ಇನ್ನಷ್ಟು ಅಭಿವೃದ್ಧಿ ಮುಂದುವರೆಯಲಿ development 
ರಾಜ್ಯ

ಇನ್ನಷ್ಟು ಅಭಿವೃದ್ಧಿ ಮುಂದುವರೆಯಲಿ development

ಕೋಲಾರ ಡೆಸ್ಕ್
ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಸದಸ್ಯರು 5 ವರ್ಷ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದ್ದು, ಮುಂದೆಯೂ ನಿಮ್ಮ ಸೇವೆ ಮುಂದುವರೆಯಲಿ ಎಂದು ಮಸ್ತೆನಹಳ್ಳಿ ಗ್ರಾಮ ಪಂಚಾಯಿತಿಗೆ ಆಡಳಿತ ಅಧಿಕಾರಿಯಾಗಿ ನೇಮಕವಾದ ಸಹಾಯಕ ಕೃಷಿ ನಿರ್ದೇಶಕ ಮಹೇಶ್​ ಬಾಬು ಹೇಳಿದರು.development
ತಾಲೂಕಿನ ಮಾಸ್ತೆನಹಳ್ಳಿ ಗ್ರಾಮ ಪಂಚಾಯಿತಿಯ 5 ವರ್ಷಗಳ ಆಡಳಿತಾವಧಿ ಮುಗಿದಿದ್ದು, ಕೊನೆಯ ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರನ್ನು ಗೌರವಿಸಿ ಮಾತನಾಡಿ, ಜನಸೇವೆ ಮಾಡುವುದು ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದರು.
ಅಧಿಕಾರವಧಿಯಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಪಕ್ಷಾತಿತವಾಗಿ ಕೆಲಸ ಮಾಡಿದ್ದೇವೆ ಎಂದು ಗ್ರಾಪಂ ಅಧ್ಯೆ ಮಮತಾ ನಾರಾಯಣಸ್ವಾಮಿ ತಿಳಿಸಿದರು.