ಬೆಂಗಳೂರು ಉತ್ತರ ತಾಲೂಕಿನ ಮಾದಕನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಎನ್​ಡಿಪಿಎಸ್​ ಮತ್ತು ಎನ್​ಎಸ್​ಕ್ಯೂ ಮಾದಕ ಔಷಧಗಳ ಮಾರಾಟ ಕುರಿತು ಜಾಗೃತಿ ಕಾರ್ಯಕ್ರಮವನ್ನು ಗ್ರಾಮಾಂತರ ಜಿಲ್ಲಾ ಸಹಾಯಕ ಔಷಧಿನಿಯಂತ್ರಕ ಗಣೇಶ್​ಬಾಬು ಉದ್ಘಾಟಿಸಿದರು. ನಗರಸಭೆ ಆರೋಗ್ಯ ನಿರೀಕ್ಷಕಿ ಮಮತಾ, ಹಿರಿಯ ಔಷಧ ಪರಿವೀಕ್ಷಕಿ ವಿಭಾ ಇದ್ದರು.  
ರಾಜ್ಯ

ವೈದ್ಯರ ಸಲಹೆಯಿಲ್ಲದೆ ಔಷಧ ಮಾರಾಟಕ್ಕಿಲ್ಲ / NELAMANGAL

ನೆಲಮಂಗಲ : ವೈದ್ಯರ ಸಲಹಾ ಚೀಟಿಯಿಲ್ಲದೆ ಯಾರೊಬ್ಬ ಔಷಧ ವ್ಯಾಪಾರಿಗಳು ಮಾದಕ ದ್ರವ್ಯ ಔಷಧಗಳನ್ನು ಮಾಡಬಾರದು ಎಂದು ಗ್ರಾಮಾಂತರ ಜಿಲ್ಲಾ ಸಹಾಯಕ ಔಷಧಿನಿಯಂತ್ರಕ ಗಣೇಶ್​ಬಾಬು ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕಿನ ಮಾದಕನಾಯಕನಹಳ್ಳಿಯಲ್ಲಿ ಔಷಧ ವ್ಯಾಪಾರಿಗಳ ಸಂದಿಂದ ಎನ್​ಡಿಪಿಎಸ್​ ಮತ್ತು ಎನ್​ಎಸ್​ಕ್ಯೂ ಮಾದಕ ಔಷಧಗಳ ಮಾರಾಟ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಕಷ್ಟು ಮಂದಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್​ ಇಲಾಖೆ ಇಲಾಖೆ ಸೇರಿ ವಿವಿಧ ಇಲಾಖೆಗಳು ಅನಧಿಕೃತ ಮಾದಕ ವಸ್ತುಗಳ ಕಡಿವಾಣಕ್ಕೆ ಮುಂದಾಗಿದ್ದು, ಪ್ರತಿಯೊಬ್ಬರು ಸಹಕಾರಿಸಬೇಕಿದೆ ಎಂದರು.
ವೈದ್ಯಕಿಯ ಹಿತದೃಷ್ಟಿಯಿಂದ ಕೆಲವರಿಗೆ ಎನ್​ಡಿಪಿಎಸ್​ ಮತ್ತು ಎನ್​ಎಸ್​ಕ್ಯೂ ಮಾದಕ ಔಷಧಗಳ ಬೇಕಾಗಿದ್ದು, ವೈದ್ಯರ ಸಲಹಾ ಪತ್ರವಿದ್ದರೇ ಮಾತ್ರ ಮಾದಕ ದ್ರವ್ಯ ನೀಡುವ ಕಾರ್ಯ ಔಷಧ ವ್ಯಾಪಾರಿ ಮಾಡಬೇಕಿದೆ. ಜತೆಗೆ ಪ್ರತಿಯೊಬ್ಬ ಔಷಧ ಮಾರಾಟಗಾರರು ತಮ್ಮ ಅಂಗಡಿಯನ್ನು ಆಹಾರ ಮತ್ತು ಔಷಧ ಆಡಳಿತ (ಪುಡ್​ ಆ್ಯಂಡ್​ ಡ್ರಗ್​ ಅಡ್ಮಿನಿಸ್ಟ್ರೆಶನ್​)ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಮಾದನಾಯಕನಹಳ್ಳಿ ಪೊಲೀಸ್​ ಠಾಣೆ ಸಬ್​ ಇನ್​ಸ್ಪೆಕ್ಟರ್​ ಭಾನುಪ್ರಕಾಶ್​ ಮಾತನಾಡಿ, ಅಕ್ರಮ ಮಾದಕ ವಸ್ತು ಮಾರಾಟ ಕಾನೂನು ಬಾಹಿರವಾಗಿದೆ. ಈಗಾಗಲೇ ಇಲಾಖೆಯಿಂದ ಸಾಕಷ್ಟು ಅರಿವ ಮೂಡಿಸಲಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾದಕ ವಸ್ತುಗಳ ವ್ಯಸನಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್​ ಠಾಣೆಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು. ಜತೆಗೆ ಔಷಧ ವ್ಯಾಪಾರಿಗಳು ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು ಎಂದರು.
ಕರ್ನಾಟಕ ಫಾರ್ಮಾ ವಿತರಕರ ಸಂದ ಅಧ್ಯಕ್ಷ ಜಯರಾಮ್​, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಜೆ.ಮೂರ್ತಿ, ನೆಲಮಂಗಲ ಔಷಧ ವರ್ತಕರ ಸಂದ ಅದ್ಯಕ್ಷ ವಾದಿರಾಜ, ಮಾದನಾಯಕನಹಳ್ಳಿ ಔಷಧ ವ್ಯಾಪಾರಿಗಳ ಸಂದ ಅಧ್ಯಕ್ಷ ಕೆ.ಸಿ.ಸತ್ಯಪ್ರಸಾದ್​, ಕಾರ್ಯದರ್ಶಿ ತ್ಯಾಗರಾಜು ಇದ್ದರು.