ಅಫಜಲಪುರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ವೈದ್ಯರು ಜನರ ಹೆಲ್ತ್ ತಪಾಸಣೆ ಮಾಡಿದರು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಅರುಣಕುಮಾರ ಪಾಟೀಲ್, ಡಾ.ಸಂಜೀವಕುಮಾರ ಪಾಟೀಲ್, ಡಾ.ಅಂಬಿಕಾ ಪಾಟೀಲ್ ಇದ್ದರು.
- ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸಲಹೆ
- ಅಫಜಲಪುರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಅಫಜಲಪುರ: ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ ಕೊಡುಗೆ ಅಪಾರವಾಗಿದೆ. ಅವರು ತೋರಿದ ದಾರಿಯಲ್ಲಿ ಭಕ್ತರು ಸಾಗಬೇಕಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಅರುಣಕುಮಾರ ಪಾಟೀಲ್ ಹೇಳಿದರು.
ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ 18ನೇ ಪುಣ್ಯಸ್ಮರಣೆ ನಿಮಿತ್ತ ಶಾಂತಾ ಆಸ್ಪತ್ರೆಯಿಂದ ಶುಕ್ರವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಶಾಂತವೀರ ಶ್ರೀಗಳು ದೈಹಿಕವಾಗಿ ನಮ್ಮ ಜತೆಗಿಲ್ಲದಿದ್ದರೂ ಅವರ ಮಾಡಿದ ಕಾರ್ಯಗಳು ಶಾಶ್ವತವಾಗಿದೆ ಎಂದರು.
ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ನಮ್ಮ ಗುರುಗಳು ಸಮಾಜದಿಂದ ಬಂದದ್ದು ಸಮಾಜಕ್ಕಾಗಿ ವಿನಿಯೋಗಿಸುವುದೇ ಸನ್ಯಾಸಿ ಧರ್ಮ ಎಂದು ಪ್ರತಿಪಾದಿಸಿದ್ದರು. ಅವರ ಆಶಯದಂತೆ ಶ್ರೀಮಠ ನಡೆಯುತ್ತಿದೆ ಎಂದು ಹೇಳಿದರು.
ಶಾಂತಾ ಆಸ್ಪತ್ರೆ ಅಧ್ಯಕ್ಷ ಡಾ.ಸಂಜೀವಕುಮಾರ ಪಾಟೀಲ್ ಮಾತನಾಡಿ, ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಅಗತ್ಯವಾಗಿದೆ. ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಶಾಂತಾ ಆಸ್ಪತ್ರೆ ನಿರ್ದೇಶಕಿ ಡಾ.ಅಂಬಿಕಾ ಪಾಟೀಲ್, ನಗರ ಯೋಜನಾ ಪ್ರಾಧಿಕಾರ ಅಧ್ಯ ಚಂದ್ರಶೇಖರ ಕರಜಗಿ, ಪ್ರಮುಖರಾದ ಮಂಜೂರ್ ಪಟೇಲ್, ಡಾ.ಜಾಫರ್ ಪಟೇಲ್, ಅರವಿಂದ ಹಾಳಕಿ, ಚಂದು ದೇಸಾಯಿ, ಬಸಣ್ಣ ಗುಣಾರಿ, ಮಲ್ಲು ವಾಳಿ, ಶಿವಾನಂದ ಚಿಂಚೋಳಿ, ಶಿವಶರಣಪ್ಪ ಸಾಲುಟಗಿ, ಬಸಯ್ಯ ನಂದಿಕೋಲ, ಮುರುಂದ್ರ ಮಸಳಿ, ಅಜರ ಮಣ್ಣೂರ, ಪ್ರವಿಣ ದೇಸಾಯಿ ಇತರರಿದ್ದರು.