ಸೇಡಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತ ಇಇ ಶಿವಶರಣಪ್ಪ ಜೇವರ್ಗಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಪಾಟೀಲ್ ಊಡಗಿ, ಪ್ರಭುರೆಡ್ಡಿ, ಪ್ರಭಯ್ಯ ಮಠ, ಶ್ರೀಯಾಂಕಾ ಧನಶ್ರೀ ಇದ್ದರು.
- ಬಸವರಾಜ ಪಾಟೀಲ್ ಆಶಯ
- ಸೇಡಂನಲ್ಲಿ ಸೇವಾ ನಿವೃತ್ತಿ ಸಮಾರಂಭ
ಸೇಡಂ: ಸರ್ಕಾರಿ ನೌಕರರಾದ ನಾವು ಸಲ್ಲಿಸುವ ಸೇವೆ, ಮಾಡುವ ಕೆಲಸ ಜನಮಾನಸದಲ್ಲಿ ಉಳಿಯುವಂತಾಗುವುದರ ಜತೆಗೆ ಸದಾ ಸ್ಮರಿಸುವಂತಿರಬೇಕು ಎಂದು ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ ಹೇಳಿದರು.
ಸರ್ಕಿಟ್ ಹೌಸ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆಯಲ್ಲಿ 27ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇಇ ಶಿವಶರಣಪ್ಪ ಜೇವರ್ಗಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಶಿವಶರಣಪ್ಪ ಅವರು ತಾಲೂಕಿನಲ್ಲಿ ಎಇಇ ಆಗಿ, ಇದೀಗ ಇಇ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಕೆಲಸ ಗುಣಮಟ್ಟದಿಂದ ನಡೆಯುವಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದು ಬಣ್ಣಿಸಿದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ ಮಾತನಾಡಿ, ಸರ್ಕಾರಿ ನೌಕರ ಸೇವೆಗೆ ಸೇರಿದಾಗಲೇ ನಿವೃತ್ತಿ ದಿನಾಂಕ ನಿಗದಿ ಆಗಿರುತ್ತದೆ. ಮಧ್ಯದಲ್ಲಿನ ದಿನಗಳಲ್ಲಿ ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯುವಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
ನಿವೃತ್ತ ಇಇ ಶಿವಶರಣಪ್ಪ ಜೇವರ್ಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ತಾಲೂಕಿನ ಪ್ರತಿ ಹಳ್ಳಿಗೂ ತಿರುಗಾಡಿ ಕೆಲಸ ಮಾಡಿದ್ದೇನೆ. ಜನರ ಸಹಕಾರ ಹಾಗೂ ರಾಜಕಾರಣಿಗಳ ಅಭಿವೃದ್ಧಿಪರ ಕಾಳಜಿ ಮರೆಯುವಂತಿಲ್ಲ ಎಂದು ಹೇಳಿದರು.
ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಇಇ ಪ್ರಭಯ್ಯ ಮಠ, ಜಿಮ್ಸ್ ನಿರ್ದೇಶಕ ಡಾ.ಉಮೇಶ, ಲೋಕೋಪಯೋಗಿ ಇಲಾಖೆ ನಿವೃತ್ತ ಅಧಿಕಾರಿಗಳಾದ ಶರಣಪ್ಪ ಸುಲಗುಂಟೆ, ಸುರೇಶ ಶಮಾರ್, ದಶವಂತ ಗಾಜರೆ, ಮೀನಾಕ್ಷಿ ಜೇವರ್ಗಿ ಮಾತನಾಡಿದರು.
ಎಇಇಗಳಾದ ವಿಶ್ವನಾಥ ಮಾವಿನಗಿಡ, ಬಸಯ್ಯ ಹಿರೇಮಠ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರತಿ, ಪ್ರಮುಖರಾದ ಗುರುಪ್ರಸಾದ, ಅನೀಲಕುಮಾರ, ಗುರುರಾಜ್ ಸಿರಿಮನಿ, ರವಿ ಚಿಕ್ಕಳಗಿ ಇತರರಿದ್ದರು.
ಮಲ್ಲಿಕಾರ್ಜುನ ಆರೆಬೊಮ್ನಳ್ಳಿ ಪ್ರಾರ್ಥಿಸಿದರು. ಶಿವಕುಮಾರ ಬಟಗೇರಾ ನಿರೂಪಣೆ ಮಾಡಿ, ವಂದಿಸಿದರು.