- ಗೆಳೆಯನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಹತ್ಯೆ
- ಮೃತ ಸುಹೇಲ್ ಸಹೋದರ ಶಬ್ಬಿರ್ ಕೊಲೆಯಲ್ಲಿ ಭಾಗಿಯಾಗಿದ್ದ
ಮಾರಕಾಸಗಳಿಂದ ಮೆಡಿಕಲ್ ಶಾಪ್ ಮಾಲೀಕನನ್ನು ಕೊಚ್ಚಿ ಹತ್ಯೆಗೈದ ಪ್ರಕರಣದ ತನಿಖೆ ಚುರುಕಾಗಿದ್ದು, ತಲೆಮರೆಸಿಕೊಂಡಿದ್ದ 6 ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಡೇಪಾಳ್ಯ ನಿವಾಸಿಗಳಾದ ಆದಿಲ್ ಅಕ್ಮಲ್, ಯಾಸಿನ್ ಶರ್ೀ, ಅಬ್ಬಾಸ್ ಶರ್ೀ, ಶಫೀವುಲ್ಲಾ, ಶಾನ್ ಹಾಗೂ ಸೈಯದ್ ರ್ಹಾನ್ ಬಂಧಿತರು. ಈ ಆರೋಪಿ ಶನಿವಾರ ರಾತ್ರಿ ಸುಹೇಲ್‌ನನ್ನು ಮಾರಕಾಸಗಳಿಂದ ಹತ್ಯೆಗೈದಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಆದಿಲ್ ರೌಡಿಶೀಟರ್ ಆಗಿದ್ದಾನೆ.
ಆ.22ರ ರಾತ್ರಿ 9.45ರ ವೇಳೆಗೆ ಮಡಿವಾಳ ಮುಖ್ಯರಸ್ತೆಯಲ್ಲಿ ಸುಹೇಲ್ ತನ್ನ ಸ್ಕೂಟರ್‌ನಲ್ಲಿ ಹೊರಟಿದ್ದ. ಆಗ ಟ್ರಾಫಿಕ್‌ನಲ್ಲಿ ವಾಹನ ನಿಲ್ಲಿಸಿದ್ದಾಗ ಈ ಗ್ಯಾಂಗ್ ಹಿಂಬದಿಯಿಂದ ದಿಢೀರ್ ಅಟ್ಯಾಕ್ ಮಾಡಿತ್ತು. ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿ ಸುಹೇಲ್‌ನನ್ನು ಹತ್ಯೆ ಮಾಡಿತ್ತು.
ಪ್ರತಿಕಾರಕ್ಕೆ ಕೊಲೆ: ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಪ್ರತಿಕಾರದ ಕೊಲೆ ಎಂಬುದು ಪೊಲೀಸರಿಗೆ ತಿಳಿದಿದೆ. ಕಳೆದ ಜನವರಿಯಲ್ಲಿ ಬಂಡೆಪಾಳ್ಯ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಶಬ್ಬೀರ್ ಕೊಲೆಯಾಗಿತ್ತು. ಈ ಶಬ್ಬೀರ್ ಹತ್ಯೆಗೆ ಸುಹೇಲ್ ಹಣಕಾಸಿನ ನೆರವು ನೀಡಿದ್ದಲ್ಲದೇ ಆತನ ಸಹೋದರರು ಸಹ ಭಾಗಿಯಾಗಿದ್ದರು. ಕೊಲೆಯಾದ ಶಬ್ಬೀರ್‌ನ ಆಪ್ತ ಸ್ನೇಹಿತನೇ ರೌಡಿಶೀಟರ್ ಆದಿಲ್, ಈತ ತನ್ನ ಸ್ನೇಹಿತನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಮಂಗಮ್ಮನಪಾಳ್ಯದಲ್ಲಿ ಹಿಡಿತ ಸಾಧಿಸುವ ವಿಚಾರದಲ್ಲೂ ಕೊಲೆಯಾದ ಸುಹೇಲ್ ಮತ್ತು ಆದಿಲ್ ಗ್ಯಾಂಗ್ ನಡುವೆ ಗಲಾಟೆಗಳು ನಡೆಯುತ್ತಿತ್ತು. ಸುಹೇಲ್ ಆದಿಲ್‌ನನ್ನು ಹೊಡೆಸಲು ಪ್ಲಾನ್ ಮಾಡ್ತಿದ್ದಾನೆ ಎಂದು ತಿಳಿದ ಆದಿಲ್, ಆತನೆ ಗ್ಯಾಂಗ್ ಕಟ್ಟಿಕೊಂಡು ಸುಹೇಲ್ ಹತ್ಯೆಗೈದಿದ್ದಾನೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ತಲೆಮರೆಸಿಕೊಳ್ಳಲು ಮುಂಬೈಗೆ
ಹೊರಟಿದ್ದ ಆರೋಪಿಗಳು..!
ಕೊಲೆ ನಡೆದ ಬಳಿಕ ರಸ್ತೆ ಮಾರ್ಗವಾಗಿ ಬಿಡದಿಗೆ ಎಸ್ಕೇಪ್ ಆಗಿದ್ದ ರೌಡಿಶೀಟರ್ ಆದಿಲ್ ಗ್ಯಾಂಗ್, ಅಲ್ಲಿಂದ ಲಾರಿ ಹತ್ತಿ ಮುಂಬೈಗೆ ಪರಾರಿಯಾಗಲು ಪ್ಲಾನ್ ಮಾಡಿತ್ತು. ಹತ್ಯೆ ನಡೆದ ಕೂಡಲೇ ಎಚ್ಚೆತ್ತುಕೊಂಡಿದ್ದ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಳ್ಳುವ ಮೊದಲೇ ಬಂಧಿಸಿದ್ದಾರೆ.