ವಿವಿಧ ಬೇಡಿಕೆಗೆ ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ಸತ್ಯಂಪೇಟೆ, ಚನ್ನಪ್ಪ ಆನೆಗುಂದಿ ಇತರರಿದ್ದರು. 
ರಾಜ್ಯ

ಬೀಜ-ರಸಗೊಬ್ಬರ ಅಭಾವ ಆಗದಿರಲಿ

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹ
  • ರೈತರ ಸಂಘಟನೆಗಳಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
ಯಾದಗಿರಿ: ಜಿಲ್ಲೆಯಲ್ಲಿ ಮತ್ತೆ ಈ ವರ್ಷವೂ ಬೀಜ ಮತ್ತು ರಸಗೊಬ್ಬರ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಿಸಿ ರೈತ ಸಂಟನೆಗಳು ಬೀದಿಗಳಿದು ಹೋರಾಟ ನಡೆಸಿದರೇ, ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ ನೇತೃತ್ವದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ರೈತರ ನಿಯೋಗದೊಂದಿಗೆ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದೆ.
ಹೀಗಾಗಿ ಸೋಮವಾರ ಡಿಸಿ ಕಚೇರಿ ಆವರಣ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಚೆಂಬರ್​ ರೈತರಿಂದ ಕೂಡಿದ್ದವು. ಮುಂಗಾರು ಬಿತ್ತನೆಗೆ ರೈತರು ಸಜ್ಜಾಗಿ ಹೊಲಗಳು ಸ್ವಚ್ಚಗೊಳಿಸಿ, ಬೀಜ ಮತ್ತು ರಸಗೊಬ್ಬರ ಖರೀದಿಗೆ ಮುಂದಾಗಿದ್ದು, ಇಲ್ಲಿ ಸಮಸ್ಯೆ ಎದುರಾಗಿದ್ದು, ಕಾಳಸಂತೆಯಲ್ಲಿ ಮಾರಾಟ ಜೋರಾಗಿದ್ದು, ಕೂಡಲೇ ತಡೆಯುವಂತೆ ರೈತ ಸಂಟನೆಗಳು ಮತ್ತು ಬಿಜೆಪಿ ಮುಖಂಡರು ಡಿಸಿ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ.
ಸೋಮವಾರ ಎಸ್​ಕೆಎಂ ಸಂಯುಕ್ತ ಕಿಸಾನ ಮೋರ್ಚಾದ ಪದಾಧಿಕಾರಿಗಳು ನೂರಾರು ರೈತರೊಂದಿಗೆ ಡಿಸಿ ಕಚೇರಿ ಎದುರು ಸಮರ್ಪಕ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಟನೆಗಳ ರಾಜ್ಯ ನಾಯಕ ಮಲ್ಲಿಕಾರ್ಜುನ ಸತ್ಯಂಪೇಟೆ, ಸಕಾಲಕ್ಕೆ ಅಗತ್ಯವಿರುವಷ್ಟು ಬೀಜ ಮತ್ತು ರಸಗೊಬ್ಬುರ ಸಿಗುತ್ತಿಲ್ಲವಾದ್ದರಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆಂದು ಆರೋಪಿಸಿದರು.ವಿಶೇಷವಾಗಿ ರಸಗೊಬ್ಬರ ಜಿಲ್ಲೆಯಲ್ಲಿ ಸಾಕಷ್ಟು ಸಂಗ್ರಹವಿದ್ದರೂ ಕೃಷಿ ಇಲಾಖೆ ರ್ನಿಲಕ್ಷದಿಂದ ಹಾಗೂ ಕಾನೂನು ಬಾಹಿರವಾಗಿ ರಸಗೊಬ್ಬರ ಸೇಲ್​ಸ್ಟಾಫ್​ ಮಾಡಿ ರೈತರಿಗೆ ವಿನಾ@ಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಅವರು ದೂರಿದರು.
ದುಪ್ಪಟ್ಟು ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತಿದ್ದು, ರಾತ್ರಿ ಹೊತ್ತು ಕಳ್ಳತನದಿಂದ ಹೆಚ್ಚಿಗೆ ಹಣ ನೀಡಿದವರಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ರೈತರ ಬೇಡಿಕೆಗಳು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ರ್ನಿಲಕ್ಷವಹಿಸಿದರೆ ರಸ್ತೆ ತಡೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಮಾತನಾಡಿ, ಕೂಡಲೇ ರೈತರಿಗೆ ರಸಗೊಬ್ಬರ ಒದಗಿಸಬೇಕು, ಕೃಷಿ ಇಲಾಖೆಯ ಅವೈಜ್ಞಾನಿಕ ನಿಯಮ ರದ್ದು ಮಾಡಬೇಕು, ರೈತರಿಗೆ ಬೇಕಾಗುವಷ್ಟು ಬೀಜ ಮತು ರಸಗೊಬ್ಬರ ಸಿಗುವಂತೆ ವ್ಯವಸ್ಥೆ ಮಾಡಬೇಕು. ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಡಿಸಿ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ನೂರಾರು ರೈತರು, ಸಂಟನೆಗಳ ಪದಾಧಿಕಾರಿಗಳಿದ್ದರು.