ವಿಬಿಜಿ Campaign ರಾಮ್ ಜಿ ಅಭಿಯಾನದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಂ.ಶೇಖರ್ ಮಾತನಾಡಿದರು. ತಾಲೂಕು ಐಇಸಿ ಸಂಯೋಜಕ ಕೆ.ರಾಘವೇಂದ್ರ, ವಿಆರ್ಡಬ್ಲ್ಯು ರಮೇಶ್, ಗ್ರಾಪಂ ಸಿಬ್ಬಂದಿ, ರೈತರು ಇದ್ದರು.
ಕುಟುಂಬಗಳಿಗೆ ಹೆಚ್ಚಿನ ಉದ್ಯೋಗವಕಾಶ ನೀಡಿ ಗ್ರಾಮೀಣಾಭಿವೃದ್ಧಿ ಹಾಗೂ
ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಮಹತ್ವದ ಬದಲಾವಣೆ ಮೂಲಕ ಜಾರಿಗೊಂಡಿರುವ ವಿಬಿಜಿ ರಾಮ್ ಜಿ ಯೋಜನೆಯ ಸೌಲಭ್ಯ ಅರ್ಹರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಎಂ.ಎಚ್.ಪಟ್ಟಣ ಗ್ರಾಪಂ ಪಿಡಿಒ ಕೆ.ಎಂ.ಶೇಖರ್ ತಿಳಿಸಿದರು.
ಎಂ.ಎಚ್ ಪಟ್ಟಣ ಗ್ರಾಪಂ ವ್ಯಾಪ್ತಿಯ ಲಕ್ಕೇನಹಳ್ಳಿ, ಮುದಿಗೆರೆಯಲ್ಲಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಮಾತನಾಡಿ, ದಿನಗೂಲಿ ಮೊತ್ತವನ್ನು 370ರಿಂದ 382 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು, ಉದ್ಯೋಗ ಖಾತ್ರಿ 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ. ಇದರ ಪರಿಣಾಮವಾಗಿ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಹೊಂದಿರುವ ಕುಟುಂಬವು ವರ್ಷಕ್ಕೆ ಗರಿಷ್ಠ 47,750 ರೂ. ವರೆಗೆ ಆದಾಯ ಗಳಿಸುವ ಅವಕಾಶವಿದೆ ಎಂದರು.
ತಾಪಂ ಐಇಸಿ ಸಂಯೋಜಕ ಕೆ.ರಾಘವೇಂದ್ರ ಮಾತನಾಡಿ, ಕಡ್ಡಾಯವಾಗಿ ಎನ್ಎಂಎಂಎಸ್ ಮೂಲಕ ಹಾಜರಾತಿ ದಾಖಲಿಸಬೇಕು. ರೈತರಿಗೆ ಕೃಷಿ ಚಟುವಟಿಕೆಗಳಿಗೆ 60 ದಿನಗಳ ವಿರಾಮದ ಅವಕಾಶ, ನಿರುದ್ಯೋಗ ಭತ್ಯೆ ಸೇರಿದಂತೆ ಯೋಜನೆಯ ವಿವಿಧ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದ್ದು, ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.