ಮುಳಬಾಗಿಲಿನಲ್ಲಿ Kannada ಹಮ್ಮಿಕೊಂಡಿದ್ದ ಭುವನೇಶ್ವರಿ ದೇವಿಯ ಮೆರವಣಿಗೆಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್ ಚಾಲನೆ ನೀಡಿದರು.
- ಶಾಸಕ ಸಮೃದ್ಧಿ ವಿ.ಮಂಜುನಾಥ ಅಭಿಮತ
ಮುಳಬಾಗಿಲು: ಸಾಹಿತ್ಯ ಕ್ಷೇತ್ರ್ಕಕೆ ದಿಗ್ಗಜ ಡಿವಿಜಿ ಹುಟ್ಟಿದ ಊರಲ್ಲಿ Kannada ಮುಳಬಾಗಿಲು ಕನ್ನಡ ಉತ್ಸವದ ಬಾರಿಸು ಕನ್ನಡ ಡಿಂಡಿಮವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಕನ್ನಡ ಹಬ್ಬ ಆಚರಿಸಲಾಗುತ್ತಿದೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ ಅಭಿಮತ ವ್ಯಕ್ತಪಡಿಸಿದರು.
ನಗರದಲ್ಲಿ ಕನ್ನಡ ಉತ್ಸವದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಭುವನೇಶ್ವರಿ ದೇವಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಳಬಾಗಿಲು ಚಾರಿತ್ರಿಕ, ಐತಿಹಾಸಿಕ, ಧಾರ್ಮಿಕ ಹಾಗೂ ಸಾಹಿತ್ಯಕವಾಗಿ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಮತ್ತೊಬ್ಬರಿಗೆ ಪ್ರೇರಣೆ ಮತ್ತು ಸ್ಪೂರ್ತಿ ಆಗುವಂತಿರಬೇಕು. ಆದ್ದರಿಂದ ಪ್ರತಿಯೊಬ್ಬರೂ ಪಾತೀತ, ಜಾತ್ಯಾತಿತ ಹಾಗೂ ಸಮಾನ ಮನಸ್ಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಮೂಲಕ ಸೋಮೇಶ್ವರ ಪಾಳ್ಯ, ಗುಣಿಗಂಟಿಪಾಳ್ಯ, ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಪ್ರತಿಮೆಗೆ ಹೂಮಾಲೆ ಹಾಕಿ ನಂತರ ಡಿವಿಜಿ ಮತ್ತು ಕೆಇಬಿ ವೃತ್ತದ ಮೂಲಕ ನೇತಾಜಿ ಕ್ರೀಡಾಂಗಣಕ್ಕೆ ಆಟೋ, ದ್ವಿಚಕ್ರ ವಾಹನಗಳಲ್ಲಿ ಕನ್ನಡ ಬಾವುಟ ಮೆರವಣಿಗೆ ನಡೆಸಲಾಯಿತು. ನಂತರ ನೇತಾಜಿ ಕ್ರೀಡಾಂಗಣದಲ್ಲಿ ಮೆರವಣಿಗೆ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.
ರಾತ್ರಿ ಹಮ್ಮಿಕೊಂಡಿದ್ದ ಸಾಂಸತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ರಾಜೇಶ್ ಕೃಷ್ಣನ್, ನವೀನ್ ಸಜ್ಜು, ಕಾಮಿಡಿ ಕಿಲಾಡಿಗಳಾದ ಕುರಿ ಪ್ರತಾಪ್, ಮಂಜು ಪಾವಗಡ, ಜಗಪ್ಪ ತಂಡ ಮನರಂಜಿಸಿದರು.
ಡಿವಿಜಿ ಕನ್ನಡ ಸಂದ ಅಧ್ಯ ಕೆ.ಮಧುಸೂದನ್, ಮುಖಂಡರಾದ ಲ್ಮನಾರಾಯಣ, ಡಿ.ಸೋಮಣ್ಣ, ಕವತನಹಳ್ಳಿ ಮುನಿಸ್ವಾಮಿಗೌಡ, ಮಿಟ್ಟಹಳ್ಳಿ ಪ್ರಕಾಶ್ ಗೌಡ, ಪಿ.ಎಸ್.ರಮೇಶ್, ಆಟೋ ಮಂಜುನಾಥ್, ಕನ್ನಡಪರ ಸಂಟನೆ ಮುಖಂಡರು ಇತರರು ಇದ್ದರು.