ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಪಂ ವ್ಯಾಪ್ತಿಯ ಜೊನ್ನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಬೋಯಿಂಗ್​ ಸಂಸ್ಥೆ ಸಿಎಸ್​ಆರ್​ ಮುಖ್ಯಸ್ಥೆ ಪ್ರವಿಣಾ ಉದ್ಘಾಟಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಗಂಗಧಾರ್​ ಮೂರ್ತಿ, ಬೆಂಗಳೂರಿನ ಬೊಯಿನ್​ ಆಸ್ಪತ್ರೆ ಡಾ.ಎಂ.ಗಣೇಶ್​, ದಂತ ವೈದ್ಯ ಶಿವ, ಡಿಜೋಥೊರಪಿ ಡಾ.ದಿಯಾ, ಕಣ್ಣಿನ ತಪಾಸಕ ಕಾರ್ತಿಕ್​ ಸುತ್ತ-ಮುತ್ತಲಿನ ಗ್ರಾಮಸ್ಥರು ಇದ್ದರು.  
ರಾಜ್ಯ

ಆರೋಗ್ಯ ಶಿಬಿರ ಸದುಪಯೋಗವಾಗಲಿ / CHANARAYAPATTAN

ಚನ್ನರಾಯಪಟ್ಟಣ : ಗ್ರಾಮೀಣ ಭಾಗದವರ ಆರೋಗ್ಯ ದೃಷ್ಟಿಯಿಂದ ದೇವನಹಳ್ಳಿ ಆರೋಗ್ಯ ಕೇಂದ್ರ ಪ್ರಾರಂಭಿಸಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೋಯಿಂಗ್​ ಸಂಸ್ಥೆ ಸಿಎಸ್​ಆರ್​ ಮುಖ್ಯಸ್ಥೆ ಪ್ರವಿಣಾ ಹೇಳಿದರು.
ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಪಂ ವ್ಯಾಪ್ತಿಯ ಜೊನ್ನಹಳ್ಳಿಯಲ್ಲಿ ಬೋಯಿಂಗ್​ ಕಂಪನಿಯವರಿಂದ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ದಂತ, ಸ್ತ್ರೀ ರೋಗಗಳು, ಮೂಳೆ, ಕಣ್ಣು ಸೇರಿ ಹಲವು ದೀರ್ಘಾವಧಿ ರೋಗಗಳಿಗೆ ಚಿಕಿತ್ಸೆ ಜತೆಗೆ ಉಚಿತ ಔಷಧ ನೀಡುತ್ತೇವೆ. ದೂರದ ಪಟ್ಟಣಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಬದಲು ಮನೆ ಬಾಗಿಲಿಗೆ ಬಂದ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕುಗ್ರಾಮಗಳಲ್ಲಿನ ರೋಗಿಗಳಿಗಾಗಿ ನಿತ್ಯ ಮೊಬೈಲ್​ ಮೆಡಿಕಲ್​ ಯೂನಿಟ್​ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಕೋಡಿನೇಟರ್​ ಡಾ.ಲಿಖಿತಾ ಮಾತನಾಡಿ, ನಿತ್ಯ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಇಂತಹ ಆರೋಗ್ಯ ಶಿಬಿರ ಹಳ್ಳಿಗಳಲ್ಲಿ ಹೆಚ್ಚಾಗಿ ನಡೆಸುವುದರಿಂದ ಗ್ರಾಮಾಂತರ ಪ್ರದೇಶದವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ. ಅಪಘಾತ, ಮೂತ್ರಪಿಂಡ ತೊಂದರೆ, ನರರೋಗ, ನವಜಾತ ಶಿಶುಗಳ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್​, ಸುಟ್ಟಗಾಯ ಇತ್ಯಾದಿಗಳ ತಪಾಸಣೆ ಮಾಡಲಾಗುವುದು ಎಂದರು.