ಕಲಬುರಗಿ ಕನ್ನಡ ಭವನ ಕಲಾಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರಕಲಾ ಶಿಬಿರಕ್ಕೆ ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್​ ಚಾಲನೆ ನೀಡಿದರು. ವಿಜಯಕುಮಾರ ತೇಗಲತಿಪ್ಪಿ, ರೇವಣಸಿದ್ದಪ್ಪ ಹೊಟ್ಟಿ, ಸವಿತಾ ಪಾಟೀಲ್​, ಜಯಶ್ರೀ ಮುಚಳಂಬಿ, ವಿಜಯ ಬಿರಾದಾರ್​ ಇತರರಿದ್ದರು. 
ರಾಜ್ಯ

ಚಿತ್ರ ಕಲಾವಿದರಿಗೆ ನಿರಂತರ ಪ್ರೋತ್ಸಾಹ ಸಿಗಲಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ಚಿತ್ರ ಕಲಾವಿದರ ಪಾತ್ರ ಮಹತ್ವದ್ದಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್​ ಹೇಳಿದರು. ಕನ್ನಡ ಭವನದ ಕಲಾಸೌಧದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಹಾಗೂ ಹೊಟ್ಟಿ ಫೌಂಡೇಷನ್​ನಿಂದ ಸೋಮವಾರ ಆಯೋಜಿಸಿದ್ದ ಒಂದು ದಿನದ ಚಿತ್ರಕಲಾ ಶಿಬಿರ ಉದ್ಘಾಟಿಸಿ ಮಾತನಾಡಿ, ತಮ್ಮ ಕುಂಚದಿಂದ ಶ್ರೇಷ್ಠ ಕಲೆಯನ್ನು ಅರಳಿಸುವ ಅನೇಕ ಪ್ರತಿಭೆಗಳು ನಮ್ಮ ಭಾಗದಲ್ಲಿವೆ, ಅವರನ್ನು ಗುರುತಿಸುವ ಕಾರ್ಯ ನಿರಂತರ ನಡೆಯಬೇಕಿದೆ ಎಂದರು. ಕಸಾಪ ಜಿಲ್ಲಾಧ್ಯ ವಿಜಯಕುಮಾರ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು. ಫೌಂಡೇಷನ್​ ಅಧ್ಯ ರೇವಣಸಿದ್ದಪ್ಪ ಹೊಟ್ಟಿ, ಪ್ರಮುಖರಾದ ರಾಜಕುಮಾರ ಸೇಡಂ, ಸವಿತಾ ಪಾಟೀಲ್​, ಜಯಶ್ರೀ ಮುಚಳಂಬಿ, ವಿಜಯ ಬಿರಾದಾರ್​, ಚಂದ್ರಶೇಖರ ಬ್ಯಾಕೋಡ, ಧರ್ಮಣ್ಣ ಧನ್ನಿ, ಶಿವರಾಜ ಅಂಡಗಿ, ನಾಗೇಂದ್ರ ಸಕ್ಕರಗಿ, ಡಾ.ರೆಹಮಾನ್​ ಪಟೇಲ್​, ಮೊಹ್ಮದ್​ ಅಯಾಜೋದ್ದಿನ್​ ಪಟೇಲ್​, ಡಾ.ಎಸ್​.ಎಂ ನೀಲಾ, ಭಾಗ್ಯಶ್ರೀ ಕುಲಕರ್ಣಿ, ಲಕ್ಷೀ ಇತರರಿದ್ದರು.