ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ಮಂಗಳವಾರ ಬಸವ ಸಂಸತಿ ಚಿಂತನ ಶಿಬಿರವನ್ನು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಲಾವಣ್ಯ ಮಾತಾಜಿ, ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ, ಡಾ.ಎಸ್.ಬಿ.ದುರ್ಗೆ, ಜಯಪ್ರಕಾಶ ಸದಾನಂದೆ, ಕಲ್ಯಾಣರಾವ ಶಿವಣಕರ್, ಜಗನ್ನಾಥ ಪತಂಗೆ ಇತರರಿದ್ದರು.
- ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶಯ
- ಅನುಭವ ಮಂಟಪದಲ್ಲಿ ಬಸವ ಸಂಸ್ಕೃತಿ ಚಿಂತನ ಶಿಬಿರ
ಬಸವಕಲ್ಯಾಣ: ಯುವಕರಲ್ಲಿ ಬಸವತತ್ವದ ನಿಜವಾದ ಅರಿವು ಮೂಡಿಸುವುದೇ ಬಸವ ಸಂಸ್ಕೃತಿ ಚಿಂತನ ಶಿಬಿರದ ಮೂಲ ಆಶಯ ಎಂದು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ನಗರದ ಅನುಭವ ಮಂಟಪ ಪರಿಸರದಲ್ಲಿ ವಿಶ್ವಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ ಬಸವ ಸಂಸ್ಕೃತಿ ಚಿಂತನ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಶಿಬಿರದಲ್ಲಿ ಬಸವಾದಿ ಶರಣರ, ಲಿಂಗಾಯತ ಧರ್ಮದ ಕುರಿತು ಸುಮಾರು 20 ವಿಷಯಗಳ ಮೇಲೆ ವಿದ್ವಾಂಸರಿಂದ ಅನುಭಾವ ಚಿಂತನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇಂತಹ ಶಿಬಿರಗಳಿಂದ ಯುವಕರಲ್ಲಿ ಬಸವತತ್ವ ನಿಷ್ಠೆ ಗಟ್ಟಿಗೊಂಡು ನಿಜವಾದ ಅರಿವು ಮೂಡುತ್ತದೆ. ಇದರಿಂದ ಅವರ ಆಚರಣೆಯಲ್ಲಿ ಬಸವತತ್ವ ಮೂಡುತ್ತದೆ. ಈ ನಿಟ್ಟಿನಲ್ಲಿ ಬಸವ ಸಂಸತಿ ಚಿಂತನ ಶಿಬಿರ ಆಯೋಜಿಸಲಾಗಿದೆ. ಶಿಬಿರಾರ್ಥಿಗಳು ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ಬಸವಾದಿ ಶರಣ ಪುಣ್ಯ ಭೂಮಿ ಬಸವಕಲ್ಯಾಣದಲ್ಲಿ ಇಂತಹ ಶಿಬಿರ ಆಯೋಜಿಸಿರುವುದು ಸಂತಸ ತಂದಿದೆ. ಶಿಬಿರ ಉದ್ಘಾಟನೆ ಮಾಡುವ ಅವಕಾಶ ದೊರೆಕಿರುವುದು ಧನ್ಯತೆ ಭಾವವನ್ನು ಮೂಡಿದೆ ಎಂದರು.
ಸಾನ್ನಿದ್ಯ ವಹಿಸಿದ್ದ ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯಲಾವಣ್ಯ ಮಾತಾಜಿ ನೇತೃತ್ವ, ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬಸವಗುರು ಪೂಜೆಯನ್ನು ವಿಶ್ವ ಬಸವಧರ್ಮ ಟ್ರಸ್ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ ನೆರವೇರಿಸಿದರು. ಜಯಪ್ರಕಾಶ ಸದಾನಂದೆ, ಸೋಹಂ ಮಾಲೀಕ ಕಲ್ಯಾಣರಾವ ಶಿವಣಕರ್, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಜಗನ್ನಾಥ ಪತಂಗೆ, ಗೌತಮಬುದ್ಧ, ನಂದೀಶ ಎಂ.ಎಸ್., ಕೆ.ನರಸಿಂಹಮೂರ್ತಿ ಇದ್ದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ಸಚಿನ್ ಕೌಂಟೆ ವಂದಿಸಿದರು.
12ನೇ ಶತಮಾನದಲ್ಲಿ ಶರಣರು ಮಾಡಿರುವ ಕ್ರಾಂತಿ ಅಪೂರ್ವವಾಗಿದೆ. ಶರಣರು ಸಮಸಮಾಜದ ಜತೆಗೆ ದುಶ್ಚಟ, ದುರ್ವ್ಯಸನಗಳಿಂದ ಮುಕ್ತವಾದ ಸಮಾಜ ನಿರ್ಮಾಣ ಮಾಡಿದ್ದರು. ಶರಣರ ಬದುಕಿನ ಮೌಲ್ಯಗಳೇ ಮುಂದಿನ ದಿನಮಾನಗಳಲ್ಲಿ ಅನೇಕ ಸಂತ ಮಹಾತ್ಮರು, ಅನುಭಾವಿಗಳು ಬೋಧಿಸುತ್ತ ಬರುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು. ವ್ಯಸನಮುಕ್ತ ಸಮಾಜದ ಮೌಲ್ಯಗಳ ಕುರಿತು ಸಮಾಜದಲ್ಲಿ ಜಾಗೃತಿ ಮಾಡುವ ಕಾರ್ಯ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯು ಮಾಡುತ್ತಿವೆ ಎಂದು ಹೇಳಲು ಸಂತೋಷವಾಗುತ್ತದೆ. ಭಾಲ್ಕಿಯ ಶೀಗಳು ಯುವಕರಲ್ಲಿ ಬಸವಪ್ರೆ ಮೂಡಿಸುವ ಮೂಲಕ ಅನೇಕ ದಶಕಗಳಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"
ರಾಷ್ಟ್ರ ಭಕ್ತಿ, ಧರ್ಮನಿಷ್ಠೆ ಗಟ್ಟಿಯಾಗಬೇಕಾದರೆ ಇದಕ್ಕೆ ಸಂಬಂಧಿಸಿದ ಶಿಬಿರಗಳು ಮೂಲ. ಬಸವ ತತ್ವ, ಶರಣ ಸಂಸತಿ ಬೆಳೆಸುವ ಉದ್ದೇಶದಿಂದ ಹಿಂದೆ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪದಲ್ಲಿ ಶಿಬಿರಗಳನ್ನು ಆಯೋಜಿಸುತ್ತಿದ್ದರು. ಈ ಪರಂಪರೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಬಸವ ಸಂಸತಿ ಚಿಂತನ ಶಿಬಿರ ನನಡೆಸಿಕೊಂಡು ಬರಲಾಗುತ್ತಿದೆ.
— > ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ