ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಗುರು ಬಾಬಾಸಾಹೇಬ ಅಜರೇಕರ ಹರಿಮಂದಿರದಲ್ಲಿ ಅಧಿಕ ಮಾಸ ನಿಮಿತ್ತ ಶುಕ್ರವಾರ ದಿವಸ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಪಾರಾಯಣ, ಸಂತರ ಭಕ್ತಿ ಭಜನೆ ಕಾರ್ಯಕ್ರಮ ನಡೆಯಿತು.
- ಕೆ.ಎ. ಉಪ್ಪಾರ ಹೇಳಿಕೆ
- ಮಹಾತ್ಮಗಾಂಧೀಜಿ ಪದವಿ ಪೂರ್ವ ಕಾಲೇಜಿಗೆ ಭೇಟಿ
ದೇವರಹಿಪ್ಪರಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಜೀವನೋಪಾಯ ರೂಪಿಸಿಕೊಳ್ಳುವ ಕಲಿಕೆಯಾಗಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಉಪ ನಿರ್ದೇಶಕ ಕೆ.ಎ. ಉಪ್ಪಾರ ಹೇಳಿದರು.
ಪಟ್ಟಣದ ಮಹಾತ ್ಮಗಾಂಧೀಜಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ನಂತರ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸಕ್ಕೆ ಮುಂದುವರಿಯುತ್ತಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು ಅರ್ಧಕ್ಕೆ ಶಾಲೆ ತೊರೆಯುತ್ತಿದ್ದಾರೆ. ಇಷ್ಟೋಂದು ಸೌಲಭ್ಯಗಳು ಸಿಗುತ್ತಿದ್ದರೂ, ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಿದೆ. ಅದಕ್ಕಾಗಿ ಗ್ರಾಮೀಣ ಭಾಗದ ಪ್ರತಿಯೊಬ್ಬ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಮುಗಿದ ತಕ್ಷಣ ಪಿಯಸಿಗೆ ದಾಖಲಾಗಿ, ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಕಾಲೇಜಿನ ವಾತಾವರಣ ನಿರ್ಮಿಸಿ ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣವಂತರಾಗಲು ಶಿಕ್ಷಣ ಸಂಸ್ಥೆ ಸಹಕರಿಸಬೇಕು ಎಂದರು.
ಸಂಸ್ಥೆ ಅಧ್ಯಕ್ಷ ನ್ಯಾಯವಾದಿ ಎ.ಎಂ. ತಾಂಬೋಳಿ ಮಾತನಾಡಿ, ಗ್ರಾಮೀಣ ಬಡ ಮಕ್ಕಳ ಸಲುವಾಗಿ ಕಳೆದ 12 ವರ್ಷಗಳಿಂದ ಸಂಸ್ಥೆ ಲಾಪೇಕ್ಷೆಯಿಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ಕಳೆದ ವರ್ಷದಿಂದ ಪದವಿಯವರೆಗೆ ನಡೆಯುತ್ತಿದ್ದು, ಈ ಸಲದಿಂದ ಪ್ರಾಥಮಿಕ, ಪ್ರೌಢಶಾಲೆ ಪ್ರಾರಂಭಿಸಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಸುಸಜ್ಜಿತ ಕಟ್ಟಡ, ಅಗತ್ಯ ಪಾಠೋಪಕರಣ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಸ್ಥೆ ವತಿಯಿಂದ ಅಧ್ಯಕ್ಷ ಎ.ಎಂ. ತಾಂಬೋಳಿ ಹಾಗೂ ಪ್ರಾಚಾರ್ಯ ನೌಶದ್ ವಾಲೀಕಾರ ಉಪ ನಿರ್ದೇಶಕರಿಗೆ ಸನ್ಮಾನಿಸಿದರು. ಮಹಮ್ಮದ ರಫೀಕ ಪಾನಪರೋಷ, ರೆಹಮಾನ ವಡ್ಡೋಡಗಿ, ಡಾ. ಎಚ್.ಎಂ. ಕಮತಗಿ, ಡಾ. ಎ.ಎನ್. ಚಟ್ಟರಕಿ, ಹಿದಾಯತ್ ಮಾಶಾಳಕರ ಮತ್ತಿತರರಿದ್ದರು.