ಕನಕಪುರ ತಾಲೂಕಿನ ಕಸಬಾ ಹೋಬಳಿ ಶಿವನಹಳ್ಳಿ ಜಿಪಂ ವ್ಯಾಪ್ತಿಯ ನಾರಾಯಣಪುರ ಮತ್ತು ಚಾಕನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಹಮ್ಮಿಕೊಂಡಿದ್ದ ಕಂದಾಯ ಇ-ಪೌತಿ ಹಾಗೂ ಪಿಂಚಣಿ ಆಂದೋಲನದಲ್ಲಿ ಮುತ್ತುರಾಜ್, ಶ್ರೀನಿವಾಸ್, ನಾರಾಯಣಪುರ ನಾಗ ಇತರರು ಇದ್ದರು. 
ರಾಜ್ಯ

ಪಿಂಚಣಿ ಆಂದೋಲನ ಸದುಪಯೋಗ ಆಗಲಿ

: ಗ್ರಾಮೀಣ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಹಮ್ಮಿಕೊಂಡಿರುವ ಪೌತಿ ಹಾಗೂ ಪಿಂಚಣಿ ಆಂದೋಲನದಲ್ಲಿ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಕಸಬಾ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಶಿವನಹಳ್ಳಿ ಜಿಪಂ ವ್ಯಾಪ್ತಿಯ ನಾರಾಯಣಪುರ ಮತ್ತು ಚಾಕನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಹಮ್ಮಿಕೊಂಡಿದ್ದ ಕಂದಾಯ ಇ-ಪೌತಿ ಹಾಗೂ ಪಿಂಚಣಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರಿ ಸೇವೆಯನ್ನು ಸುಗಮಗೊಳಿಸಲು ಸರ್ಕಾರದ ಆದೇಶದಂತೆ ತಹಸಿಲ್ದಾರ್ ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ಆಂದೋಲನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಾರ್ವಜನಿಕರು ಅಹವಾಲುಗಳನ್ನು ಸೂಕ್ತ ಹಾಗೂ ಸಂಬಂಧಪಟ್ಟ ದಾಖಲೆಗಳೊಂದಿಗೆ ಬಂದು ಸಹಕರಿಸಿ ತಮ್ಮ ಕೆಲಸಗಳನ್ನು ಮಾಡಿಸಿ ಕೊಳ್ಳಬೇಕೆಂದು ವಿನಂತಿಸಿದರು.
ಪಹಣಿ ತಿದ್ದುಪಡಿ, ಪೌತಿ ಖಾತೆ, ವಿವಿಧ ಪಿಂಚಣಿ ಸೌಲಭ್ಯ, ಹಾಗೂ ಇನ್ನಿತರ ಕೆಲಸಗಳಿಗೆ ತಮ್ಮ ಅಹವಾಲುಗಳನ್ನು ಹಲವು ಸಾರ್ವಜನಿಕರು ಅಧಿಕಾರಿಗಳಿಗೆ ಕೊಟ್ಟರು.
ನಾರಾಯಣಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಸದಸ್ಯ ಬೆಟ್ಟಹಳ್ಳಿ ಸಂಜೀವಯ್ಯ, ಆರಾಧನಾ ಕಮಿಟಿ ಸದಸ್ಯ ನಾರಾಯಣಪುರ ನಾಗ, ಕಂದಾಯ ನಿರೀಕ್ಷಕ ಸಂತೋಷ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿ ರವಿಕುಮಾರ್, ಗ್ರಾಮ ಸಹಾಯಕರು, ಗ್ರಾಪಂ ಸಿಬ್ಬಂದಿ ಇದ್ದರು.