May Kannada be respected.
ಚೇಳೂರು: ನೂತನ ತಾಲೂಕಿನಲ್ಲಿ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಸಹಕಾರದಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಕಸಾಪ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ತೀಮಾರ್ನಿಸಲಾಗಿದೆ.
ತಾಲೂಕಿನ ಮಾನಸ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಚೇಳೂರು ಕಸಾಪ ಅಧ್ಯಕ್ಷ ಜೆ.ಕೆ.ಆನಂದ ಮಾತನಾಡಿ, ಚೇಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನ್ನು ಇತ್ತೀಚಿಗೆ ರಚಿಸಲಾಗಿದ್ದು, ಪ್ರಥಮ ಅಧ್ಯಕ್ಷರಾಗಿ ನನ್ನನ್ನು ಸೇರಿ ಉಳಿದ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ಸಮ್ಮುಖದಲ್ಲಿ ಮಾಡಲಾಗಿದೆ. ಆಂಧ್ರ ಗಡಿಗೆ ಸಮೀಪವಿರುವ ಈ ಪ್ರದೇಶದಲ್ಲಿ ಕನ್ನಡ, ಸಾಹಿತ್ಯ ಮತ್ತು ಸಂಸತಿಯನ್ನು ಉಳಿಸಿ -ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದ್ದು ಅದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗುವುದು.
ಕಸಾಪ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಭಾಷಾ ಉಪನ್ಯಾಸಗಳು, ಕವಿ ಗೋಷ್ಠಿಗಳ ಜತೆಗೆ ಕಲೆ, ಸಾಹಿತ್ಯ, ಸಂಸತಿ ಬೆಳವಣಿಗೆಗೆ ಅಗತ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಿದೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಕನ್ನಡಕ್ಕೆ ಗೌರವ ದೊರೆಯುವಂತೆ, ಇಲ್ಲಿನ ಚಟುವಟಿಕೆಗಳು ಮಾದರಿಯಾಗಿರಲಿವೆ. ಭವಿಷ್ಯದಲ್ಲಿ ತಾಲೂಕುಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಜತೆಗೆ ಸ್ಥಳಿಯ ಸಾಹಿತ್ಯ ಪ್ರತಿಭೆಗಳನ್ನು ಉತ್ತೇಜಿಸಲಾಗುತ್ತದೆ ಎಂದರು.