Kannada Sahithya Parishath
- * ಪ್ರಶಸ್ತಿಯು 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ
ಕನ್ನಡ ಸಾಹಿತ್ಯ ಪರಿಷತ್ತು 2023, 2024 ಹಾಗೂ 2025ನೇ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ’ಮಯೂರವರ್ಮ’ ಸಾಹಿತ್ಯ ದತ್ತಿ ಪ್ರಶಸ್ತಿ’ ಪುರಸ್ಕೃತರ ಪಟ್ಟಿ ಪ್ರಕಟಿಸಿದೆ.
2023ನೇ ಸಾಲಿಗೆ ಡಾ. ಗುಣವಂತ ಮಂಜು, ರಂಗಪ್ಪ ತಳವಾರ, ರೇಣುಕಾ ಹೆಳವರ, ಸಿದ್ದರಾಮ ಕೊಪ್ಪರ ಹಾಗೂ ದ್ಯಾಮವ್ವ ನಡುವಿನಕೇರಿ (ವಿದ್ಯಾ), 2024ನೇ ಸಾಲಿಗೆ ಫಾತಿಮಾ ರಲಿಯಾ, ಪ್ರಿಯಾಂಕ ಮಾವಿನಕರ, ಮಂಜುಳಾ ಹುಲಿಕುಂಟೆ, ಜೆ. ಸುನಿತಾ ಹಾಗೂ ಕೆ.ಎಸ್. ಶೋಭಾ ಚಂದ್ರು ಕೊಮ್ಮನಾಳು ಮತ್ತು 2025ನೇ ಸಾಲಿಗೆ ಡಾ. ಎನ್.ಎಸ್. ಚಾಂದ್ ಪಾಷ , ಸಂಗಮಿತ್ರೆ ನಾಗರಘಟ್ಟ, ವಿಶಾಲ್ ಮ್ಯಾಸರ್, ಬಸವರಾಜ ಹೂಗಾರ ಹಾಗೂ ಬಸವರಾಜ ಉಮೇಶ ನಡಗಡ್ಡಿ ಇವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಪರಿಷತ್ತು ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದೂವರೆ ಕೋಟಿ ರೂ.ಗಳ ದತ್ತಿನಿಧಿ ಸ್ಥಾಪಿಸಿ, ಅದರಿಂದ ಬರುವ ಬಡ್ಡಿ ಹಣದಲ್ಲಿ ಕವನ, ಸಣ್ಣಕಥೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ, ಪರಿಸರ, ವಿನೋದ, ಅನುವಾದ, ಮಕ್ಕಳ ಸಾಹಿತ್ಯ ವಿಮರ್ಶೆ, ಸಂಶೋಧನೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ 45 ವರ್ಷದೊಳಗಿನ ಐವರು ಕನ್ನಡದ ಯುವ ಬರಹಗಾರ (ಮೂರು ವರ್ಷಕ್ಕೆ 15 ಮಂದಿ)ರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು.