- ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಿರಾದಾರ ಮಾಹಿತಿ
- ಬಚಾವತ್ ತೀರ್ಪು ಕುರಿತು ಜನಜಾಗೃತಿ
ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನಮ್ಮ ಹಕ್ಕಿನ 15 ಟಿಎಂಸಿ ನೀರು ಪಡೆಯಲು ಶಾಸಕ ಎಂ.ವೈ. ಪಾಟೀಲ್ ಜತೆ ಸಚಿವ ಪ್ರಿಯಾಂಕ್ ರ್ಖಗೆ ಅವರನ್ನು ಭೇಟಿಯಾಗಿದ್ದು, ಆ.27ರೊಳಗೆ ಸಿಎಂ ಡಿ.ಕೆ. ಶಿವಕುಮಾರ್, ಸಚಿವ&ಶಾಸಕರ ಜತೆ ರೈತರನ್ನು ಒಳಗೊಂಡ ಸಭೆ ನಡೆಸಲಾಗುತ್ತದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಹೇಳಿದರು.
ನಮ್ಮ ಹಕ್ಕಿನ ನೀರಿಗಾಗಿ ಪ್ರತಿ ಗ್ರಾಮಕ್ಕೆ ತೆರಳಿ ಬಚಾವತ್ ತೀರ್ಪಿನ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಹೋರಾಟದ ಯಶಸ್ಸಿಗೆ ಭೀಮಾ ನದಿ ಎಡ ಮತ್ತು ಬಲ ದಂಡೆ ಗ್ರಾಮಸ್ಥರು ಬೆಂಬಲಿಸಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
15 ಟಿಎಂಸಿ ನೀರು ಏಕಕಾಲಕ್ಕೆ ಬಿಡದೆ ಹಂತ&ಹಂತವಾಗಿ ಹರಿಬಿಡಬೇಕು ಎಂಬುದು ನಮ್ಮ ಆಗ್ರಹ. ಇದಕ್ಕೆ ಎಲ್ಲ ಶಾಸಕರು ಬೆಂಬಲ ಸೂಚಿಸಿದ್ದಾರೆ. ಇದೊಂದು ರಾಜಕೀಯರಹಿತ ಜನಾಂದೋಲನ ರೀತಿಯ ಹೋರಾಟವಾಗಿದೆ. ಪಟ್ಟಣದಲ್ಲಿ ಆ.31ರಂದು ಜನಜಾಗೃತಿ ಸಮಾವೇಶ, ಕಲಬುರಗಿಯಲ್ಲಿ ಶ್ರೀ ಪಂಚಪ್ಪ ಕಲಬುರಗಿ ಮತ್ತು ಶಾಸಕರೊಂದಿಗೆ ಭೀಮಾ ನದಿ ಕುರಿತ ವಿಚಾರ ಸಂಕಿರಣ ನಡೆಸುವುದಾಗಿ ತಿಳಿಸಿದರು.
ಮುಖಂಡ ಶಾಂತಕುಮಾರ ಅಂಜುಟಗಿ ಮಾತನಾಡಿ, ಭೀಮೆಯ ಸ್ವಾಭಾವಿಕ ಹರಿವು ಕಾಪಾಡಲು 5 ಟಿಎಂಸಿ ನೀರು ಹರಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಭೀಮೆ ಒಡಲು ಬರಿದಾಗಲು ಬಿಡಬಾರದು ಎಂದು ಕೋರಿದರು.
ಪ್ರಮುಖರಾದ ಭೀಮರಾವ ಗೌರ, ರಮೇಶ ಪಾಟೀಲ್ ಹವಳಗಾ, ರಮೇಶ ಶೆಟ್ಟಿ, ಬಸವರಾಜ ವಾಳಿ, ಚಂದು ಕರಜಗಿ, ಕಲ್ಲಪ್ಪ ಅಂಜುಟಗಿ, ನೂರ್ ಅಹ್ಮದ್ ಭಾಗವಾನ್, ಲತ್ೀ ಪಟೇಲ್, ಚಂದು ಕರಜಗಿ, ಮುರುಘೇಂದ್ರ ಮಸಳಿ, ಮಲ್ಲು ಸಾಂಪುರ, ರಿಂಕು ನೂಲಾ ಇದ್ದರು.