ಬೆಂಗಳೂರು: ಪ್ರತಿ ಸಲ ಬಜೆಟ್ ಮುಗಿದ ಬಳಿಕ ಕೆಲವು ಜಿಲ್ಲೆಗಳು ನಿರೀಕ್ಷಿತ ಯೋಜನೆ ಸಿಗದೆ ನಿರಾಸೆಗೊಳ್ಳುತ್ತವೆ. ಬಜೆಟ್ ಮಂಡನೆ ಬಳಿಕ ಯೋಜನೆ ಘೋಷಣೆಯಾಗಬೇಕಿತ್ತು, ಈ ಯೋಜನೆ ಜಾರಿಯಾಗಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಇದೇ ಕಾರಣದಿಂದ ಈ ವರ್ಷದ ಬಜೆಟ್ಗೂ ಮುನ್ನ ಯಾವ ಜಿಲ್ಲೆಗೆ ತುರ್ತಾಗಿ ಏನು ಬೇಕು ಎಂಬ ಬಗ್ಗೆ ವಿಜಯವಾಣಿ ಜನಾಭಿಪ್ರಾಯ ಸಂಗ್ರಹಿಸಿ ಆದ್ಯತೆ ಎನಿಸಿದ ಯೋಜನೆಗಳನ್ನು ಪಟ್ಟಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆ 17ನೇ ಬಾರಿಗೆ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಈಗಾಗಲೇ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ, 2026-27ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಬಹುದಾದ ಯೋಜನೆಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವಿಜಯವಾಣಿ ಓದುಗರ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜಿಲ್ಲೆಗಳ ತುರ್ತು ಅಗತ್ಯಗಳ ಬಗ್ಗೆ ಗಮನ ಹರಿಸಲು ಸಿಎಂಗೆ ಜನತೆಯ ಅಹವಾಲು
ಬೆಳಗಾವಿ
- ಯರಗಟ್ಟಿ, ಮೂಡಲಗಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಹೊಸದಾಗಿ ‘ತಾಲೂಕು ಪ್ರಜಾಸೌಧ’ ನಿರ್ವಣವಾಗಬೇಕು
- ಬೆಳಗಾವಿ ಕೆಜಿಟಿಟಿಐ ಕೇಂದ್ರದಲ್ಲಿ ಐಛ್ಠಠಠ್ಟಿಢ.0ಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಆಧಾರಿತ ಪಠ್ಯಕ್ರಮದೊಂದಿಗೆ ಹೊಸ ಪ್ರಯೋಗಾಲಯ ಸ್ಥಾಪನೆ.
- ಬೈಲಹೊಂಗಲ ಪಟ್ಟಣಕ್ಕೆ ವರ್ತಲ ರಸ್ತೆ ಗಳನ್ನು ನಿರ್ವಿುಸಲು ವಿಸõತ ಯೋಜನೆ.
- ಪ್ಲಗ್-ಆಂಡ್-ಪ್ಲೇ ಸೌಲಭ್ಯ ಗಳನ್ನೊಳಗೊಂಡ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ.
- ಬೆಳಗಾವಿ ಮಹಾನಗರದಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ರಾಣಿ ಚನ್ನಮ್ಮ ವೃತ್ತದವರೆಗೆ (4.50 ಕಿ.ಮೀ ಉದ್ದದ ) ಮೇಲ್ಸೇತುವೆ ನಿರ್ವಣ.
ವಿಜಯಪುರ
- ಸರ್ಕಾರಿ ವೈದ್ಯಕೀಯ ಕಾಲೇಜ್ ಘೊಷಣೆ-ಅನುದಾನ ನಿಗದಿ
- ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ.
- ಕೃಷ್ಣಾ ಜಲಾಂದೋಲನ ಸಂಕಲ್ಪ ಈಡೇರಿಕೆ
- ಅಕ್ಕಮಹಾದೇವಿ ಮಹಿಳಾ ವಿವಿಗೆ ಅನುದಾನ
- ಘೊಷಿತ ಆಹಾರ ಪಾರ್ಕ್, ಜವಳಿ ಪಾರ್ಕ್, ವೈನ್ಪಾರ್ಕ್ ನಿರ್ಮಾಣ
- ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪನೆ
ಧಾರವಾಡ
- ರೈತರಿಗಾಗಿ ಕೃಷಿ ಪರಿಷತ್ ರಚಿಸಬೇಕು, ಅನುದಾನ ಮತ್ತು ಮೂಲ ಸೌಕರ್ಯ ನೀಡಬೇಕು. ಇದರ ಕೇಂದ್ರ ಕಚೇರಿ ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕು.
- ಎಸ್ಡಿಆರ್ಎಫ್ ನಿಯಮಾವಳಿ ಬದಲಾಗಬೇಕು. ಆಸ್ತಿ ಪಾಸ್ತಿ ಹಾನಿಗೆ ಹೆಚ್ಚಿನ ಪರಿಹಾರ ಸಿಗಲು ಅನುಕೂಲ.
- ಕೃಷಿ ಬೆಳೆಗಳ ಖರೀದಿಗೆ ನಿರಂತರ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಅದಕ್ಕಾಗಿ ಪ್ರತ್ಯೇಕ ಆವರ್ತ ನಿಧಿ ಸ್ಥಾಪಿಸಬೇಕು.
- ಧಾರವಾಡ ಜಿಲ್ಲಾ ಆಸ್ಪತ್ರೆ ಸ್ಥಳಾಂತರ, ನೂತನ ಆಸ್ಪತ್ರೆ ನಿಮಾಣಕ್ಕೆ ಅಗತ್ಯ ಅನುದಾನ
- ಹುಬ್ಬಳ್ಳಿ ಕಿಮ್ಸ್ನಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಆರಂಭವಾಗಬೇಕು, ಚಿಕ್ಕ ಮಕ್ಕಳ ಆರೋಗ್ಯ ಕೇಂದ್ರ ತೆರೆಯಬೇಕು, ವಿಭಾಗೀಯ ರಕ್ತಭಂಡಾರ ಸ್ಥಾಪನೆಯಾಗಬೇಕು. ಇದಕ್ಕೆ ಅಗತ್ಯ ಅನುದಾನ ಘೋಷಣೆಯಾಗಬೇಕು.
ಉತ್ತರ ಕನ್ನಡ
- ಕಾರವಾರ ಕ್ರಿಮ್ಸ್ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ನಿರೀಕ್ಷೆ
- ಜಿಲ್ಲೆಯಲ್ಲಿ ಭೂ ಕುಸಿತದಿಂದ ನಿರಂತರ ಅನಾಹುತಗಳು ಸಂಭವಿಸುವುದನ್ನು ತಡೆಯಲು ಕನಿಷ್ಠ 100 ಕೋಟಿ ರೂ. ವಿಶೇಷ ನೆರವು.
- ಅಡಕೆಗೆ ಎಲೆಚುಕ್ಕೆ ರೋಗ ನಿವಾರಣೆಗೆ ವಿಶೇಷ ನೆರವು.
ಶಿವಮೊಗ್ಗ
- ಅಡಕೆ ಬೆಳೆಯಲ್ಲಿ ಕಂಡುಬರುವ ಮಾರಕ ರೋಗಗಳ ನಿಯಂತ್ರಣಕ್ಕೆ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆಗಾಗಿ ಕಳೆದ ಬಜೆಟ್ನಲ್ಲಿ 62 ಕೋಟಿ ರೂ. ಒದಗಿಸಲಾಗಿತ್ತು. ಆದರೆ ಅದು ನಿರೀಕ್ಷಿತ ಫಲ ನೀಡಿಲ್ಲ. ಇದಕ್ಕಾಗಿ ಸಮಗ್ರ ಯೋಜನೆ ಘೊಷಿಸಬೇಕು.
- ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ರಾಜ್ಯದ ಪಾಲಿನ ಅನುದಾನದ ಜತೆಗೆ ಭೂಸ್ವಾಧೀನಕ್ಕೆ ಒತ್ತು ನೀಡಬೇಕು.
- ನಿಷ್ಕ್ರಿಯವಾಗಿರುವ ಅಡಕೆ ಕಾರ್ಯಪಡೆಗೆ ಜೀವ ತುಂಬಬೇಕು.
- ಸೋಗಾನೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಆಯುಷ್ ವಿವಿ ನಿರ್ವಣಕ್ಕೆ ಈ ಹಿಂದೆ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಮುಂದಕ್ಕೆ ಅದು ಟೇಕಾಫ್ ಆಗಿಲ್ಲ. ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ವಿವಿ ಸ್ಥಾಪನೆಯಾಗಬೇಕೆಂಬ ಒತ್ತಡ ಕೆಲವು ವರ್ಷಗಳಿಂದಲೂ ಇದೆ. ಈ ಬಾರಿಯಾದರೂ ಇದು ಸಾಕಾರಗೊಳ್ಳುವುದೇ ನೋಡಬೇಕು.
- ಮಂಗನ ಕಾಯಿಲೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.
ಹಾವೇರಿ
- ಕುಡಿಯುವ ನೀರು, ಬೆಳೆಗಳಿಗೆ ನೀರಾವರಿ ನಿರೀಕ್ಷೆ
- ಬೇಡ್ತಿ-ವರದಾ ನದಿ ಜೋಡಣೆಗೆ ಸೂಕ್ತ ಅನುದಾನ ಘೊಷಣೆ.
- ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವಿಸ್ತರಣೆ, 1,400 ಕೋಟಿ ರೂ. ವೆಚ್ಚದ ಆಣೂರ, ತಡ, ಹಂಸಭಾವಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ.
- ಹಾನಗಲ್ಲದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ.
ಚಿಕ್ಕಮಗಳೂರು
- ಏರ್ಸ್ಟ್ರಿಪ್ ನಿರ್ವಣಕ್ಕೆ ಅನುದಾನ ಘೊಷಿಸುವ ನಿರೀಕ್ಷೆ.
- ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಿದೆ ಹೆಚ್ಚಿನ ಅನುದಾನ
- ಸ್ಪೈಸ್ ಪಾರ್ಕ್ ನಿರ್ವಣಕ್ಕೆ ಅನುದಾನ ನೀಡಬೇಕು.
- ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕಿನ ಬಯಲು ಭಾಗದ ಕೆರೆಗಳಿಗೆ ನೀರು ತುಂಬಿಸಲು ಭದ್ರಾ ಉಪಕಣಿವೆ ಯೋಜನೆ ರೂಪಿಸಲಾಗಿದ್ದು ಎರಡು ಹಾಗೂ ಮೂರನೇ ಹಂತದ ಕಾಮಗಾರಿಗೆ ಅನುದಾನ ಮೀಸಲಿಡಬೇಕು
- ಎಲೆಚುಕ್ಕೆ ಮತ್ತು ಹಳದಿ ರೋಗದಿಂದ ಅಡಕೆ ತೋಟ ಹಾಳಾಗಿದ್ದು,ಬೆಳೆಗಾರರ ನೆರವಿಗೆ ಸಮಗ್ರ ಯೋಜನೆ ಘೊಷಿಸಬೇಕು.
ಮೈಸೂರು
- ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ ಪರಿವರ್ತನೆಗೊಂಡಿರುವ ಮೈಸೂರಿಗೆ ದೊಡ್ಡ ಮೊತ್ತದ ಅನುದಾನ ನೀಡಿ ಮೂಲಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ
- ರಿಯಲ್ ಎಸ್ಟೇಟ್ ಮಾಫಿಯಾದ ಕೈಗೆ ಸಿಲುಕಿರುವ ಮೈಸೂರನ್ನು ಮೈಸೂರಾಗಿಯೇ ಉಳಿಸಬೇಕಾದ ನಿಯಮ
- ಪಾರಂಪರಿಕ ಶೈಲಿಯಲ್ಲೇ ಲ್ಯಾನ್ಸ್ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಅಭಿವೃದ್ಧಿ, ಪೆರಿಫೆರಲ್ ರಿಂಗ್ ರಸ್ತೆ ನಿರ್ವಣಕ್ಕೆ ಚಾಲನೆ, ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ನಲ್ಲಿ ಮೇಲ್ಸೇತುವೆ, ಕುಕ್ಕರಹಳ್ಳಿ ಬಳಿ, ಕೆ.ಆರ್.ಎಸ್.ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ, ಕಬಿನಿಯಲ್ಲಿ ಇಂಟರ್ಪ್ರಿಟೇಷನ್ ಸೆಂಟರ್ ನಿರ್ವಣವಾಗಿಲ್ಲ.
ಉಡುಪಿ
- ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ನಿರ್ವಣದ ಬೇಡಿಕೆಯಿದ್ದು, ಪ್ರಸ್ತಾವನೆ ಸಲ್ಲಿಕೆ
- ಮರವಂತೆಯಲ್ಲಿ ವಿದೇಶಿ ಹಡಗುಗಳಿಗೆ ನೆಲೆನಿಲ್ಲಲು ಸೂಕ್ತ ಜಟ್ಟಿ ನಿರ್ಮಾಣ
- ಉಡುಪಿಯಲ್ಲಿ ಸರ್ಕಾರಿ ಮೆಡಿಕಲ್ ಸ್ಥಾಪನೆ
- ಉಡುಪಿಯ ಅಜ್ಜರಕಾಡಿನಲ್ಲಿ ನೂತನ ಜಿಲ್ಲಾಸ್ಪತ್ರೆ ನಿರ್ವಿುಸಲಾಗಿದ್ದು, ಅನುದಾನದ ಕೊರತೆಯಿಂದ ಕಟ್ಟಡ ಕಾಮಗಾರಿ ಅಪೂರ್ಣ
ದಕ್ಷಿಣ ಕನ್ನಡ
- ಮಂಗಳೂರಿನಲ್ಲಿ ವಾಟರ್ ಟ್ರಾನ್ಸ್ಪೋರ್ಟ್ ಮ್ಯೂಸಿಯಂ ಸ್ಥಾಪನೆ ಮತ್ತು ಕರಾವಳಿ ಪ್ರವಾಸೋದ್ಯಮ ನೀತಿ ರಚನೆ, ಭೂಕುಸಿತ-ಕಡಲ್ಕೊರೆತ ತಡೆಯಲು ರಾಜ್ಯ ಬಜೆಟ್ 2025-26ರಲ್ಲಿ 200 ಕೋಟಿ ರೂ. ಘೊಷಿಸಲಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.
- ಕರಾವಳಿ ಅಭಿವೃದ್ಧಿ ಮಂಡಳಿ (ಕೆಡಿಬಿ) ರಚನೆಯಾಗಿದ್ದರೂ ಬಿಡಿಗಾಸೂ ಬಿಡುಗಡೆ ಆಗಿಲ್ಲ.
ಹಾಸನ
- ಹಾಸನ ವಿಮಾನ ನಿಲ್ದಾಣ ಭೂ ಸ್ವಾಧೀನ ಪ್ರಕ್ರಿಯೆಗೆ ಘೊಷಣೆ ಮಾಡಿರುವ 430 ಕೋಟಿ ರೂ. ಹಣ ಬಿಡುಗಡೆ
- ಕಾಡಾನೆ ಹಾವಳಿ ನಿಯಂತ್ರಣಕ್ಕೆ ಭದ್ರ ಆನೆಧಾಮ ಅಭಿವೃದ್ಧಿಪಡಿಸುವುದು.
- ರಾಷ್ಟ್ರೀಯ ಹೆದ್ದಾರಿ 370ರ ಬಿಳಿಕೆರೆ- ಹಳೇಬೀಡು ಅಭಿವೃದ್ಧಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಹಣ ಮೀಸಲಿಡಬೇಕು.
- ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಕಾಮಗಾರಿಗೆ ಭೂ ಸ್ವಾಧೀನಪಡಿಸಿಕೊಳ್ಳಲು ಅನುದಾನ ಮೀಸಲಿಡುವುದು.
ದಾವಣಗೆರೆ
- ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ (ಎಸ್ಟಿಪಿಐ) ಸ್ಥಾಪಿಸಲು ಭೂಮಿ ಕಾಯ್ದಿರಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಏನು ಘೊಷಣೆ ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
- ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿದೆ.
- ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆ ಶಿಥಿಲವಾಗಿದ್ದು ನೂತನ ಕಟ್ಟಡ ನಿರ್ವಣಕ್ಕೆ ಹೆಚ್ಚಿನ ಅನುದಾನ ಬೇಕಿದೆ.
- ಸರ್ಕಾರಿ ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪನೆ.
ಬೀದರ್
- ಸಾಲದ ಹೊರೆಯಿಂದ ಬಾಗಿಲು ಮುಚ್ಚಿರುವ ಕಬ್ಬು ಬೆಳೆಗಾರರ ಜೀವನಾಡಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕ್ರಮ
- ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ
- ಬೀದರ್ನಲ್ಲಿ ಕೃಷಿ ಕಾಲೇಜು ಆರಂಭಿಸಬೇಕೆಂಬ ದಶಕದ ಬೇಡಿಕೆಗೆ ಸ್ಪಂದನೆ
ಕಲಬುರಗಿ
- ಜವಳಿ ಪಾರ್ಕ್ ಕಾಮಗಾರಿಗೆ ವೇಗ
- ನಗರಕ್ಕೆ ಎರಡನೇ ವರ್ತಲ ರಸ್ತೆ ನಿರ್ಮಾಣ
- ಪ್ರತಿಸಲ ಪ್ರವಾಹಕ್ಕೆ ತುತ್ತಾಗುವ ನದಿ ತೀರದ ಗ್ರಾಮಗಳ ಸ್ಥಳಾಂತರಕ್ಕೆ ವಿಶೇಷ ಪ್ಯಾಕೇಜ್
- ಕೆಎಂಎಫ್ ಮಾದರಿ ತೊಗರಿ ಖರೀದಿ, ಬೇಳೆ ಸೇರಿ ಉತ್ಪನ್ನಗಳ ಮಾರಾಟ ವ್ಯವಸ್ಥೆ
- ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶೌಚಗೃಹಗಳ ನಿರ್ವಣಕ್ಕೆ ಪ್ರತ್ಯೇಕ ಅನುದಾನ
- ರಾಜ್ಯ ಸರ್ಕಾರ ಅಧೀನದ ಶಹಾಬಾದ್ನ ಸುಸಜ್ಜಿತ ಇಎಸ್ಐ ಆಸ್ಪತ್ರೆ ಕಾರ್ಯಾರಂಭಕ್ಕೆ ಅನುದಾನ
- ಕ್ವಿಂಟಾಲ್ ತೊಗರಿಗೆ ಹಿಂದಿನಂತೆ 500 ಅಥವಾ 1000 ರೂ. ಪ್ರೋತ್ಸಾಹಧನ
ಯಾದಗಿರಿ
- ಜಿಲ್ಲೆಗೊಂದು ವಿವಿ ಘೊಷಣೆಗೆ ಕಾರ್ಯರೂಪ
- ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಜಿಟಿಟಿಸಿ, ಕೆಕೆಟಿಸಿ, ಮಹಿಳಾ ಡಿಪ್ಲೊಮಾ ಕಾಲೇಜು
- ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಹತ್ತಿ, ಭತ್ತ ಇತರ ಬೆಳೆ ಬೆಳೆಯುವ ರೈತರಿಗೆ ಬಸವಸಾಗರ ಜಲಾಶಯದಿಂದ
- ಸಕಾಲಕ್ಕೆ ನೀರು ಬಿಡುಗಡೆ
- ಗುರುಮಠಕಲ್ ಕ್ಷೇತ್ರದ ಕಡೇಚೂರ, ಬಾಡಿಯಾಳದಲ್ಲಿ ವಶಪಡಿಸಿಕೊಂಡ 2300 ಎಕರೆ ಭೂಮಿಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ
ರಾಯಚೂರು
- ತುಂಗಭದ್ರಾ ಎಡದಂಡೆ ನಾಲೆಗಳನ್ನು ದುರಸ್ತಿಗೊಳಿಸಿ ಕೆಳ ಭಾಗದ ರೈತರಿಗೆ ನೀರು ಒದಗಿಸಬೇಕು.
- ವಟಗಲ್ ಏತ ನೀರಾವರಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಬೇಕು.
- ಜಿಲ್ಲೆಯನ್ನು ಸಂಪೂರ್ಣ ನೀರಾವರಿಯಾಗಲು ಕೃಷ್ಣಾ ಹಾಗೂ ತುಂಗಭದ್ರಾ ನದಿ ಜೋಡಣೆಯಾಗಬೇಕು
- ಚಿಕ್ಕಮಂಚಲಿ ಬ್ಯಾರೇಜ್ ನಿರ್ವಣವಾಗಬೇಕು.
ಬಾಗಲಕೋಟೆ
- ಜವಳಿ ಪಾರ್ಕ್ ಬೇಡಿಕೆ ಇದುವರೆಗೆ ಅನುಷ್ಠಾನಗೊಂಡಿಲ್ಲ.
- ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರ ಕಾರ್ಯ ನನೆಗುದಿಗೆ.
- ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ಕ್ಕೆ ಮುಳುಗಡೆ ಆಗುವ ಜಮೀನಿಗೆ ಅನುದಾನ ಒದಗಿಸುವ ನಿರೀಕ್ಷೆ.
- ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ಪಕ್ಷಿಧಾಮ ಸ್ಥಾಪನೆ ಅನುಷ್ಠಾನಗೊಂಡಿಲ್ಲ.
ಕೊಪ್ಪಳ
- ನವಲಿ ಸಮಾನಾಂತರ ಜಲಾಶಯ ವಿಷಯ ಪ್ರಸ್ತಾಪಿಸಿದರೂ ಸಿಗದ ಅನುದಾನ.
- ಸಿಂಗಟಾಲೂರು, ಕೊಪ್ಪಳ, ಅಳವಂಡಿ ಬೇಟಗೇರಿ, ಬಹಾದ್ದೂರ ಬಂಡಿ-ನವಲಕಲ್ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆಯಾಗಬೇಕು.
- ಕೊಪ್ಪಳ ವಿವಿ ಸ್ಥಾಪನೆಯಾಗಿ ಮೂರು ವರ್ಷ ಕಳೆದಿದ್ದು ಅನುದಾನ, ಸ್ವಂತ ಕಟ್ಟಡ, ಸಿಬ್ಬಂದಿ ಒದಗಿಸಬೇಕು.
- ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ಇದ್ದರೂ ಭೂಸ್ವಾಧೀನಕ್ಕೆ ಹಣ ನೀಡಿಲ್ಲ. ಹುಲಿಗಿ ಪ್ರಾಧಿಕಾರ ಕಾಮಗಾರಿಯೂ ಆಮೆವೇಗದಲ್ಲಿವೆ.
- ರೈಸ್ ಟೆಕ್ ಪಾರ್ಕ್, ತೋಟಗಾರಿಕೆ ಟೆಕ್ ಪಾರ್ಕ್ ಗಳಿಗೆ ಮರುಜೀವ ನೀಡುವ ಅವಶ್ಯವಿದೆ.
ಗದಗ
- ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿರೀಕ್ಷೆ
- ಕಪ್ಪತಗುಡ್ಡ ಸಂರಕ್ಷಣೆ, ಔಷಧ ವನ ವಿಸ್ತರಣೆಗೆ ವಿಶೇಷ ಯೋಜನೆ
- ಗದಗ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಮಗ್ರ ಯೋಜನೆ
- ನೀರಾವರಿ ಕಾಲುವೆಗಳ ಆಧುನೀಕರಣ ಮತ್ತು ವಿಸ್ತರಣೆ
- ಕೈಗಾರಿಕಾ ವಸಾಹತುಗಳ ಅಭಿವೃದ್ಧಿ, ವಿಶೇಷ ಯೋಜನೆ ಜಾರಿ.
- ಸಿಂಗಟಾಲೂರು ಯೋಜನೆ ಬಾಧಿತರಿಗೆ ಪೂರ್ಣ ಪರಿಹಾರ ಮತ್ತು ಸ್ಥಳಾಂತರಕ್ಕೆ ಅನುದಾನ
ವಿಜಯನಗರ
- ಹಂಪಿ ಮಾಸ್ಟರ್ ಪ್ಲಾ್ಯನ್ ಜಾರಿ ಅಗತ್ಯ
- ಮೆಡಿಕಲ್ ಕಾಲೇಜು ಅಥವಾ ಜಿಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯ
- ಸಕ್ಕರೆ ಕಾರ್ಖಾನೆಗೆ ಬೇಕಿದೆ ಅನುಮೋದನೆ
- ಕನ್ನಡ ವಿವಿಗೆ ವಿಶೇಷ ಅನುದಾನ ನಿರೀಕ್ಷೆ
- ಬೇಕಿದೆ ನೂತನ ಜಿಲ್ಲಾ ಕಚೇರಿಗಳ ಕಟ್ಟಡ ನಿರ್ಮಾಣ
- ಮೈಲಾರ ಅಭಿವೃದ್ಧಿ ಪ್ರಾಧಿಕಾರ ಆಗಬೇಕಿದೆ.
ಬಳ್ಳಾರಿ
- ರಾಬಕೊವಿ ಒಕ್ಕೂಟ ಮೆಗಾಡೇರಿ ನಿರ್ವಣವಾಗಬೇಕಿದೆ.
- ಸರ್ಕಾರಿ ಕಾನೂನು ಪದವಿ ಕಾಲೇಜು ನಿರ್ಮಾಣ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭ ನಿರೀಕ್ಷೆ.
- ಒಣ ಮೆಣಸಿನಕಾಯಿ ಮಾರುಕಟ್ಟೆ, ಜೀನ್ಸ್ ಅಪೆರಲ್ ಪಾರ್ಕ್ ನಿರ್ವಣ.
ಬೆಂಗಳೂರು
- ಲಾಸ್ಟ್ ಮೈಲ್ ಕನೆಕ್ಟಿವಿಟಿ- ರ್ಯಾಪಿಡ್ ಟ್ಯಾಕ್ಸಿ
- ಮೆಟ್ರೋ 3ನೇ ಹಂತಕ್ಕೆ ಆರ್ಥಿಕ ನೆರವು, ಉಪನಗರ ರೈಲು ಯೋಜನೆಗೆ ಹೆಚ್ಚಿನ ಅನುದಾನ
- ಜಿಬಿಎ ಚುನಾವಣೆಗೆ ಬೇಕು ಆದ್ಯತೆ
- ಬಹುನಿರೀಕ್ಷಿತ ಟನಲ್ ರಸ್ತೆಗಳು, ಫ್ಲೈಓವರ್ಗಳ ನಿರ್ಮಾಣ
- ಸಿಗ್ನಲ್ ಮುಕ್ತ ಕಾರಿಡಾರ್ ಮಾಡುವುದು.
- ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಉಪ ನಗರಗಳ ಸ್ಥಾಪನೆ
- ಹೊಸ ಕ್ರೀಡಾಂಗಣ ಸ್ಥಾಪನೆ
ಬೆಂ. ಗ್ರಾಮಾಂತರ
- ಜಿಲ್ಲಾ ಕೇಂದ್ರದ ಘೋಷಣೆ
- ವಿಜಯಪುರವನ್ನು ತಾಲೂಕು ಕೇಂದ್ರ ಮಾಡುವ ನಿರೀಕ್ಷೆ
- ಹೊಸಕೋಟೆಯನ್ನು ಸೆಟಲೈಟ್ ಸಿಟಿಯಾಗಿಸುವ ನಿರೀಕ್ಷೆ
- ಹೊಸಕೋಟೆ ಹಾಗೂ ನೆಲಮಂಗಲ ಭಾಗಕ್ಕೆ ಮೆಟ್ರೋ, ಮಧುರೆನಲ್ಲಿ ಭಗೀರಥ ಪೀಠ ಸ್ಥಾಪನೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರಿನ ಸಂಪರ್ಕ
ತುಮಕೂರು
ನಮ್ಮ ಮೆಟ್ರೋ ಯೋಜನೆ ತುಮಕೂರಿಗೆ ವಿಸ್ತರಣೆ ‘ಗ್ರೀನ್’ ಸಿಗ್ನಲ್ ನಿರೀಕ್ಷೆ
- ಹೃದ್ರೋಗ ಆಸ್ಪತ್ರೆ ಸ್ಥಾಪನೆ
- ಬಜೆಟ್ ಘೋಷಣೆಯಾಗಿಯೇ ಉಳಿದ ಕ್ರೀಡಾ ವಿಶ್ವವಿದ್ಯಾಲಯ, ಸ್ಪೋರ್ಟ್ಸ್, ಫಿಟ್ನೆಸ್ ಉಪಕರಣಗಳ ಉತ್ಪಾದನಾ ಘಟಕ ಸ್ಥಾಪನೆ
- ಮಧುಗಿರಿ ಜಿಲ್ಲೆ ಘೋಷಣೆ, ಮಧುಗಿರಿ ಬೆಟ್ಟಕ್ಕೆ ರೋಪ್ ವೇ, ಜಾಕ್ಫ್ರೂಟ್ ಪಾರ್ಕ್, ಸಿರಿಧಾನ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನಿರೀಕ್ಷೆಗಳು
ರಾಮನಗರ
- ಸತ್ತೆಗಾಲ-ಇಗ್ಗಲೂರು ಏತ ನೀರಾವರಿ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ
- ಮೇಕೆದಾಟು ಯೋಜನೆ ಕಾನೂನು ತೊಡಕುಗಳ ನಡುವೆ ಸಿಲುಕಿ ನಿಂತಲ್ಲೇ ಇದೆ
- ಕನಕಪುರಕ್ಕೆ ಮೆಡಿಕಲ್ ಕಾಲೇಜು ಘೊಷಣೆಯಾಗಿದ್ದರೂ ಅನುಷ್ಠಾನಗೊಂಡಿಲ್ಲ
- ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಮತ್ತು ವಿವಿ ಕಾಮಗಾರಿಯೂ ಅಪೂರ್ಣ
ಮಂಡ್ಯ
- ಮೈಷುಗರ್ ಕಾರ್ಖಾನೆ ಅಭಿವೃದ್ಧಿ. ಹೊಸ ಕಾರ್ಖಾನೆ ನಿರ್ಮಾಣ ಘೊಷಣೆಯಾಗಿದ್ದರೂ ಪ್ರಗತಿ ಕಂಡಿಲ್ಲ.
- ಬಾಯ್ಲರ್ ಘಟಕ ಸ್ಥಾಪಿಸುವ ಘೊಷಣೆ ಮಾಡುವ ನಿರೀಕ್ಷೆ
- ಮಿಮ್ಸ್ನಲ್ಲಿ ಸ್ಥಗಿತಗೊಂಡಿರುವ ಕ್ಯಾನ್ಸರ್ ಕೇಂದ್ರ ಮರು ಪ್ರಾರಂಭಿಸಬೇಕು. ಇದಲ್ಲದೆ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ನಿರೀಕ್ಷೆ ಇದೆ.
ಚಿಕ್ಕಬಳ್ಳಾಪುರ
- ಎಚ್.ಎನ್. ಹಾಗೂ ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಕ್ರಮ
- ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಬೇಕಿದೆ ಒತ್ತು
- ಹಿಂದಿನ ಬಜೆಟ್ನಲ್ಲಿ ಘೊಷಣೆಯ ಉತ್ಪಾದನಾ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ನಿರ್ವಣದಡಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನಾ ಘಟಕ, ಚರ್ಮದ ಬೊಂಬೆ ತಯಾರಿಕೆ ಘಟಕ, ಶಿಡ್ಲಘಟ್ಟದಲ್ಲಿ ಸೀರೆ ಮೈಕ್ರೋ ಕಸ್ಟರ್ ಸ್ಥಾಪನೆಗೆ ಬೇಕಿದೆ ಕ್ರಮ.