ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರಿ ಮಠದಲ್ಲಿ ಗುರುವಂದನೆ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯನ್ನು ಶ್ರೀ ಡಾ. ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಎಂ.ಬಿ. ಮರಮಕಲ್ ದೇಶಮುಖ, ಬಿ.ಕೆ.ಹಿರೇಮಠ, ಮಲ್ಲಿನಾಥ ಹಿರೇಮಠ, ಸಿದ್ರಾಮಪ್ಪ ಗುದಗೆ, ಪಿ.ಕೆ. ಹಿರೇಮಠ, ಚನ್ನಬಸವರಡ್ಡಿ ಮರಮಕಲ್, ಸಂಜನಾ ಮರಮಕಲ್ ಇದ್ದರು.
- ಶ್ರೀ ಡಾ.ಚನ್ನವಿರ ಶಿವಾಚಾರ್ಯ ಸದಾಶಯ
- ಹಾರಕೂಡದಲ್ಲಿ ಗುರುವಂದನೆ ಕಾರ್ಯಕ್ರಮ
ಬಸವಕಲ್ಯಾಣ: ಗುರು ಎಂದರೆ ಬೆಳಕು. ಗುರುವಿನ ಸಾನ್ನಿಧ್ಯಕ್ಕೆ ಭಕ್ತಿ, ಶ್ರದ್ಧೆಯಿಂದ ಬರುವವರು ಬೆಳಕಿನ ಅಂದರೆ ಸುಜ್ಞಾನದ ಅನುಭೂತಿ ಪಡೆಯುತ್ತಾರೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರಿ ಮಠದಲ್ಲಿ ಗುರುವಂದನೆ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಹೃದಯ ಮಂಟಪ ಗುರು ಪ್ರಜ್ವಲಿತ ಧರ್ಮದೀಪದಿಂದ ಬೆಳಗುತ್ತಿದ್ದರೆ ಇಡೀ ಬದುಕೆ ಬೆಳಕಿನಿಂದ ಕಂಗೊಳಿಸುತ್ತದೆ. ಗುರುವಿನ ವಾಣಿಯಂತೆ ಯಾರು ತಮ್ಮ ಬದುಕಿನ ವೀಣೆಯನ್ನು ಮೀಟುವರೊ ಅಂಥವರು ಶ್ರೇಯಸ್ಸಿನ ಪರ್ವ ತಮ್ಮದಾಗಿಸಿಕೊಳ್ಳುತ್ತಾರೆ ಎಂದರು.
ಎಂ. ಬಿ.ಮರಮಕಲ್ ದೇಶಮುಖ, ಜಿಪಂ ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ. ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಪಿ.ಕೆ. ಹಿರೇಮಠ, ಅಕ್ಕಮ್ಮ ಮರಮಕಲ್, ಸಂಜನಾ ಮರಮಕಲ್ ಇದ್ದರು. ಚನ್ನಬಸವರಡ್ಡಿ ಮರಮಕಲ್ ಸ್ವಾಗತಿಸಿದರು. ಎಂ. ಬಿ. ಮರಮಕಲ್ ದೇಶಮುಖ ಪರಿವಾರದಿಂದ ಹಾರಕೂಡ ಶ್ರೀಗಳ 1015ನೇ ತುಲಾಭಾರ ಜರುಗಿತು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.