ಗಂಗಾವತಿ ಜವಾಹರ ನಗರದ ಶ್ರೀ ಹನುಮಂತ ದೇವರ ದೇವಾಲಯದಲ್ಲಿ ಹಮ್ಮಿಕೊಂಡ ಶ್ರೀ ಮದ್ ಯೋಗೀಶ್ವರ ಯಾಜ್ಞವಲ್ಕೃ ಜಯಂತ್ಯುತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡ ಧನ್ವಂತರಿ ಹೋಮದಲ್ಲಿ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ ಗಂಗನಾಳ್, ಪ್ರಮುಖರಾದ ತಿರುಮಲರಾವ್ ಆಲ್ಲಂಪಲ್ಲಿ, ಗುರುರಾಜ ಚಿರ್ಚನಗುಡ್ಡ, ಶೇಷಗಿರಿ ಕುಲಕರ್ಣಿ, ದೇವಾಲಯ ಅರ್ಚಕ ಶ್ರೀನಿವಾಸ್ ಆಚಾರ್ ಇತರರಿದ್ದರು. 
ರಾಜ್ಯ

ಯಾಜ್ಞವಲ್ಕೃ ಮಹರ್ಷಿಗಳ ಸ್ಮರಣೆ

ಗಂಗಾವತಿ: ಜವಾಹರ ನಗರದ ಶ್ರೀ ಹನುಮಂತ ದೇವರ ದೇವಾಲಯದಲ್ಲಿ ಹಮ್ಮಿಕೊಂಡ ಶ್ರೀ ಮದ್ ಯೋಗೀಶ್ವರ ಯಾಜ್ಞವಲ್ಕ್ಯ ಜಯಂತ್ಯುತ್ಸವ ನಿಮಿತ್ತ ಧನ್ವಂತರಿ ಹೋಮ ಬುಧವಾರ ನೆರವೇರಿಸಲಾಯಿತು. 
ಶ್ರೀ ಯೋಗೀಶ್ವರ ಯಾಜ್ಞವಲ್ಕೃ ಸೇವಾ ಸಮಿತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದೇವಾಲಯದಲ್ಲಿರುವ ಪರಿವಾರದ ಮೂರ್ತಿಗಳಿಗೆ ವಿಶೇಷ ಪೂಜೆ, ಅಭಿಷೇಕ, ಸಾಮೂಹಿಕ ಶ್ರೀಹರಿ ವಾಯುಸ್ತುತಿ, ಅಷ್ಟೋತ್ತರ  ಪಾರಾಯಣ, ಹೋಮ ಮತ್ತು ಪೂರ್ಣಹುತಿ ನೆರವೇರಿಸಲಾಯಿತು. ಜ್ಞಾನ ಸತ್ರ ಕಾರ್ಯಕ್ರಮದಡಿ ಯಾಜ್ಞವಲ್ಕೃ ಮಹರ್ಷಿಗಳ ಕುರಿತು ವಿದ್ವಾನ್ ಬಿಂದು ಮಾಧವಾಚಾರ್ ಉಪನ್ಯಾಸ ನೀಡಿದರು. 
ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ ಗಂಗನಾಳ್, ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಜಯಂತ್ಯುತ್ಸವ ಕುರಿತು ಮಾತನಾಡಿದರು. ಪ್ರಮುಖರಾದ ಆನಂದ,  ವೆಂಕಟೇಶ, ಮನೋಹರ ಕುಲಕರ್ಣಿ, ರಂಗನಾಥ ವಟಗಲ್ ಇತರರಿದ್ದರು.