ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಒಂದು ಕಾಲದಲ್ಲಿಧ್ಯಾನವು ನಿಷಿದ್ಧ ವಿಷಯವಾಗಿತ್ತು.ಆದರೆಇಂದು ಅದು ಜಾಗತಿಕ ಮನ್ನಣೆಯನ್ನುಪಡೆದಿದೆ. ಅಶಾಂತಜಗತ್ತಿಗೆ ಧ್ಯಾನ ಅತ್ಯವಶ್ಯಕಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕಶ್ರೀಶ್ರೀ ರವಿಶಂಕರ್ ಗುರೂಜಿಪ್ರತಿಪಾದಿಸಿದ್ದಾರೆ.
ಡಿ.21ನ್ನುವಿಶ್ವ ಧ್ಯಾನ ದಿನವಾಗಿ ವಿಶ್ವಸಂಸ್ಥೆಯಸಾಮಾನ್ಯ ಸಭೆಯಲ್ಲಿ ೋಷಿಸಿದ್ದು,ಜಿನೀವಾದವಿಶ್ವಸಂಸ್ಥೆಯ ಸಭಾಂಗಣದಲ್ಲಿ‘ಜಾಗತಿಕ ಶಾಂತಿಗಾಗಿ ವಿಶ್ವವುಧ್ಯಾನ ಮಾಡುತ್ತದೆ’ ಎಂಬ ಶೀರ್ಷಿಕೆಯಡಿನಡೆದ ವಿಶ್ವ ಧ್ಯಾನ ದಿನಾಚರಣೆಯಲ್ಲಿಶ್ರೀಶ್ರೀ ಗುರೂಜಿ ಮಾತನಾಡಿದರು.
ಕೇವಲವೈಯಕ್ತಿಕ ಸುಖ-ಶಾಂತಿಗಷ್ಟೇಅಲ್ಲದೇ, ದಣಿವು,ಒತ್ತಡ,ಘರ್ಷಣೆ,ಅನಿಶ್ಚಿತತೆಮತ್ತು ಭಾವನಾತ್ಮಕ ಸಂಕಟಗಳಿಂದಬಳಲುತ್ತಿರುವ ಸಂಪೂರ್ಣ ಸಮಾಜಕ್ಕೂಧ್ಯಾನ ಅಗತ್ಯವಾಗಿದೆ.
ಎಲ್ಲಾವಯೋಮಾನದವರಲ್ಲೂ,ಎಲ್ಲಾ ದೇಶಗಳಲ್ಲೂಆತಂಕ, ದೈಹಿಕ-ಮಾನಸಿಕದಣಿವು ಹಾಗೂ ಏಕಾಂಗಿತನ ಹೆಚ್ಚುತ್ತಿರುವಈ ಸಂದರ್ಭದಲ್ಲಿ,ಸಮಸ್ಯೆಗಳಿಗೆಬಾಹ್ಯ ಪರಿಹಾರಗಳಷ್ಟೇ ಸಾಕಾಗುವುದಿಲ್ಲ;ಮಾನವ ಮನಸ್ಸಿನಸ್ಥಿರತೆಯೂ ಅಗತ್ಯವಿದೆ.ಜನಸಂಖ್ಯೆಯಮೂರನೇ ಒಂದು ಭಾಗ ಒಂಟಿತನದಿಂದಬಳಲುತ್ತಿದ್ದು,ಅರ್ಧದಷ್ಟುಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನುಎದುರಿಸುತ್ತಿರುವಾಗ,ನಮ್ಮನ್ನುಒತ್ತಡದಿಂದ ಮುಕ್ತಗೊಳಿಸಿ,ನಮ್ಮ ಅಂತರಂಗದೊಂದಿಗೆಬೆಸೆಯುವ ಒಂದು ಮಾರ್ಗ ನಮಗೆಬೇಕಾಗಿದೆ.ಅದಕ್ಕೆ ಧ್ಯಾನವುಮುಖ್ಯ ಪಾತ್ರ ವಹಿಸುತ್ತದೆ ಎಂದುಗುರೂಜಿ ವಿವರಿಸಿದರು.
ವಿಶ್ವದ192 ರಾಷ್ಟ್ರಗಳಬೆಂಬಲ :
ವಿಶ್ವಸಂಸ್ಥೆಯಸಾಮಾನ್ಯ ಸಭೆಯಲ್ಲಿ ವಿಶ್ವ ಧ್ಯಾನದಿನದ ಘೋಷಣೆಗೆ ಬೆಂಬಲ ನೀಡಿದ192 ರಾಷ್ಟ್ರಗಳಿಗೆಶ್ರೀ ಶ್ರೀ ರವಿಶಂಕರ್ ಗುರೂಜಿಕೃತಜ್ಞತೆ ಸಲ್ಲಿಸಿದ್ದಾರೆ.ಜಗತ್ತಿನಾದ್ಯಂತ8.5 ಮಿಲಿಯನ್ಜನರು ಒಂದೇ ಸಮಯದಲ್ಲಿ ಧ್ಯಾನದಲ್ಲಿಭಾಗವಹಿಸಿದ್ದರು.
ಈಜಾಗತಿಕ ಆಂದೋಲನವನ್ನು ಮುಂದುವರಿಸುತ್ತ,ಗುರುದೇವರು ಇದೇಡಿ.19ರಂದುನ್ಯೂಯಾರ್ಕ್‌ನಲ್ಲಿರುವವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿಮುಖ್ಯ ಭಾಷಣ ನೀಡಲಿದ್ದು,ಡಿ.21ರಂದು ನ್ಯೂಯಾರ್ಕ್‌ನಪ್ರಸಿದ್ದ ವರ್ಲ್ಡ್ ಟ್ರೇಡ್ಸೆಂಟರ್‌ನಲ್ಲಿ ಭಾರತೀಯ ಕಾಲಮಾನರಾತ್ರಿ 8.30ಕ್ಕೆಧ್ಯಾನವನ್ನು ನಡೆಸಲಿದ್ದಾರೆ.
ಕಳೆದ ವರ್ಷ ಗುರುದೇವರು ಜಿನೀವಾದಲ್ಲಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಸಮಾವೇಶವನ್ನು ನಾವು ಸ್ಮರಿಸುತ್ತೇವೆ. ಜಟಿಲವಾದ ಸಂಘರ್ಷಗಳು ಮತ್ತು ಅಪನಂಬಿಕೆಯಿಂದ ತುಂಬಿರುವ ಈ ಜಗತ್ತಿನಲ್ಲಿ, ಧ್ಯಾನವು ಕೇವಲ ವೈಯಕ್ತಿಕ, ಸ್ವಯಂ-ಸುಧಾರಣೆಯ ಅಭ್ಯಾಸವಷ್ಟೇ ಅಲ್ಲದೇ; ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿದೆ.
— ಅರಿಂದಮ್ ಬಾಗ್ಚಿ, ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ