ಭಾಲ್ಕಿ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಯ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್​, ಸೂರ್ಯಕಾಂತ ಬಿರಾದಾರ, ರಾಜಶೇಖರ ನೆಲ್ಲಿ ಇದ್ದರು. 
ರಾಜ್ಯ

ಪಂಚ ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಲಿ

ಪ್ರಮುಖ ಮುಖ್ಯಾಂಶಗಳು

  • ಹಣಮಂತರಾವ ಚವ್ಹಾಣ್​ ಸೂಚನೆ
  • ಭಾಲ್ಕಿಯಲ್ಲಿ ಪ್ರಗತಿ ಪರಿಶೀಲನಾ ಸಭೆ
ಭಾಲ್ಕಿ: ಸರ್ಕಾರದ ಯೋಜನೆಗಳು ಎಲ್ಲರಿಗೂ ಮುಟ್ಟಿಸುವ ಕಾರ್ಯವಾಗಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್​ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಮಾತನಾಡಿ, ಸರ್ಕಾರಿ ಕರ್ಮಚಾರಿಗಳು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಎಲ್ಲಾ ಫಲಾನುಭವಿಗಳಿಗೆ ಸದುಪಯೋಗ ವಾಗುವಂತೆ ಕಾರ್ಯಮಾಡಬೇಕು. ತಾಲೂಕಿನಲ್ಲಿ ಯೋಜನೆಗಳ ಅನುಷ್ಠಾನ ಸರಿಯಾದ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಕ್ತಿ ಯೋಜನೆಯಡಿ ಸಾರಿಗೆ ಇಲಾಖೆಯವರು ಉತ್ತಮ ಸೇವೆ ಮಾಡಬೇಕು. ಕೆಲವು ಸಲ ಬಸ್​ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎನ್ನುವ ಆರೋಪ ಇದೆ ಅದನ್ನು ಸರಿಪಡಿಸಬೇಕು. ಭಾಲ್ಕಿ ಬಸ್​ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಶಾಲಾ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬಸ್​ ಒದಗಿಸಬೇಕು. ಶಾಲಾ ವಿದ್ಯಾರ್ಥಿಗಳು ಕೈ ಮಾಡಿದಲ್ಲಿ ಬಸ್​ ನಿಲ್ಲಿಸಿ ಅವರನ್ನು ಹತ್ತಿಸಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಯ ನೋಡಲ್​ ಅಧಿಕಾರಿ ರಾಜಶೇಖರ ನೆಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿ ತಾಕೀತು ಮಾಡಿದರು.
ತಾಪಂ ಇಒ ಅಧಿಕಾರಿ ಸೂರ್ಯಕಾಂತ ಬಿರಾದಾರ, ಸಿಬ್ಬಂದಿ ಸುನೀಲ, ಯೋಜನೆಯ ಸದಸ್ಯರುಗಳಾದ ವಿಲಾಸ ಪಾಟೀಲ ದಾಡಗಿ, ಕೈಲಾಸ ಶಿವಾಜಿ ಭಾವಿಕಟ್ಟೆ, ಧನರಾಜ ಪಾಟೀಲ, ಓಂಕಾರ ರಾಮಶೆಟ್ಟಿ, ಸಂಗಮೇಶ ವಾಲಿ, ಜಯಶ್ರೀ ಮಾನಕಾರಿ, ಪಾಂಡುರಂಗ ಕಣಜೆ, ದಿಲೀಪ ಪಾಟೀಲ, ಸಂಜುಕುಮಾರ ಶಂಕರೆಪ್ಪ, ಮಂಗಳಾ ಬಾಬುರಾವ, ಸತೀಶ ಮಾಳಗೆ, ಗೋಪಾಲ ಸೂರ್ಯವಂಶಿ ಇತರರಿದ್ದರು.