ಹುಳಿಯಾರು meeting ಹೋಬಳಿಯ ಯಳನಾಡು ಮಠದಲ್ಲಿ ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಕೋಳಗುಂದ ಮಠದ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಇದ್ದರು. 
ರಾಜ್ಯ

ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗಲಿ meeting

ಪ್ರಮುಖ ಮುಖ್ಯಾಂಶಗಳು

  • ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ಹೇಳಿಕೆ
ಹುಳಿಯಾರು: ಬದಲಾಗುತ್ತಿರುವ ಕಾಲಘಟ್ಟದಲ್ಲಿ meeting ಸಮಾಜದ ಪ್ರತಿಯೊಬ್ಬರೂ ಧರ್ಮ, ಭಕ್ತಿ ಮತ್ತು ಸನ್ಮಾರ್ಗದ ಹಾದಿಯಲ್ಲಿ ಸಾಗುವುದು ಅತ್ಯಗತ್ಯ ಎಂದು ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಯಳನಾಡು ಮಠದಲ್ಲಿ ಹಮ್ಮಿಕೊಂಡಿದ್ದ ಚಿಂತನ&ಮಂಥನ ಸಭೆಯಲ್ಲಿ ಮಾತನಾಡಿ, ಸಂಘಟಿತ ಶಕ್ತಿಯೇ ಸಮುದಾಯದ ನೈಜ ಸೌಧ. ಪ್ರತಿಯೊಬ್ಬರೂ ಭೇದ-ಭಾವ ಮರೆತು ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದರು.
ಸಭೆಯಲ್ಲಿ ಧರ್ಮ ಮತ್ತು ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸಲು ನಿಯಮಿತವಾಗಿ ಸತ್ಸಂಗ, ಧಾರ್ಮಿಕ ಪ್ರವಚನಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ತೀಮಾರ್ನಿಸಲಾಯಿತು.
ಸಮಾಜದ ಪ್ರತಿಯೊಂದು ಕುಟುಂಬವನ್ನು ತಲುಪಿ, ಆಂತರಿಕ ಭೇದ-ಭಾವಗಳನ್ನು ಮರೆತು ಸಮಾಜದಲ್ಲಿ ಪರಸ್ಪರ ಸಹೋದರತ್ವ ಹಾಗೂ ಸಮಗ್ರ ಏಕತೆಯನ್ನು ಬಲಪಡಿಸಲು ಮಠಾಧಿಪತಿಗಳು ಮಾರ್ಗದರ್ಶಕರಾಗಿ ನಿಲ್ಲಲು ನಿಶ್ಚಯಿಸಿದರು. ಇಂದಿನ ಯುವ ಪೀಳಿಗೆಗೆ ಸನಾತನ ಧರ್ಮದ ಮಹತ್ವ, ಸದಾಚಾರ, ಗುರು-ಹಿರಿಯರಲ್ಲಿ ಗೌರವ ಹಾಗೂ ಸಂಸ್ಕಾರಯುತ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಮಠಗಳ ಮೂಲಕ ನಿರಂತರ ಮಾರ್ಗದರ್ಶನ ನೀಡಲು ನಿರ್ಧರಿಸಲಾಯಿತು.
ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಕರಡಿಗವಿ ಮಠದ ಶ್ರೀ ಶಿವಯೋಗಿ ಶಿವಶಂಕರ ಸ್ವಾಮೀಜಿ, ಮಾರಕೊಂಡನಹಳ್ಳಿಯ ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ, ಕೊಲ್ಲಹಳ್ಳಿ ಮಠದ ಶ್ರೀ ವೈಭವ ವಿದ್ಯಾಶಂಕರ ಸ್ವಾಮೀಜಿ ಇದ್ದರು.