ಹೊಸ ಅಧ್ಯಾಯ ಬರೆದಿದೆ.
ಮರ್ಸಿಡಿಸ್ ಮಾಡ್ಯುಲರ್ ಆರ್ಕಿಟೆಕ್ಚರ್ (ಎಂಎಂಎ) ಆಧಾರಿತ ವಾಹನ ಇದಾಗಿದೆ. ವಿವಿಧ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಕಾರನ್ನು ವಿಶಿಷ್ಟವಾಗಿ ತಯಾರಿಸಲಾಗಿದೆ. ‘ಟಾಪ್ ಎಂಡ್, ಸಿಎಲ್‌ಎ ಲಾಂಚ್ ಎಡಿಷನ್, ಲಾಂಗ್ ರೇಂಜ್ ಸಿಎಲ್‌ಎ 250 ಪ್ಲೆಸ್ ಮತ್ತು ಸ್ಟ್ಯಾಂಡರ್ಡ್ ರೇಂಜ್ ಸಿಎಲ್‌ಎ 200’ ಎಂಬ ಮೂರು ಮಾದರಿಗಳಲ್ಲಿರುವ ಈ ಕಾರುಗಳು ಗ್ರಾಹಕರ ಮನಸೆಳೆಯುತ್ತಿವೆ.
‘ಸಿಎಲ್ಎ ಬಿಇವಿ ಲಾಂಚ್ ಎಡಿಷನ್’ ಶ್ರೇಣಿಯ ಕಾರಿನ ಬೆಲೆ 64 ಲಕ್ಷ ರೂ., ಸಿಎಲ್ಎ 250 ಪ್ಲೆಸ್ ಲಾಂಗ್ ರೇಂಜ್ ಬೆಲೆ 59 ಲಕ್ಷ ರೂ. ಮತ್ತು ಸಿಎಲ್ಎ 200 ಸ್ಟ್ಯಾಂಡರ್ಡ್ ರೇಂಜ್ ಬೆಲೆ 55 ಲಕ್ಷ ರೂ.ನಿಂದ ಆರಂಭವಾಗಲಿದೆ.
ಹೊಸ ಪೀಳಿಗೆಯ ಗ್ರಾಹಕರಿಗಾಗಿ ಕಾರು ವಿನ್ಯಾಸಗೊಳಿಸಲಾಗಿದೆ. ವಿನ್ಯಾಸದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಇಂದಿನ ಯುವ ಗ್ರಾಹಕರು, ಬ್ರ್ಯಾಂಡ್‌ನ ಶಕ್ತಿ, ಉತ್ಪನ್ನದ ಗುಣಮಟ್ಟ, ಸೊಗಸಾದ ಡಿಜಿಟಲ್ ಅನುಭವ ಮತ್ತು ಆಕರ್ಷಕ ವಿನ್ಯಾಸದ ಆಧಾರದಲ್ಲಿ ಕಾರು ಅನ್ನು ಆಯ್ಕೆ ಮಾಡಲಿದ್ದಾರೆ. ಮರ್ಸಿಡಿಸ್ ಬೆಂಜ್‌ನ ಆಕರ್ಷಣೆಯನ್ನು ಪ್ರತಿಬಿಂಬಿಸುವ ಈ ಕಾರು, ಎಲೆಕ್ಟ್ರಿಕ್ ಮತ್ತು ಸಾಫ್ಟ್‌ವೇರ್ ಆಧಾರಿತ ಪರಿಕರಗಳನ್ನು ಅಳವಡಿಸಲಾಗಿದೆ.