drug ಮಧುಗಿರಿಯಲ್ಲಿ ಹಮ್ಮಿಕೊಂಡಿದ್ದ ಡ್ರಗ್ಸ್​ಮುಕ್ತ ಕರ್ನಾಟಕ ಕಾರ್ಯಕ್ರಮವನ್ನು ಶಾಸಕ ಕೆ.ಎನ್​. ರಾಜಣ್ಣ ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಡಿವೈಎಸ್ಪಿ ಮಂಜುನಾಥ್​, ತಹಸೀಲ್ದಾರ್​ ನಂದಿನಿ, ಆರೋಗ್ಯ ಶಿಕ್ಷಣಾಧಿಕಾರಿ ಧರಣೀಶ್​ ಗೌಡ, ತಾಪಂ ಇಓ ಉತ್ತಮ್​, ಬಿಇಓ ಹನುಮಂತರಾಯಪ್ಪ ಇತರರಿದ್ದರು.  
ರಾಜ್ಯ

ಮಾನಸಿಕ ದೌರ್ಬಲ್ಯ ಡ್ರಗ್ಸ್​ ಸೇವನೆ ಕಾರಣ drug

ಮಧುಗಿರಿ: ಮಾದಕ ದ್ರವ್ಯ ಹಾಗೂ ವ್ಯಸನಮುಕ್ತ ರಾಜ್ಯವನ್ನಾಗಿ ರೂಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಪೊಲೀಸ್​ ಇಲಾಖೆಯಿಂದ ಡ್ರಗ್ಸ್​ ಬೇಡ ಬ್ರೋ ಹಾಗೂ ಆಪರೇಷನ್​ ರೈಸ್​ ಎಂಬ ವಿಶೇಷ ಅಭಿಯಾನ ಆರಂಭಿಸಿದೆ ಎಂದು ಶಾಸಕ ಕೆ.ಎನ್​.ರಾಜಣ್ಣ ತಿಳಿಸಿದರು.
ಕನ್ನಡ ಭವನದಲ್ಲಿರುವ ಕೆ.ಎನ್​.ರಾಜಣ್ಣ ಸಭಾಂಗಣದಲ್ಲಿ ಬುಧವಾರ ತುಮಕೂರು ಜಿಲ್ಲಾ, ಮಧುಗಿರಿ ಉಪ ವಿಭಾಗದ ಪೊಲೀಸ್​ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡ್ರಗ್ಸ್​ಮುಕ್ತ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಅಭಿಯಾನದ ಮೂಲಕ ಮಧುಗಿರಿಯನ್ನು ನಶೆಮುಕ್ತ ಕ್ಷೇತ್ರವನ್ನಾಗಿ ರೂಪಿಸಿ, ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸಲು ಅಗತ್ಯ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಸ್ವಯಂ ನಿಯಂತ್ರಣ ಅಳವಡಿಸಿಕೊಳ್ಳಬೇಕು. ಡ್ರಗ್ಸ್​ ಸೇವನೆಯಿಂದ ಮಾನಸಿಕ ದೌರ್ಬಲ್ಯ ಉಂಟಾಗುತ್ತದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ನೋಟ್​ ಪುಸ್ತಕ, ಸಮವಸ್ತ್ರ ವಿತರಣೆ ಹಾಗೂ ವಸತಿಯುಕ್ತ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದರು. drug
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಯುವ ಜನತೆ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ ಉತ್ತಮ ಆಹಾರ ಚಟುವಟಿಕೆಗಳನ್ನು ರೂಢಿಸಿಕೊಳ್ಳುವ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖಂಡ ಕುರುಬರಹಳ್ಳಿ ಹರ್ಷ, ಮಿಡಿಗೇಶಿ ಪಿಎಸ್​ಐ ರವೀಂದ್ರ, ಕೊಡಿಗೇನಹಳ್ಳಿ ಪಿಎಸ್​ಐ ರಾಜೇಶ್​, ಮಧುಗಿರಿ ಪಿಎಸ್​ಐ ಚಂದ್ರಶೇಖರ್​, ಪಾಲಿಟೆಕ್ನಿಕ್​ ಕಾಲೇಜು ಪ್ರಾಂಶುಪಾಲ ರವಿಪ್ರಕಾಶ್​, ವಲಯ ಅರಣ್ಯಾಧಿಕಾರಿ ಸುರೇಶ್​ ಇದ್ದರು.