ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಮಠದ ಆವರಣದಲ್ಲಿ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀಮಠದ ಒಡೆಯ ಕಲ್ಯಾಣದಯ್ಯ ಗದ್ದುಗೆಮಠ ಸ್ವಾಮೀಜಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗುರುಲಿಂಗಪ್ಪ ಸಜ್ಜನ, ಬಸವರಾಜ ಮಾನಶೆಟ್ಟಿ, ಬಸಲಿಂಗಪ್ಪಗೌಡ ಪಾಟೀಲ ಮತ್ತಿತರರಿದ್ದರು.
- ವೀರಘಂಟಯ್ಯ ಗದ್ದುಗೆಮಠ ಸ್ವಾಮೀಜಿ ಹೇಳಿಕೆ
- ಆಮಂತ್ರಣ ಪತ್ರಿಕೆ ಬಿಡುಗಡೆ
ಬ್ರಹ್ಮದೇವನಮಡು: ಸಂಪ್ರದಾಯ ಮತ್ತು ಶಿಸ್ತು ಪಾಲನೆಯೊಂದಿಗೆ ಕಾರ್ಯಕ್ರಮ ನಡೆಯಬೇಕು ಎಂದು ಶ್ರೀಮಠದ ಒಡೆಯ ಕಲ್ಯಾಣದಯ್ಯ ವೀರಘಂಟಯ್ಯ ಗದ್ದುಗೆಮಠ ಸ್ವಾಮೀಜಿ ಹೇಳಿದರು.
ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ -ಬ್ರಹ್ಮದೇವನಮಡು ಗ್ರಾಮದ ಶ್ರೀ ಕಲ್ಯಾಣದೇಶ್ವರ ಮಠದ ಆವರಣದಲ್ಲಿ ಕಲ್ಯಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗ್ರಾಮಸ್ಥರು ಹಾಗೂ ಭಕ್ತರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಜಾತ್ರೆಯು ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಧಾರ್ಮಿಕ ಸಾಂಸ್ಕೃತಿಕ ಹಬ್ಬವಾಗಬೇಕು ಎಂದರು.
ಏ. 9ರಿಂದ 19ರವರೆಗೆ ಪ್ರತಿದಿನ ಜೀವನ ದರ್ಶನ ಪ್ರವಚನ ನಡೆಯಲಿದೆ. ಏ. 14ರಂದು ಗ್ರಾಮದೇವಿಗೆ ಹಾಗೂ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಏ. 19ರಂದು ಬೆಳಗ್ಗೆ 10ಕ್ಕೆ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಧರ್ಮಸಭೆ ಹಾಗೂ ಪ್ರವಚನ ಮಂಗಲ ಕಾರ್ಯಕ್ರಮ ನಡೆಯಲಿದೆ.
ಏ. 20ರಂದು ಬೆಳಗ್ಗೆ ಲಿಂಗೈಕ್ಯ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ನಂತರ ಸಂಜೆ 6 ಗಂಟೆಗೆ ಶ್ರೀ ಕಲ್ಯಾಣದೇಶ್ವರ ಮಹಾರಥೋತ್ಸವ ಜರುಗಲಿದೆ ಎಂದು ತಿಳಿಸಿದರು.
ಚನ್ನಮಲ್ಲಯ್ಶ ಹಿರೇಮಠ, ಬಿ.ವೈ. ಅಮರಗೋಳ, ಗುರುಲಿಂಗಪ್ಪ ಸಜ್ಜನ, ಚಬಸವರಾಜ ಮಾನಶೆಟ್ಟಿ, ಮಲ್ಲಪ್ಪ ಮನಗೂಳಿ, ಸಿದ್ದನಗೌಡ ಪಾಟೀಲ, ಡಿ.ಬಿ. ಸೀತನೂರ, ಬಸವರಾಜ ಕಾಟಿ, ಗುರಣ್ಣ ಖ್ಶಾಡ, ಸೋಮಣ್ಣ ಕೊಡಂಗಲ್, ಬಸಲಿಂಗಪ್ಪಗೌಡ ಪಾಟೀಲ, ಗುರುಸಿದ್ದಪ್ಪ ಮನಗೂಳಿ, ಮಲ್ಲು ಕೆಂಭಾವಿ, ದೇವೆಂದ್ರ ಮನಗೂಳಿ, ಯಮನಪ್ಪ ಅಮರಗೋಳ ಮತ್ತಿತರರಿದ್ದರು.