Mental peace through bhajans 
ರಾಜ್ಯ

ಭಜನೆಯಿಂದ ಮಾನಸಿಕ ನೆಮ್ಮದಿ

ಚಿಕ್ಕಬಳ್ಳಾಪುರ ಡೆಸ್ಕ್
ಪಾತಪಾಳ್ಯ: ಭಜನೆಯಿಂದ ಜ್ಞಾನ, ಏಕಾಗ್ರತೆ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಶಿಕ್ಷಕ ನಾಗರಾಜರೆಡ್ಡಿ ತಿಳಿಸಿದರು.
ಕುರ್ರಪಲ್ಲಿ ಶ್ರೀ ಯೋಗಿ ನಾರೇಯಣ ಸ್ವಾಮಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಭಜನೆಗೆ ಚಾಲನೆ ನೀಡಿ ಮಾತನಾಡಿ, ಭಜನೆಗೆ ಅಪಾರವಾದ ಶಕ್ತಿಯಿದೆ. ದೇವರನ್ನು ಒಳಿಸಿಕೊಳ್ಳುವ ಸುಲಭ ಮಾರ್ಗ. ಹಿರಿಯರು ಹಳ್ಳಿಗಳಲ್ಲಿ ವಾರಕ್ಕೊಮ್ಮೆ ಒಂದೆಡೆ ಸೇರಿ ಭಜನೆ, ಕೋಲಾಟ, ಜನಪದಗೀತೆ, ಪಂಡರಿ ಭಜನೆ, ಚಕ್ಕಲ ಕೋಲಾಟ ಮುಂತಾದವುಗಳನ್ನು ಆಡುತ್ತಿದ್ದರು. ಇತ್ತೀಚೆಗೆ ಮೊಬೈಲ್​, ಟಿ.ವಿ ಮುಂತಾದ ಮಾಧ್ಯಮಗಳಿಗೆ ಮಾರು ಹೋಗಿ ಜಾನಪದ ಕಲೆಗಳು ಮಾಯವಾಗುತ್ತಿವೆ. ಗ್ರಾಮೀಣ ಯುವಕರು ಭಜನೆ, ಸಾಂಸತಿಕ ಚಟುವಟಿಕೆಗಳನ್ನು ಕಲಿತು ಪ್ರದರ್ಶಿಸಿದಾಗ ನಾಡು ನುಡಿ, ಸಂಸತಿಯನ್ನು ಬೆಳೆಸಲು ಸಾಧ್ಯ ಎಂದರು.
ಕುರ್ರಪಲ್ಲಿಯೋಗಿ ನಾರೇಯಣ ಭಜನೆ ಮಂಡಳಿ ಅಧ್ಯಕ್ಷ ಬೈಯಪ್ಪಸ್ವಾಮಿ ಮಾತನಾಡಿ, ಮನುಷ್ಯ ಜೀವನದ ಮುಖ್ಯ ಉದ್ದೇಶ ಭಗವಂತನ ಸಾಕ್ಷಾತ್ಕಾರ. ಮಾನವನ ಅಂತರಂಗ ಶುದ್ಧಿಗಾಗಿ ದಿವ್ಯತೆಯಿಂದ ದೊರಕುವ ಸಾರ್ಥಕತೆ ಭಾವನೆಯಿಂದ ಸುಖ, ನೆಮ್ಮದಿ ಕಾಣಲು ಸಾಧ್ಯ ಎಂದರು.ನಿವೃತ್ತ ಶಿಕ್ಷಕ ವೆಂಕಟರೆಡ್ಡಿ, ಪಾಪಿರೆಡ್ಡಿ, ನರಸಿಂಹಪ್ಪ, ಬೈರೆಡ್ಡಿ, ವೆಂಕಟರವಣ, ಅಂಜಿನಮ್ಮ, ನಾರಾಯಣಮ್ಮ ಇದ್ದರು.