Members cornered the President who did not sign the bill 
ರಾಜ್ಯ

ಬಿಲ್​ಗೆ ಸಹಿ ಹಾಕದ ಅಧ್ಯಕ್ಷನನ್ನು ಕೂಡಿ ಹಾಕಿದ ಸದಸ್ಯರು grama panchayath

ಹುಲಿಯೂರುದುರ್ಗ: ನರೇಗಾ ಯೋಜನೆಯ ಬಿಲ್​ ನೀಡದೆ ಸತಾಯಿಸುತ್ತಿರುವ ಚೌಡನಕುಪ್ಪೆ ಗ್ರಾಪಂ ಅಧ್ಯನ ನಡೆಗೆ ಆಕ್ರೋಶಗೊಂಡ ಸದಸ್ಯರು ಹಾಗೂ ರೈತರು, ಕಚೇರಿಯಲ್ಲಿ ಕುಳಿತಿದ್ದ ಅಧ್ಯ, ಕಾರ್ಯದರ್ಶಿ, ಸಿಬ್ಬಂದಿಯನ್ನು ಬುಧವಾರ ಪಂಚಾಯಿತಿ ಒಳಗೆ ಕೂಡಿ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಪಂನ ಅಧ್ಯ ಮತ್ತು ಪಿಡಿಒ ಕಾರಣದಿಂದ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ನಡೆಸಿ ನಾಲ್ಕು ವರ್ಷ ಕಳೆದರೂ ಸದಸ್ಯರು ಹಾಗೂ ರೈತರಿಗೆ ಹಣ ಬಿಡುಗಡೆ ಮಾಡಿಲ್ಲ. ಗ್ರಾಪಂ ಅಧ್ಯ ಕೃಷ್ಣೇಗೌಡ ಬಿಲ್​ ಪಾವತಿಸಲು ಬಯೋಮೇಟ್ರಿಕ್​ ಮೂಲಕ ಸಹಿ ಮಾಡದ ಕಾರಣ ನರೇಗಾ ಯೋಜನೆಯಡಿ ಬಿಡುಗಡೆಯಾಗಿದ್ದ 24 ಲ ರೂ. ಸರ್ಕಾರ ಹಿಂಪಡೆದಿದೆ. ಇದರಿಂದ ಆಕ್ರೋಶಗೊಂಡ ಸದಸ್ಯರು ಅಧ್ಯ, ಕಾರ್ಯದರ್ಶಿ, ಸಿಬ್ಬಂದಿಯನ್ನು ಒಂದು ಗಂಟೆಯ ಕಾಲ ಕೂಡಿ ಬೀಗ ಹಾಕಿ, ಕೃಷ್ಣೇಗೌಡ ವಿರುದ್ಧ ಧಿಕ್ಕಾರ ಕೂಗಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಲಿಯೂರುದುರ್ಗ ಪಿಎಸ್​ಐ ಪ್ರಶಾಂತ್​ ಸದಸ್ಯರ ರೈತರ ಮನವೊಲಿಸಿ ಕಚೇರಿಗೆ ಹಾಕಿದ್ದ ಬೀಗ ತೆಗೆಸಿದರು. ಬಳಿಕ ಮಾತನಾಡಿದ ಪಿಎಸ್​ಐ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವವಂತೆ ಸದಸ್ಯರಿಗೆ ಸೂಚಿಸಿದರು.
ಸ್ಥಳಕ್ಕೆ ತಾಪಂ ಇಒ ಹಾಗೂ ಪಿಡಿಒ ಬರುವಂತೆ ಒತ್ತಾಯಿಸಿದರು.ಆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬರದ ಕಾರಣ ಆಕ್ರೋಶಗೋಮಡ ಸದಸ್ಯ ಹುಲಿಕಟ್ಟೆ ರವಿ, ಪಿಡಿಒ ಗ್ರಾಪಗೆ ಬಂದು ಹದಿನೈದು ದಿನ ಕಳೆದಿದೆ. ಇಲ್ಲಿ ಅಧ್ಯ ಹಾಗೂ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳ ದರ್ಬಾರ್​ ನಡೆಯುತ್ತಿದೆ. ನರೇಗಾ ಯೋಜನೆಯಡಿ ಕಾಮಗಾರಿ ಮಾಡದೆ ಲಾಂತರ ರೂಪಾಯಿ ಬಿಲ್​ ಮಾಡಲಾಗಿದೆ. ಅಧ್ಯ ಕೃಷ್ಣೇಗೌಡ ಹಾಗೂ ಪಿಡಿಒ ನಾರಯಣ್​ ಸೇರಿ ಗ್ರಾಪಂನ 15ನೇ ಹಣಕಾಸು ಮತ್ತು ವರ್ಗ ಒಂದರ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ಹೆಸರಲ್ಲಿ ಅನುದಾನ ದುರುಪಯೋಗ ಮಾಡಲಾಗುತ್ತಿದೆ. ಈ ಬಗ್ಗೆ ತಾಪಂ ಇಒಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಧ್ಯ ಹಾಗೂ ಪಿಡಿಒ ನಡವಳಿಕೆಗೆ ಸದಸ್ಯರು, ಸಾರ್ವಜನಿಕರು ಹೈರಾಣಾಗಿದ್ದು, ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡಿಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ವೀರೇಶ್​, ಸಾವಂದಿ, ರವಿ, ಭಾಗ್ಯಾ, ಶಿವಣ್ಣ, ಲೋಕೇಶ್​, ಚಿಕ್ಕೆಗೌಡ, ರೈತರಾದ ನಿಂಗರಾಜು, ನರಸಿಂಹಯ್ಯ, ಕೃಷ್ಣೇಗೌಡ, ಸ್ವಾಮಿ, ನಟರಾಜು, ನಂಜುಂಡಯ್ಯ, ನಾಗರಾಜು, ನವಿನ್​ ಕುಮಾರ್​, ಸುನಿಲ್​ ಕುಮಾರ್​ ಉಪಸ್ಥಿತರಿದ್ದರು.